ನಮಸ್ತೇ ಸ್ನೇಹಿತರೆ, ನಾವು ಪ್ರತಿನಿತ್ಯ ನಗರಗಳಲ್ಲಿ ಓಡಾಡುವಾಗ ವಿಚಿತ್ರ ವಿಚಿತ್ರ ಜನರನ್ನು ನೋಡುತ್ತಿರುತ್ತೇವೆ.. ಒಂದು ಹೊತ್ತಿನ ಊಟ ಇಲ್ಲದೆ, ತೊಡಲು ಬಟ್ಟೆ ಇಲ್ಲದೆ ಮಲಗಲು ಒಂದು ಸಣ್ಣ ಮನೆಯಿಲ್ಲದೆ ಎಷ್ಟೋ ಜನ ರಸ್ತೆಗಳ ಬದಿಯಲ್ಲಿ ಬಿಕ್ಷೆ ಬೇಡುತ್ತಿರುತ್ತಾರೆ.. ಈ ಭಿಕ್ಷುಕರು ಹುಟ್ಟಿದ ಕೂಡಲೇ ಯಾರು ಭಿಕ್ಷೆ ಬೇಡಲು ಬರುವುದಿಲ್ಲ.. ಇವರ ಜೀವನದಲ್ಲಿ ಏನಾದರೂ ಒಂದು ದು’ರ್ಘಟನೆ ನಡೆದು ಭಿಕ್ಷೆ ಬೇಡುವವರಾಗಿರುತ್ತಾರೆ.. ಭಿಕ್ಷುಕರು ಮನುಷ್ಯರೇ.. ಇವರು ಭಿಕ್ಷೆ ಬೇಡುತ್ತಾರೆ ಎಂಬ ಕಾರಣಕ್ಕೆ ಇವರನ್ನು ಅಸಹ್ಯವಾಗಿ ನೋಡಬಾರದು..

ಇನ್ನೂ ಇಲ್ಲಿ ಒಬ್ಬ ಯುವತಿ ಭಿಕ್ಷೆ ಬೇಡುತ್ತಿದ್ದ ಒಬ್ಬ ಅಜ್ಜನ ಮುಂದೆ ಅಸಹ್ಯವಾಗಿ ನಡೆದುಕೊಂಡಿದ್ದಾರೆ.. ಆದರೆ ಬದಲಿಗೆ ಭಿಕ್ಷುಕ ತಾತ ಯುವತಿಗೆ ಏನು ಮಾಡಿದ ಎಂದು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಾ.. ಈ ಘ’ಟನೆ ಇತ್ತೀಚಿಗೆ ಮುಂಬೈ ಮಹಾನಗರದಲ್ಲಿ ನಡೆದಿದೆ.. ಮುಂಬೈ ನಗರದಲ್ಲಿ ಒಂದು ಸಣ್ಣ ಬಾಡಿಗೆ ಮನೆ ಮಾಡಿಕೊಂಡು ರಿಂಕಿ ಎಂಬ ಯುವತಿ ವಾಸಮಾಡುತ್ತಿದ್ದಾರೆ.. ರಿಂಕಿಯವರು ಡಿಗ್ರಿ ಪದವಿಯನ್ನು ಮುಗಿಸಿ ಒಂದು ಕಂಪನಿಯಲ್ಲಿ ಡೇಟಾ ಎಂಟ್ರಿ ಮಾಡುವ ಕೆಲಸಕ್ಕೆ ಹೋಗುತ್ತಿದ್ದರು.. ರಿಂಕಿ ಇರುವ ಬಾಡಿಗೆ ಮನೆಯಿಂದ ಆಪಿಸ್ ಕೇವಲ 10 ಕಿಲೋಮೀಟರ್ ದೂರವಿದ್ದ ಕಾರಣ ದಿನನಿತ್ಯ ಬಸ್ ನಲ್ಲೇ ಹೋಗುತ್ತಿದ್ದರು.. ಈಗೆ ಒಂದು ದಿನ ರಿಂಕಿ ಆಪಿಸ್ ಗೆ ಹೋಗಲು ಬಸ್ ಸ್ಟಾಂಡ್ ಗೆ ಬರುತ್ತಾರೆ..

ಇನ್ನೂ ಕೆಲಸದ ಸಮಯವಾಗಿದ್ದರಿಂದ ಆ ರಸ್ತೆಯಲ್ಲಿ ವಿಪರೀತ ವಾಹನಗಳು ತುಂಬಾ ಓಡಾಡುತ್ತಿದ್ದವು.. ರಿಂಕಿಯವರು ಬಸ್ ಸ್ಟಾಂಡ್ ಗೆ ಹೋಗಲು ಒಂದು ಮೇನ್ ರೋಡ್ ಕ್ರಾಸ್ ಮಾಡಬೇಕಿತ್ತು.. ಆದರೆ ವಾಹನಗಳು ಹೆಚ್ಚಾಗಿದ್ದರಿಂದ ರಸ್ತೆ ದಾಟಲು ಅಲ್ಲೇ ಕಾಯುತ್ತಿದ್ದಳು.. ಇದೇ ಸಮಯಕ್ಕೆ ಒಬ್ಬ ಭಿಕ್ಷುಕ ಬಂದು ರಿಂಕಿಯವರಿಗೆ ಹಣ ಕೇಳುತ್ತಾರೆ.. ಭಿಕ್ಷುಕ ನೋಡಲು ಹರಿದ ಬಟ್ಟೆ ಹಾಕಿಕೊಂಡು ವಿಕಾರವಾಗಿ ಕಾಣಿಸುತ್ತಿದ್ದರಿಂದ ರಿಂಕಿಯವರು ಸ್ವಲ್ಪ ದೂರ ಸರಿದು ನನ್ನ ಹತ್ತಿರ ಹಣವಿಲ್ಲ ಹೋಗಿ ಎಂದು ಹೇಳುತ್ತಾರೆ.. ಆಗ ಈ ಭಿಕ್ಷುಕ ಹೊಟ್ಟೆ ತುಂಬಾ ಹಸಿವಾಗುತ್ತಿದೆ ಒಂದು ಟೀ ಬ್ರೆಡ್ ಆದರೂ ಕೊಡಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ..

ರಿಂಕಿ ಎಷ್ಟು ಬಾರಿ ಹಣವಿಲ್ಲ ದೂರ ಹೋಗಿ ಎಂದರು ಆ ಭಿಕ್ಷುಕ ಮಾತ್ರ ಅಲ್ಲಿಂದ ಹೋಗಲೇ ಇಲ್ಲ.. ಆಗ ರಿಂಕಿಯವರು ಕೋಪದಲ್ಲಿ ನಿಮಗೆ ಕೈ ಕಾಲು ಗಟ್ಟಿ ಇದೆ ದುಡಿದು ತಿನ್ನೊಕ್ಕೆ ಆಗಲ್ವಾ ಹೋಗಿ ಸುಮ್ಮನೆ ಎಂದು ಸಿಕ್ಕಾಪಟ್ಟೆ ಆ ಅಜ್ಜನನ್ನು ಬೈಯುತ್ತಾರೆ.. ನಂತರ ರಸ್ತೆಯಲ್ಲಿ ವಾಹನಗಳು ಕಡಿಮೆ ಆದಾಗ ಅರ್ಜೆಂಟ್ ನಲ್ಲಿ ರಿಂಕಿಯವರು ರಸ್ತೆ ದಾಟಲು ಮುಂದಾಗುತ್ತಾರೆ.. ಹತ್ತಿರದಲ್ಲೇ ಲಾರಿಯೊಂದು ತುಂಬಾ ವೇಗವಾಗಿ ಬರುತ್ತಿರುವುದನ್ನು ರಿಂಕಿಯವರು ಗಮನಿಸಲೇ ಇಲ್ಲಾ.. ಅಲ್ಲಿದ್ದ ಜನಗಳು ಲಾರಿ ಬರುತ್ತಿದೆ ಎಂದು ಜೋರಾಗಿ ಕೂಗಿ ಕರೆಯುತ್ತಾರೆ ಆದರೆ ರಿಂಕಿಯವರಿಗೆ ಅದು ಕೇಳಿಸಲೇ ಇಲ್ಲಾ..

ಇನ್ನೇನು ಲಾರಿ ಸ್ವಲ್ಪ ದೂರದಲ್ಲೇ ಬರುವಷ್ಟರಲ್ಲಿ ಭಿಕ್ಷುಕ ಅಜ್ಜ ರಿಂಕಿಯವರ ಕೈ ಹಿಡಿದು ಹಿಂದಕ್ಕೆ ಕರೆದುಕೊಳ್ಳುತ್ತಾರೆ.. ಆಗ ರಿಂಕಿಯವರು ಆ ಲಾರಿ ವೇಗವಾಗಿ ಬಂದದ್ದನ್ನು ನೋಡಿ ಜೀವ ಬದುಕಿತು ಎಂದು ಅನಿಸಿದೆ.. ಇನ್ನೂ ತನ್ನನ್ನು ಕಾಪಾಡಿದ ಭಿಕ್ಷುಕ ಅಜ್ಜನಿಗೆ ನಾನು ನಿಮ್ಮನ್ನು ತುಂಬಾ ಅವಮಾನ ಮಾಡಿದೆ ಆದರೆ ನನ್ನ ಜೀವವನ್ನ ಕಾಪಾಡಿದ್ದೀರಾ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ರಿಂಕಿಯವರು ಕೇಳಿಕೊಳ್ಳುತ್ತಾರೆ.. ನಂತರ ಅಲ್ಲೇ ಪಕ್ಕದಲ್ಲಿ ಇದ್ದ ಹೋಟೆಲ್ ನಲ್ಲಿ ಅಜ್ಜನಿಗೆ ಊಟವನ್ನು ಕೊಡಿಸಿ ಖರ್ಚಿಗೆ ಹಣವನ್ನು ಕೊಡುತ್ತಾರೆ.. ಸ್ನೇಹಿತರೆ ಈ ನೈಜ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಮುಗಿಸಿ.