Advertisements

ಮಹಿಳೆಗಾಗಿ ಭಿಕ್ಷುಕ ಮಾಡಿದ ಕೆಲಸ ನೋಡಿ! ನಿಜಕ್ಕೂ ಆಶ್ಚರ್ಯ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ರೋಡಿನಲ್ಲಿ ಹೋಗುವಾಗ ಭಿಕ್ಷೆ ಬೇಡುವವರು ಒಬ್ಬರಾ ಇಬ್ಬರಾ ನೂರಾರು ಜನರು ಇರುತ್ತಾರೆ. ಅದರಲ್ಲಿ ಕೆಲವರು ದುಡ್ಡು ಕೇಳಿ ತೊಂದರೆ ಕೊಟ್ಟರೆ.. ಇನ್ನೂ ಕೆಲವರು ಸುಮ್ಮನಿರುತ್ತಾರೆ. ಕೇವಲ ನಾವು ದುಡ್ಡು ಕೊಟ್ಟರೆ ತೆಗೆದುಕೊಳ್ಳುತ್ತಾರೆ.. ಮತ್ತು ಕೆಲವು ಬಾರಿ ನಾವು ಒಂದು ರೂಪಾಯಿ ಸಹ ದಾನ ಮಾಡದೇ ಹೊರಟು ಹೋಗುತ್ತೇವೆ. ಆದರೆ ಓರ್ವ ಮಹಿಳೆ ಭಿಕ್ಷುಕನಿಗೆ ಅನ್ನ ನೀಡಿ ಅವನ ಹಸಿವು ನೀಗಿಸುತ್ತಾಳೆ.. ಆದರೆ ಆ ಬಿಕ್ಷುಕ ಮಾಡಿದ ಕೆಲಸ ನೋಡಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ. ಈ ಘಟನೆ ನಡೆದಿರುವುದು ಆಂದ್ರ ಪ್ರದೇಶದ ಕಡಪ ಜಿಲ್ಲೆಯ ರಾಜಂ ಪೇಟೆ ಎಂಬ ಗ್ರಾಮದಲ್ಲಿ.

Advertisements

ಓರ್ವ ಭಿಕ್ಷುಕ ಪ್ರತಿದಿನ ಬಿಕ್ಷೆ ಕೇಳುತ್ತಾ ಬೀದಿ ಬೀದಿ ಸುತ್ತಾಡುತ್ತಿದ್ದ.. ಅದರಲ್ಲಿ ಬರುವ ಹಣ ಅಥವಾ ಆಹಾರದಿಂದ ತನ್ನ ಜೀವನವನ್ನು ನಡೆಸುತ್ತಿದ್ದ. ಈಗೆ ಒಂದು ದಿನ ಒಬ್ಬರ ಮನೆಯಲ್ಲಿ ಭಿಕ್ಷೆ ಕೇಳಲು ಹೋದ.. ಆಗ ಮಹಿಳೆಯೊಬ್ಬರು ಹೊಟ್ಟೆ ತುಂಬಾ ಊಟವನ್ನು ನೀಡಿ 11 ರುಪಾಯಿಯನ್ನು ದಾನ ಮಾಡುತ್ತಾಳೆ. ನಂತರ ಅಲ್ಲಿಂದ ಎದ್ದು ಬೇರೆ ಮನೆಯ ಕಡೆಗೆ ನಡೆದುಕೊಂಡು ಹೊರಟು ಹೋಗುತ್ತಾನೆ.. ಆಗ ಆ ಮನೆಯಿಂದ ಜೋರಾಗಿ ಶಬ್ದ ಕೇಳಿಸಿತು. ಹೋಗಿ ನೋಡಿದಾಗ ಆ ಮಹಿಳೆ ತಲೆ ಸುತ್ತಿ ಬಿದ್ದಿದ್ದಳು..‌ ಇದನ್ನು ಕಂಡ ಭಿಕ್ಷುಕ ಕೂಡಲೇ ಅಕ್ಕ ಪಕ್ಕದ ಮನೆಯವರನ್ನು ಕರೆಸಿ ವಿಚಾರ ತಿಳಿಸುತ್ತಾನೆ.. ಆಗ ಮಹಿಳೆಯನ್ನು ಆಸ್ವತ್ರೆಗೆ ದಾಖಲಿಸುತ್ತಾರೆ..

ಆ ಮಹಿಳೆ ಕೂಡ ಚೇತರಿಸಿಕೊಳ್ಳುತ್ತಾಳೆ. ನಂತರ ಆ ಮಹಿಳೆಯ ಪತಿ ಭಿಕ್ಷುಕನನ್ನು ಕರೆಸಿ ಹಣದ ಸಹಾಯವನ್ನು ಮಾಡಲು ಮುಂದಾಗುತ್ತಾನೆ.. ಆಗ ಭಿಕ್ಷುಕ ಬೇಡ ಸ್ವಾಮಿ ಆಕೆ ನನಗೆ ಹೊಟ್ಟೆ ತುಂಬಾ ಊಟವನ್ನು ಕೊಟ್ಟು 11 ರೂಪಾಯಿ ಹಣವನ್ನು ನೀಡಿದ್ದಾರೆ.. ಆ ಋಣವನ್ನಷ್ಟೇ ನಾನು ತೀರಿಸಲು ಪ್ರಯತ್ನ ಪಟ್ಟಿದ್ದೇನೆ ಎಂದು ಈ ಭಿಕ್ಷುಕ ಹೇಳಿದ್ದಾರೆ. ಇದನ್ನು ಆಸ್ವತ್ರೆಯಲ್ಲೇ ಇದ್ದ ಓರ್ವ ವ್ಯಕ್ತಿ ವಿಷಯ ತಿಳಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿದ.. ಈ ಕಲಿಯುಗದಲ್ಲಿ ಅವಕಾಶ ಸಿಕ್ಕರೆ ಸಾಕು ದರೊಡೆ, ಸುಲಿಗೆ ಮಾಡುವವರ ಮದ್ಯೆ ಭಿಕ್ಷುಕರಲ್ಲೂ ಸಹ ಇಂತಹ ಒಳ್ಳೆಯ ಜನರಿದ್ದಾರೆ ಅಂದರೆ ಅದು ಆಶ್ಚರ್ಯವೇ ಸರಿ.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.