ನಮಸ್ತೆ ಸ್ನೇಹಿತರೆ, ಒಂದೇ ಒಂದು ಚಿಕ್ಕ ಘಟನೆಯಿಂದ ಒಬ್ಬ ಭಿಕ್ಷುಕ ಲಕ್ಷಾಧಿಪತಿಯಾಗುತ್ತಾನೆ.. ಅದು ಹೇಗೆ ಅಂತ ತಿಳಿಕೋಬೇಕಾ ಹಾಗಾದರೆ ಈ ಸ್ಟೋರಿಯನ್ನು ನೋಡಿ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ.. ಆ ಗ್ರಾಮದಲ್ಲಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಒಬ್ಬ ಭಿಕ್ಷುಕನ ಜೀವನ ಒಂದೇ ಒಂದು ಚಿಕ್ಕ ಘಟನೆಯಿಂದ ಬದಲಾಗಿಬಿಡುತ್ತದೆ.. ಅಷ್ಟೇ ಅಲ್ಲ ಒಬ್ಬ ತಂದೆ ಹಾಗೂ ಅವನ ಮಗ ಈ ಭಿಕ್ಷುಕನನ್ನ ತುಂಬಾನೆ ಹುಡುಕುತ್ತಿದ್ದಾರೆ. ಇನ್ನೂ ಇದಕ್ಕೆ ಕಾರಣ ಏನು ಎಂದರೆ! ಒಬ್ಬ ಮಗ ತಂದೆಗೆ ಗೊತ್ತಿಲ್ಲದೇ ಅವರ ತಂದೆ ಮಲಗುವ ಆಸಿಗೆ ಹರಿದು ಹೋಗಿರುತ್ತೆ ಅಂತ ಅದನ್ನ ಭಿಕ್ಷುಕನಿಗೆ ಕೊಟ್ಟು ಹೊಸ ಹಾಸಿಗೆಯನ್ನ ತರುತ್ತಾರೆ..

ಆದರೆ ಅವರ ತಂದೆ ಮನೆಗೆ ಬಂದು ಆ ಹಾಸಿಗೆ ಕಾಣದೇ ಇರುವುದನ್ನು ನೋಡಿದಾಗ ಮಗನ ಮೇಲೆ ಕೋಪ ಮಾಡಿಕೊಂಡು ಹಾಸಿಗೆ ಏನಾಯಿತು ಎಂದು ಕೇಳುತ್ತಾನೆ.. ಆಗ ಮಗ ಹಾಸಿಗೆ ಹರಿದು ಹೋಗಿದ್ದರಿಂದ ಅದನ್ನ ಭಿಕ್ಷುಕನಿಗೆ ಕೊಟ್ಟು ಹೊಸ ಹಾಸಿಗೆ ತಂದಿದ್ದೇನೆ ಎಂದು ಹೇಳುತ್ತಾನೆ. ಇದನ್ನ ಕೇಳಿ ಶಾಕ್ ಆದ ತಂದೆ ತಕ್ಷಣ ಭಿಕ್ಷುಕನನ್ನ ಹುಡುಕಲು ಪ್ರಾರಂಭ ಮಾಡುತ್ತಾರೆ.. ಯಾಕೆಂದರೆ ಅವರ ತಂದೆ ಇಡೀ ಜೀವನ ಪೂರ್ತಿ ದುಡಿದು ಉಳಿಸಿದ ಹಣವನ್ನು ಅದರಲ್ಲೇ ಇಟ್ಟಿದ್ದಾರಂತೆ. ಅದು ಎಷ್ಟು ಗೊತ್ತಾ ಬರೋಬ್ಬರಿ 40 ಲಕ್ಷ..

ಇನ್ನೂ ಈ ವಿಷಯವನ್ನು ಕೇಳಿ ಮನೆಯವರೆಲ್ಲರೂ ಆ ಭಿಕ್ಷುಕನನ್ನು ಹುಡುಕಲು ಪ್ರಾರಂಭಿಸುತ್ತಾರೆ. ಪೋಲಿಸ್ ಕಂ’ಪ್ಲೇಂಟ್ ಸಹ ಕೊಡುತ್ತಾರೆ. ಮೂರು ದಿನ ಆದಮೇಲೆ ಆ ಭಿಕ್ಷುಕ ಸಿಗುತ್ತಾನೆ.. ಆದರೆ ಆ ಭಿಕ್ಷುಕ ಹೇಳುತ್ತಾನೆ ನಾನು ಆ ಹಾಸಿಗೆಯನ್ನು ಇನ್ನೊಬ್ನ ಭಿಕ್ಷುಕನಿಗೆ ಮಾರಿಬಿಟ್ಟೆ ಅಂತ.. ಇನ್ನೂ ಆ ಭಿಕ್ಷುಕ ಮಾರಿದನೋ ಅಥವಾ ಅವರೇ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ನೋಡಿದರಲ್ವಾ ಸ್ನೇಹಿತರೆ ಒಂದು ಚಿಕ್ಕ ಘಟನೆ ನಿಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತೆ.. ಇನ್ನೂ ಈ ಘಟನೆ ಬಗ್ಗೆ ನೋಡಿ ನಿಮಗೆ ಏನು ಅನಿಸಿತು ಎಂದು ತಿಳಿಸಿ.