Advertisements

ಎಸ್.ಪಿ ಅವರು ಡಾಕ್ಟರ್ಸ್, ನರ್ಸ್ಗಳಿಗೆ ಪೇಪರ್ ನಲ್ಲಿ ಬರೆದುಕೊಟ್ಟಿದ್ದು ಏನು? ಬಾಲಸುಬ್ರಮಣ್ಯಂ ಅರೋಗ್ಯ ಸ್ಥಿತಿ ಈಗ ಹೇಗಿದೆ ಗೊತ್ತಾ?

News

ನಮಸ್ತೆ ಸ್ನೇಹಿತರೆ, ಕನ್ನಡ ಸೇರಿದಂತೆ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕ ಎಂದರೆ ಅದು ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಮಣ್ಯಂ ಅವರು. ತಮ್ಮ ಧ್ವನಿಯ ಮೂಲಕ ಹಾಡುಗಳಿಗೆ ರೂಪವನ್ನು ತಂದಿರುವ ಬಾಲಸುಬ್ರಮಣ್ಯಂ ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಏನೋ ಉಲ್ಲಾಸ. ಇನ್ನೂ ಇವರು ತಮ್ಮ ಅಧಿಕೃತ ಫೇಸ್ಬುಕ್ ಪೇಜ್ ನಲ್ಲೂ ಸಹ ಹಾಡುಗಳನ್ನು ಹಾಡುತ್ತ ಎಲ್ಲರನ್ನು ರಂಜಿಸುತ್ತಿರುತ್ತಾರೆ.

Advertisements

ಆದರೇ ಇತ್ತೀಚಿನ ದಿನಗಳಲ್ಲಿ ಬಾಲಸುಬ್ರಮಣ್ಯಂ ಅವರ ಅರೋಗ್ಯ ಏರುಪೇರಾಗಿ ಚೆನೈ ನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಕೋವಿಡ್ ಬಂದಿದೆ ಎಂದು ದೃಢ ಪಟ್ಟಿದೆ. ತದನಂತರ ಅವರ ಅರೋಗ್ಯ ತೀರ ಕುಸಿದಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಇನ್ನೂ ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿತಿಯನ್ನು ನೋಡಿ ಸ್ಯಾಂಡಲ್ವುಡ್ ಇಂದ ಬಾಲಿವುಡ್ ವರೆಗಿನ ನಟರು, ಗಾಯಕರು, ಅಭಿಮಾನಿಗಳು ಅವರು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಇನ್ನೂ ಚೆನೈ ನ ಅಸ್ಸ್ವತ್ರೆಯಲ್ಲಿ ಚಿಕೆತ್ಸೆಯನ್ನು ಪಡೆಯುತ್ತಿರುವ ಬಾಲಸುಬ್ರಮಣ್ಯಂ ಅವರನ್ನು ಆಸ್ವತ್ರೆಯಲ್ಲಿ ಜಾಗರೂಕತೆಯಿಂದ, ಹಾಗೂ ಪ್ರೀತಿಯಿಂದ ನೋಡಿಕೊಳ್ಳುತಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಡಾಕ್ಟರ್ಸ್ ಹಾಗೂ ನರ್ಸ್ಗಳಿಗೆ, ಬಾಲಸುಬ್ರಮಣ್ಯಂ ಅವರು ವಿಶೇಷವಾಗಿ ನಮನವನ್ನು ಸಲ್ಲಿಸಿದ್ದಾರೆ. ಹೌದು ಸ್ನೇಹಿತರೆ ಪೆನ್ನು ಹಿಡಿದು ಪೇಪರ್ ಮೇಲೆ ಎಲ್ಲರಿಗು ಲವ್ ಯು ಎಂದು ಭಾವುಕರಾಗಿ ಬರೆದು ಕೊಟ್ಟಿದ್ದಾರೆ. ಇನ್ನು ಪೇಪರ್ ನಲ್ಲಿ ಬಾಲಸುಬ್ರಮಣ್ಯಂ ಬರೆದಿರುವುದನ್ನ ನೋಡಿದ ಡಾಕ್ಟರ್ಸ್ ಹಾಗೂ ನರ್ಸ್ಗಳು ಸಹ ಭಾವುಕರಾಗಿದ್ದರೆ.

ಎರಡು ದಿನಗಳ ಹಿಂದೆ ನನ್ನ ತಂದೆಯವರು ಏನೋ ಬರೆದು ಏಳಲು ಪ್ರಯತ್ನ ಪಟ್ಟರು. ಆ ಸಮಯದಲ್ಲಿ ಅವರಿಗೆ ತೀರಾ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಅವರಿಗೆ ಪೆನ್ನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮತ್ತೆ ಶುಕ್ರವಾರ ಪೆನ್ನು ಹಿಡಿದು ಎಲ್ಲರಿಗೂ ಲವ್ ಯು ಎಂದು ತಿಳಿಸಿ ಜೊತೆಗೆ ಕೆಲವು ಡಾಕ್ಟರ್ಸ್ ಹೆಸರುಗಳನ್ನೂ ಸಹ ಬರೆದಿದ್ದರೆ ಎಂದು ಎಸ್.ಪಿ ಪುತ್ರ ಚರಣ್ ಅವರು ಹೇಳಿದ್ದಾರೆ. ಇನ್ನೂ ಬಾಲಸುಬ್ರಮಣ್ಯಂ ತಾವು ಹಾಡಿರುವ ತಮ್ಮ ಫೇವರಿಟ್ ಹಾಡುಗಳನ್ನು ಹಾಡಲು ಪ್ರಯತ್ನಿಸುತ್ತಾರಂತೆ.

ಆದರೆ ವೈದ್ಯರೊಬ್ಬರು ಬಾಲಸುಬ್ರಮಣ್ಯಂ ಅವರ ಅರೋಗ್ಯ ಸ್ಥಿತಿ ಇನ್ನು ಕ್ರಿಟಿಕಲ್ ಹಾಗೆ ಇದೆ, ವೆಂಟಿಲೇಟರ್ ನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸ್ನೇಹಿತರೆ ನಮ್ಮೆಲ್ಲರನ್ನು ಅದೆಷ್ಟೋ ಹಾಡುಗಳಿಂದ ರಂಜಿಸಿರುವ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಬೇಗ ಗುಣಮುಖರಾಗಲಿ ನಮನ್ನು ಇನ್ನಷ್ಟು ತಮ್ಮ ದ್ವನಿಯ ಹಾಡಿನ ಮೂಲಕ ರಂಜಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.