Advertisements

ಸಿನಿಮಾ ಸ್ಪೂರ್ತಿಯಿಂದ ಭಿಕ್ಷುಕನನ್ನೇ ಚುನಾವಣೆಗೆ ನಿಲ್ಲಿಸಿದ್ದ ಹಳ್ಳಿಯ ಯುವಕರು ! ಈಗ ಏನಾಗಿದೆ ಗೊತ್ತಾ ?

Kannada Mahiti

ನಮಸ್ತೇ ಸ್ನೇಹಿತರೇ, ಸಿನಿಮಾಗಳು ಮತ್ತು ಸಿನಿಮಾ ನಟರನ್ನ ಅಭಿಮಾನಿಗಳು ಅನುಕರಣೆ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಅಚ್ಚರಿ ಎಂದರೆ ಇತ್ತೀಚೆಗಷ್ಟೇ ನಡೆದ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಆ ಗ್ರಾಮದ ಯುವಕರು ವಿಶೇಷ ವ್ಯಕ್ತಿಯೊಬ್ಬನನ್ನ ಗ್ರಾಮಪಂಚಾಯತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದರು.

Advertisements

ಹೌದು, ನಟ ವಿಷ್ಣುವರ್ಧನ್ ಅವರು ಅಭಿನಯಿಸಿದ್ದ ಸಿಂಹಾದ್ರಿಯ ಸಿಂಹ ಚಿತ್ರವನ್ನ ನೀವೆಲ್ಲಾ ನೋಡಿರುತ್ತೀರಿ. ಆ ಸಿನಿಮಾದಲ್ಲಿ ಬರುವ ದೃಶ್ಯವೊಂದರಲ್ಲಿ ಭಿಕ್ಷುಕನೊಬ್ಬನನ್ನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಸನ್ನಿವೇಶವೊಂದಿದೆ. ಇದರಿಂದಲೇ ಪ್ರೇರಣೆಗೊಂಡ ನಂಜನಗೂಡು ತಾಲ್ಲೂಕಿಗೆ ಸೇರಿದ ಬೊಕ್ಕಹಳ್ಳಿ ಎಂಬ ಗ್ರಾಮದ ಹುಡುಗರೆಲ್ಲಾ ಸೇರಿ ಊರೂರು ತಿರುಗಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನನ್ನ ಗ್ರಾಮಪಂಚಾಯತಿ ಚುನಾವಣೆಗೆ ನಿಲ್ಲಿಸಿದ್ದರು. ಇನ್ನು ಈಗಾಗಲೇ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಭಿಕ್ಷುಕ ಅಂಕನಾಯಕ ಅವರ ಫಲಿತಾಂಶ ಏನಾಗಿದೆ ಗೊತ್ತಾ?

ಅಂಕನಾಯಕ ಅವರ ಪ್ರತಿಸ್ಪರ್ಧಿಯಾಗಿ ನಿಂತಿದ್ದ ನಾಗೇಂದ್ರ ಎನ್ನುವರು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಭಿಕ್ಷುಕ ಅಂಕನಾಯಕನನ್ನ ಸೋಲಿಸಿದ್ದಾರೆ. ಆದರೆ ಭಿಕ್ಷುಕ ಸೋತಿದ್ದರೂ ಅವರ ಹವಾ ಏನೂ ಕಡಿಮೆಯಾಗಿಲ್ಲ. ಏಕೆಂದರೆ ನಾಗೇಂದ್ರ ಗೆದ್ದಿದ್ದರೂ ಅಂಕನಾಯಕನ ಮುಂದೆ ಸೋತಂತಾಗಿದೆ. ಹೌದು, ಗೆಲ್ಲುವ ಕುದುರೆ ಎಂದು ಹೇಳಲಾಗಿದ್ದ ನಾಗೇಂದ್ರ ಅವರಿಗೆ 439 ಮತಗಳು ಬಂದಿದ್ದರೆ, ಭಿಕ್ಷುಕ ಅಂಕನಾಯಕ ಅವರಿಗೆ 311 ಮತಗಳು ಬಿದ್ದಿವೆ.

ವಿಶೇಷ ಚೇತನರಾಗಿದ್ದ ಭಿಕ್ಷುಕ ಅಂಕನಾಯಕ ಅವರು ಒಪ್ಪೊತ್ತಿನ ಊಟಕ್ಕಾಗಿ ಊರೂರು ಅಲೆದು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದು ಅದೇ ಗ್ರಾಮದ ಎಲ್ಲಾದರೂ ಒಂದು ಕಡೆ ವಾಸ ಮಾಡುತ್ತಿದ್ದರು. ಇನ್ನು ಕಳೆದ ಚುನಾವಣೆಗಳಲ್ಲಿ ಆಯ್ಕೆಗೊಂಡ ಸದಸ್ಯರು ಊರಿಗಾಗಿ ಯಾವುದೇ ಕೆಲಸಗಳ ಮಾಡದ ಕಾರಣ ರೋಸಿಹೋಗಿದ್ದ ಆ ಗ್ರಾಮದ ಯುವಕರೆಲ್ಲಾ ಸೇರಿ ಭಿಕ್ಷುಕ ಚುನಾವಣೆಗೆ ನಿಲ್ಲಿಸಿದ್ದರು. ನೋಡಿ ಸಿನಿಮಾಗಳಿಂದ ಯಾವ ರೀತಿಯ ಪ್ರೇರಣೆ ಪಡೆಯಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ.