Advertisements

KGF ಬಳಿಕ ಪರ ಭಾಷಿಕರು ತಿರುಗಿ ನೋಡುವಂತೆ ಮಾಡಿದ ಭಜರಂಗಿ 2.

Cinema

ಕನ್ನಡಿಗರು ತುಂಬಾ ದಿನಗಳಿಂದ ‘ಭಜರಂಗಿ 2’ ಸಿನಿಮಾ ಟೀಸರ್ ನೋಡಲು ಕಾಯುತಿದ್ದರು. ಈ ಸಿನಿಮಾದ ನಿರ್ದೇಶಕರಾದ ಎ. ಹರ್ಷ ಅವರಿಂದ ಈ ಟೀಸರ್ ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣನ ಹುಟ್ಟು ಹಬ್ಬದಂದು ‘ಭಜರಂಗಿ 2’ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳು ಈ ಟೀಸರ್ ಅನ್ನು ನೋಡಿ ಫುಲ್ ಫಿದಾ ಆಗಿದ್ದರೆ. ಅಷ್ಟೇ ಅಲ್ಲದೆ ಪರಭಾಷೆಯವರು ಕೂಡ ಈ ಟೀಸರ್ ಅನ್ನು ನೋಡಿ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ.

Advertisements

ಶಿವರಾಜ್ ಕುಮಾರ್ ಹಾಗೂ ಎ.ಹರ್ಷ ಅವರ ಕಾಂಬಿನೇಷನ್ ನಲ್ಲಿ ಭಜರಂಗಿ ಪಾರ್ಟ್ 1 ಚಿತ್ರ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿತ್ತು ಹೀಗಾಗಿ ಸಿನಿಮಾ ಪ್ರಿಯರಿಗೆ ಭಜರಂಗಿ 2 ನಲ್ಲೂ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ತಕ್ಕಹಾಗೆ ಈ ಚಿತ್ರದಲ್ಲಿ ಮೇಕಿಂಗ್ ಕೂಡ ಇದೆ. ಅದ್ದೂರಿಯಾದ ಸೆಟ್, ಭರ್ಜರಿ ಆ್ಯಕ್ಷನ್ ಗಳ ದೃಶ್ಯಗಳಿಂದ ಮೂಡಿರುವ ಭಜರಂಗಿ 2 ಟೀಸರ್ ನೋಡಿ ಕಣ್ಣು ಕುಕ್ಕುತ್ತಿದೆ.

ಕೇಜಿಫ್ ರೀತಿ ಎಲ್ಲಾ ಭಾಷೆಗೂ ಡಬ್ ಮಾಡುವಂತಹ ಗುಣಮಟ್ಟದಲ್ಲಿ ಭಜರಂಗಿ 2 ಸಿದ್ಧವಾಗಿದೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ. ಈಗ ಅಕ್ಕಪಕ್ಕದ ನೆರೆ ರಾಜ್ಯಗಳ ಸಿನಿಮಾ ನಿರ್ಮಾಪಕರಿಂದ ನಿರ್ದೇಶಕ ಎ.ಹರ್ಷಅವರಿಗೆ ಫೋನ್ ಕರೆಗಳು ಬರುತ್ತಿವೆ. ಟಾಲಿವುಡ್ ನಿರ್ಮಾಪಕರು ಸಹ ಕರೆ ಮಾಡಿ ಈ ಚಿತ್ರ ತೆಲುಗಿನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆಯಾ ಎಂದು ಕೇಳುತಿದ್ದಾರಂತೆ.

ಶಿವರಾಜ್ ಕುಮಾರ್ ಅವರ ಜೊತೆ ಭಾವನಾ, ಶ್ರುತಿ, ಲೋಕಿ ಮುಂತಾದವರರು ಚೆನ್ನಾಗಿ ಅವರ ಅವರ ಪಾತ್ರಗಳನ್ನು ನಿಭಾಹಿಸಿದ್ದಾರೆ. ಜಯಣ್ಣ ಭೋಗೇಂದ್ರ ನಿರ್ಮಾಣದ ಈ ಸಿನಿಮಾಗೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ ಅವರು. ಈ ಹಿಂದೆ ಪಾರ್ಟ್ ಒಂದರಲ್ಲೂ ಸಹ ಅರ್ಜುನ್ ಜನ್ಯ ಅವರೇ ಸಂಗೀತವನ್ನು ನೀಡಿದ್ದು ಚೆನ್ನಾಗಿ ಮೂಡಿ ಬಂದಿತ್ತು. ಈಗ ಭಜರಂಗಿ 2 ಸಿನಿಮಾದ ಹಾಡುಗಳ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟಿದೆ. ಎಲ್ಲಾ ಭಾಷೆಯಲ್ಲೂ ಸಿನಿಮಾ ಪ್ರಿಯರಿಗೆ ಅನ್ವಯ ಹಾಗುವ ರೀತಿ ಈ ಕಥೆಯ ಚಿತ್ರದಲ್ಲಿ ಇರುವುದರಿಂದ ಪರ ಭಾಷೆಗಳಲ್ಲೂ ರಿಲೀಸ್ ಆಗುವ ಸಾಧ್ಯತೆ ಇದೆ. ಇದರ ಬಗ್ಗೆ ಚಿತ್ರತಂಡದಿಂದ ಸ್ವಷ್ಟ ಮಾಹಿತಿ ಸಿಗಬೇಕಾಗಿದೆ.