Advertisements

ವಿಷ್ಣುದಾದಾ ಜೊತೆ ನಟಿಸಿದ್ದ ಈ ಪುಟ್ಟ ಹುಡುಗಿ ಈಗ ಸೂಪರ್ ಸ್ಟಾರ್ ನಟನ ಪತ್ನಿ ! ಈಗೇನು ಮಾಡುತ್ತಿದ್ದಾರೆ ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, 80 ಹಾಗೂ 90ರ ದಶಕದಲ್ಲಿ ಬಂದ ಚಿತ್ರಗಳು ಈಗಲೂ ಸಹ ಜನರ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಇನ್ನು ಈಗ ಕೂಡ ಟಿವಿಯಲ್ಲಿ ಆ ಸಿನಿಮಾಗಳನ್ನ ನೋಡಿದ್ರೂ ಸಹ ಮನಸ್ಸಿನಲ್ಲಿ ಏನೋ ಪುಳಕ ಉಂಟಾಗುತ್ತದೆ. ಇನ್ನು ಆಗಿನ ಕಾಲದಲ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದ ಬಾಲ ಪ್ರತಿಭೆಗಳಿಗೆ ತುಂಬಾ ಪ್ರಾಮುಖ್ಯತೆಯ ಜೊತೆಗೆ ಬೇಡಿಕೆಯು ಸಹ ಇತ್ತು. ಇನ್ನು ಅವರದ್ದೇ ಮುಖ್ಯ ಪಾತ್ರದಲ್ಲಿ ಚಿತ್ರಗಳನ್ನ ಮಾಡಿ ನಿರ್ಮಾಪಕರು ತಮ್ಮ ಜೋಬು ತುಂಬಿಸಿಕೊಳ್ಳುತ್ತಿದ್ದರು. ಅದರಲ್ಲಿ ಬೇಬಿ ಶ್ಯಾಮಲಿಯಂತೆ ಈ ಬಾಲ ನಟಿಯೂ ಕೂಡ ೧೯೮೬ರಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಳು.

Advertisements

ಇನ್ನು ಸಾಹಸಸಿಂಹ ವಿಷ್ಣುವರ್ಧನ ಅವರ ಜೊತೆ ನಟಿಸಿ ಕನ್ನಡಿಗರ ಮನಗೆದ್ದಿದ್ದ ಈ ಪುಟ್ಟ ಬಾಲಕಿ ಈಗ ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..ಈ ಜೀವ ನಿನಗಾಗಿ ಚಿತ್ರದಲ್ಲಿ ಡಾ.ವಿಷ್ಣುದಾದಾ ಅವರೊಂದಿಗೆ ನಟಿಸಿದ್ದ ಈ ನಟಿ ಆ ಚಿತ್ರದಲ್ಲಿ ತನ್ನ ತಾಯಿ ಇಹಲೋಕ ತ್ಯಜಿಸಿದ್ದರೂ ಸ್ವರ್ಗಕ್ಕೆ ಫೋನ್ ಮಾಡಿ ತನ್ನ ತಾಯಿ ಜೊತೆ ಮಾತನಾಡುತ್ತಾ ತಾಯಿಯನ್ನ ಮಮಕಾರವನ್ನ ಹುಡುಕುವ ಪಾತ್ರದಲ್ಲಿ ನಟಿಸಿದ್ದ ಈ ಬಾಲನಟಿ ಹೆಸರು ಶಾಲಿನಿ ಎಂದು. ಇನ್ನು ಕನ್ನಡದಲ್ಲಿ ಒಂದೇ ಚಿತ್ರದಲ್ಲಿ ನಟಿಸಿದ್ದ ಈ ಬಾಲನಟಿ ತನ್ನ ಅಭೂತಪೂರ್ವ ಅಭಿನಯದಿಂದ ಕನ್ನಡಿಗರ ಮನಸೂರೆಗೊಳ್ಳುವಲ್ಲಿ ಯಶಸ್ಸಿಯಾಗಿದ್ದಳು.

ಇನ್ನು ಈ ಜೀವ ನಿನಗಾಗಿ ಚಿತ್ರದಲ್ಲಿ ನಟಿಸಿದ್ದ ಬೇಬಿ ಶಾಲಿನಿ ತಾನು ಮಾತನಾಡುವ ಭಾಷೆ ಮಲಯಾಳಂ ಆಗಿದ್ದರೂ ಸಹ ಕನ್ನಡ ಭಾಷೆಯನ್ನ ಕಲಿತು ಈ ಚಿತ್ರದಲ್ಲಿ ಒಂದು ಹಾಡನ್ನ ತಾವೇ ಸ್ವತಃ ಕನ್ನಡದಲ್ಲಿ ಹಾಡಿದ್ದಾರೆ ಈ ಪ್ರತಿಭಾವಂತ ಬಾಲನಟಿ. ಇನ್ನು ಬೇಬಿ ಶಾಲಿನಿ ದೊಡ್ಡವರಾದ ಮೇಲೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದು, ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಬೆಳೆದರು. ಬಳಿಕ ತಮಿಳು ಚಿತ್ರದ ಸ್ಟಾರ್ ನಟ ಅಜಿತ್ ಅವರನ್ನ ಪ್ರೀತಿಸಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಟಿ ಶಾಲಿನಿ.

ಇನ್ನು ನಾವು ತಿಳಿಯಬೇಕಾದ ಮತ್ತೊಂದು ವಿಷಯ ಏನೆಂದರೆ, ಕನ್ನಡಿಗರಿಗೆ ಅಚ್ಚುಮೆಚ್ಚಿನ ಬಾಲನಟಿಯಾಗಿದ್ದ ಬೇಬಿ ಶ್ಯಾಮಲಿ ಇದೇ ನಟಿ ಶಾಲನಿಯವರ ತಂಗಿ. ಆದರೆ ಬೇಬಿ ಶ್ಯಾಮಲಿ ಬಲ ನಟಿಯಾಗಿದ್ದಾಗ ಇದ್ದ ಬೇಡಿಕೆ ದೊಡ್ಡವರಾದ ಮೇಲೆ ಸಿಗಲಿಲ್ಲ. ಅದರ ಅಕ್ಕ ಶಾಲಿನಿ ಮಾತ್ರ ದೊಡ್ಡವರಾದ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟರು. ಆದರೆ ತಾವು ಸ್ಟಾರ್ ನಟ ಅಜಿತ್ ಅವರ ಜೊತೆ ವಿವಾಹವಾದ ಮೇಲೆ ನಟನೆಯಿಂದ ದೂರ ಉಳಿದ್ರು. ಇನ್ನು ಶಾಲಿನಿ ಹಾಗೂ ಅಜಿತ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *