Advertisements

ಸೀರೆಯುಟ್ಟು ಬ್ಯಾಕ್ ಫ್ಲಿಪ್ ಜಂಪ್ ಮಾಡಿದ ಮಹಿಳೆ ! ವೈರಲ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು

Entertainment

ಎಲೆ ಮರೆ ಕಾಯಿಯಂತಿದ್ದ ಎಷ್ಟೋ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ಅದ್ಭುತ ವೇದಿಕೆಯಾಗಿವೆ. ಎಷ್ಟೋ ಪ್ರತಿಭೆಗಳ ಜೀವನವೇ ಬದಲಾಗಿ ಹೋಗಿದೆ. ಈ ಸೋಶಿಯಲ್ ಮಿಡಿಯಾಗಳಿಂದಾಗಿ ರಾತ್ರೋ ರಾತ್ರಿ ಫೇಮಸ್ ಆದವರು ನಮ್ಮ ನಡುವೆ ಬಹುತೇಕರಿದ್ದಾರೆ. ಈಗ ಮಹಿಳೆಯೊಬ್ಬರ ವಿಡಿಯೋವೊಂದು ಇಂಟೆರ್ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ. ಮಹಿಳೆಯೊಬ್ಬರ ಪಲ್ಟಿ ವಿಡಿಯೋ ಒದಗಿದ್ದು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ

Advertisements

ಹೌದು, ಸೀರೆಯುಟ್ಟ ಮಹಿಳೆಯೊಬ್ಬರು ಸೀರೆಯಲ್ಲಿಯೇ ತುಂಬಾ ಸುಲಭವಾಗಿ ಫ್ಲಿಪ್ ಜಂಪ್ ಮಾಡಿದ್ದಾರೆ. ಗಾಳಿಯಲ್ಲಿ ಸೀರೆಯುಟ್ಟ ಮಹಿಳೆಯ ಪ್ಲಿಪ್ ಜಂಪ್ ಮಾಡುವ ವಿಡಿಯೋ ಸ್ಲೋ ಮೋಷನ್ ಆಗಿದ್ದು, ಸಂಗೀತಾ ವಾರಿಯರ್ ಎಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಶೂ ಇಲ್ಲದೆ, ಸರಿಯಾದ ಜಾಗ ಇಲ್ಲದೆ ಪ್ಲಿಪ್ ಜಂಪ್ ಮಾಡಿರುವ ಮಹಿಳೆಯ ಟ್ಯಾಲೆಂಟ್ ಅದ್ಭುತ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಫ್ಲಿಪ್ ಜಂಪ್ ಮಡಿದ ಮಹಿಳೆ ಟಿಕ್ ಟಾಕ್ ವಿಡಿಯೋಗಳನ್ನ ಮಾಡುವ ಮಿಲಿ ಸರ್ಕಾರ್ ಎಂದು ಹೇಳಲಾಗಿದೆ. ಇನ್ನು ಸೀರೆಯಲ್ಲಿ ನಿರಾಯಾಸವಾಗಿ ಈ ಮಹಿಳೆ ಫ್ಲಿಪ್ ಜಂಪ್ ಮಾಡಿದ್ದೂ, ನೆಟ್ಟಿಗರು ಸೂಪರ್ ವುಮೆನ್ ಎಂದು ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಹಲ್ ಚಲ್ ಎಬ್ಬಿಸಿರುವ ಈ ವಿಡಿಯೋ ಇಂಟರ್ನೆಟ್ ನಲ್ಲಿ ಅತೀ ವೇಗವಾಗಿ ವೈರಲ್ ಆಗುತ್ತಿದ್ದು ಮಹಿಳೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.