Advertisements

ಬೇಬಿ ಶಾಮಿಲಿ ತಂದೆ ಮಾಡಿದ ತಪ್ಪಿನಿಂದ ಶಾಮಿಲಿ ಪ್ರಾ’ಣಕ್ಕೆ ತೊಂದರೆ.. ಏನಾಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಒಂದು ಕಾಲದಲ್ಲಿ ಬೇಬಿ ಶಾಮಿಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಪೇ ಮಾಡುತ್ತಿದ್ದ ನಟಿ.. ಈ ನಟಿಯ ಬಾಳಲ್ಲಿ ನಿಜಕ್ಕೂ ಇದೀಗ ದೊಡ್ಡ ಬಿರುಗಾಳಿ ಎದ್ದಿದೆ ಅಂದರೆ ತಪ್ಪಾಗಲ್ಲ. ಸಣ್ಣ ವಯಸ್ಸಿನಲ್ಲಿರುವಾಗ ಆಟ ಆಡಿ ನಲಿಯಬೇಕಿದ್ದ ಮಗಳನ್ನ ಸ್ವಂತ ತಂದೆಯೇ ನಾಲ್ಕು ಗೋಡೆಗಳ ಮಧ್ಯೆ ಬಿಟ್ಟು.. ಶೂಟಿಂಗ್ ಬಳಿಕ ಮನೆ, ಇಲ್ಲಾ ಅಂದರೆ ಶಾಲೆ ಈ ಮೂರಕ್ಕೆ ಮಾತ್ರ ಸೀಮಿತವಾಗಿ ಮಾಡಿ.. ಬೇಬಿ ಶಾಮಿಲಿಯನ್ನು ಪಂಜರದ ಗಿಳಿಯನ್ನಾಗಿ ಮಾಡಿದ್ದರೆಂದರೆ ತಪ್ಪಾಗಾಲ್ಲ..

Advertisements

ಆದರೆ ಇದೀಗ ಶಾಮಿಲಿಯ ಬಗ್ಗೆ ದೊಡ್ಡ ಸುದ್ದಿಯೊಂದು ಬಂದಿದ್ದು ಯಾವುದೇ ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಪ್ರಪಂಚವನ್ನು ಬಿಟ್ಟು ಹೋಗುವ ದಾರಿ ಹಿಡಿದಿದ್ದರು. ಅರೇ ಬೇಬಿ ಶಾಮಿಲಿಗೆ ಏನಾಯಿತು ಏನಿದು ಸುದ್ದಿ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.. ಬಾಲನಟಿಯಾಗಿ ತುಂಬಾ ಪ್ರಸಿದ್ಧಿಯಾಗಿದ್ದ ಶಾಮಿಲಿ ಆಗಿನ ಕಾಲದಲ್ಲೇ ಎಲ್ಲಾ ಸ್ಟಾರ್ ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದರು. ಶಾಮಿಲಿಯ ಕಾಲ್ ಶೀಟ್ ಪಡೆಯಲೆಂದೇ ಕನ್ನಡ ಚಿತ್ರರಂಗ ಕೂಡ ಹಲವು ತಿಂಗಳ ಕಾಲ ಕಾದು ಕುಳಿತಿದ್ದ ಕಾಲವದು, ಆದರೆ ದೊಡ್ಡವಳಾದ ಮೇಲೆ ಈಕೆ ನಟಿಯಾಗಿ ನಟಿಸಿದ ಯಾವುದೇ ಚಿತ್ರಗಳು ಗೆಲುವನ್ನು ಕಾಣಲಿಲ್ಲ..

ಬದಲಾಗಿ ಎಲ್ಲಾ ಚಿತ್ರಗಳು ಸೋಲುಗಳನ್ನು ಕಂಡಿತು. ತೆಲುಗಿನ ಓಯ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಇವರಿಗೆ ಆ ಚಿತ್ರ ದೊಡ್ಡ ಬೇಸರವನ್ನು ತಂದುಕೊಟ್ಟಿತು.. ಕಾರಣ ಆ ಚಿತ್ರದ ದೊಡ್ಡ ಸೋಲು ಮತ್ತು ಶಾಮಿಲಿಯ ಲುಕ್ ಬಗ್ಗೆ ನೆ’ಗೆಟಿವ್ ಆಗಿ ಕಮೆಂಟ್ ಗಳು ಬರಲು ಶುರುವಾಗುತ್ತದೆ. ಓಯ್ ನಂತರ ಮೂರು ಚಿತ್ರಗಳಲ್ಲಿ ಕೂಡ ಶಾಮಿಲಿ ಅಭಿನಯಿಸುತ್ತಾರೆ‌.. ಆದರೆ ಅವೂ ಕೂಡ ಸಕ್ಸಸ್ ತಂದುಕೊಡಲಿಲ್ಲ. ಇದರಿಂದ ಬೇಸತ್ತ ಆಕೆ ಪ್ರಪಂಚವೇ ಬೇಡ ಎನ್ನುವಷ್ಟು ಡಿ’ಪ್ರೆಷನ್ ಗೆ ಹೋಗುತ್ತಾರೆ.. ತದನಂತರದಲ್ಲಿ ಶಿವಣ್ಣ ನಟನೆಯ ಕನ್ನಡ ಚಿತ್ರಕ್ಕೆ ಆಫರ್ ಕೂಡ ಬರುತ್ತದೆ.

ನಂತರ ತಮಿಳಿನ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ರು.. ತಮಿಳಿನ ಯಾವ ಚಿತ್ರವೂ ಆಕೆಯ ಕೈ ಹಿಡಿಯಲಿಲ್ಲ. ನಂತರ್ ಸೌತ್ ಸಿನಿಮಾ ರಂಗದಲ್ಲಿ ಶಾಮಿಲಿಯ ಬಗ್ಗೆ ಅ’ಪವಾದಗಳು ಕೇಳಿ ಬಂದವು. ಅದೇನೆಂದರೆ ಬೇಬಿ ಶಾಮಿಲಿ ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರೋದಿಲ್ಲ.. ಮಾತನಾಡಿಸಿದರೆ ಸರಿಯಾದ ಪ್ರತಿಕ್ರಿಯೆ ಕೂಡ ಕೊಡುತ್ತಿರಲಿಲ್ಲ. ಶಾಮಿಲಿ ನಡವಳಿಕೆ ಹಾಗೂ ಸೆಟ್ ನಲ್ಲಿ ಮಾಡುವ ಡಿಮ್ಯಾಂಡ್ ನಿಂದಾಗಿ ಹಲವು ಚಿತ್ರಗಳು ಆಕೆಯ ಕೈಜಾರಿ ಹೋದವು..

ಆಕೆಯ ನಡವಳಿಕೆ ಕಂಡು ಯಾರೂ ಚಿತ್ರಗಳಿಗೆ ಅವಕಾಶ ಕೊಡಲಿಲ್ಲ. ಬಾಲ ನಟಿಯಾಗಿ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಶಾಮಿಲಿ ದೊಡ್ಡವಳಾದ ಮೇಲೆ ನಟಿಸಿದ್ದು ಕೇವಲ ನಾಲ್ಕೇ ಚಿತ್ರ ಅಂದರೆ ನೀವು ನಂಬಲೇ ಬೇಕು.. ಈಗ ಸಿನಿಮಾಗಳೇ ಇಲ್ಲದೇ ಖಾಲಿ ಕೈಯಲ್ಲಿ ಕೂತಿದ್ದಾರೆ. ಇದರಿಂದ ನೊಂದ ಶಾಮಿಲಿ ಈ ಜಗತ್ತನ್ನೇ ಬಿಟ್ಟು ಹೋಗುವ ಕೆ’ಟ್ಟ ನಿರ್ದಾರವನ್ನು ಮಾಡಿದ್ದರು.. ಇದೀಗ ಕುಟುಂಬ ಶಾಮಿಲಿಗೆ ದೈರ್ಯ ತುಂಬಿದ್ದು ಆರಾಮಾಗಿ ಇದ್ದಾರೆ ಎಂದು ಹೇಳಲಾಗುತ್ತಿದೆ.. ಸ್ನೇಹಿತರೆ ಶಾಮಿಲಿಯ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆ ತಿಳಿಸಿ.