Advertisements

ಅತೀ ಸುಲಭವಾಗಿ ಓವೆನ್ ಇಲ್ಲದೆ ಬೇಕರಿ ಶೈಲಿಯಲ್ಲಿ ನಿಮ್ಮ ಮನೆಯಲ್ಲೇ ಬನ್ ಮಾಡಿ..ಮಾಡುವ ವಿಧಾನ ಹೇಗೆಂದು ನೋಡಿ..

Kannada Mahiti

ನಮಸ್ತೇ ಸ್ನೇಹಿತರೇ, ಓವೆನ್ ಬಳಸದೆ, ಮೊಟ್ಟೆಯನ್ನ ಬಳಸದೇ, ಗ್ಯಾಸ್ ಸ್ಟವ್ ಮೇಲೆ ಇಡ್ಲಿ ಪಾತ್ರೆಯಲ್ಲಿ ಯಮ್ಮಿ ಯಮ್ಮಿ ಬೇಕರಿ ಶೈಲಿಯ ಬನ್ ಹೇಗೆ ಮಾಡೋದು ಅಂತ ತಿಳಿಯೋಣ ಬನ್ನಿ..ಮೊದಲಿಗೆ ಒಂದು ಸಣ್ಣ ಬೌಲ್ ನ್ನ ತೆಗೆದುಕೊಂಡು ಅದರಲ್ಲಿ ಅರ್ಧ ಕಪ್ ನಷ್ಟು ಹಾಲನ್ನ ಹಾಕಿ. ಉಗುರುಬೆಚ್ಚಗೆ ಹಾಗುವಂತೆ ಹಾಲನ್ನ ಕಾಯಿಸಿ. ಬಳಿಕ ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಸಕ್ಕರೆ, ಒಂದು ಟೀ ಸ್ಪೂನ್ ನಷ್ಟು ಯೀಸ್ಟ್ ನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ..ಬಳಿಕ ಹತ್ತು ನಿಮಿಷಗಳ ಕಾಲ ಬೆಚ್ಚಗಿರೋಜಾಗದಲ್ಲಿ ಎತ್ತಿಡಿ.

ಬಳಿಕ ಮತ್ತೊಂದು ಬೌಲ್ ತೆಗೆದುಕೊಂಡು ಒಂದು ಕಪ್ ಮೈದ ಹಿಟ್ಟನ್ನ ಹಾಕಿ. ಗೋದಿ ಹಿಟ್ಟನ್ನು ಸಹ ಬಳಸಬಹುದು. ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ. ಒಂದು ಟೇಬಲ್ ಸ್ಪೂನ್ ಬೆಣ್ಣೆ ಹಾಕಿ. ಬೆಣ್ಣೆ ಹಾಕೋದ್ರಿಂದ ಬನ್ ತುಂಬಾ ಸಾಫ್ಟ್ ಆಗಿ ಬರುತ್ತೆ. ಬಳಿಕ ಯೀಸ್ಟ್ ಅನ್ನ ಹಾಕಿ ಮಿಸ್ಕ್ ಮಾಡಿರೋ ಹಾಲನ್ನ ಈ ಹಿಟ್ಟಿನಲ್ಲಿ ಹಾಕಿ. ಒಂದು ವೇಳೆ ಅಳತೆಗೆ ತಕ್ಕಂತೆ ಹಾಕಿಲ್ಲ ಅಂದ್ರೆ ಹಿಟ್ಟು ಸ್ವಲ್ಪ ನೀರಾಗಿ ಆಗುತ್ತೆ. ಆಗ ಸ್ವಲ್ಪ ಹಿಟ್ಟನ್ನ ಹಾಕಿ ಮಿಕ್ಸ್ ಮಾಡಿ. ಇನ್ನು ಹಿಟ್ಟು ನೀರಾಗಿಯೂ ಇರಬಾರದು, ಗಟ್ಟಿಯಾಗಿಯೂ ಇರಬಾರದು. ಹಿಟ್ಟು ತುಂಬಾ ಸಾಫ್ಟ್ ಆಗಿ ಇರಬೇಕು. ಬಳಿಕ ಏನೆಲ್ಲಾ ಮಾಡಬೇಕು ಎಂಬ ಹೆಚ್ಚಿನ ಮಾಹಿತಿಗೆ ಈ ವೀಡಿಯೊ ನೋಡಿ..