Advertisements

ಹಣ ಡ್ರಾ ಮಾಡಲು ಬ್ಯಾಂಕಿಗೆ ಬಂದ ಭಿಕ್ಷುಕಿ.. ಅಕೌಂಟ್ ನಲ್ಲಿ ಇದ್ದ ಬ್ಯಾಲೆನ್ಸ್ ನೋಡಿ ಬೆಚ್ಚಿಬಿದ್ದ ಸಿಬ್ಬಂದಿ, ಎಷ್ಟಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಪ್ರತಿನಿತ್ಯವೂ ದುಡಿದರು ಜೀವನ ಪೂರ್ತಿ ಸಾಲ ಮಾಡಿಕೊಂಡು ಚಿಂತೆಯಲ್ಲೇ ಸಾ’ಯು’ವ ಪರಿಸ್ಥಿತಿ ಇದೆ. ಆದರೆ ಭಿಕ್ಷುಕರು ಮಾತ್ರ ಯಾವುದೇ ಕೆಲಸ ಮಾಡದೆ ಕೋಟ್ಯಾಂತರ ಹಣ ಗಳಿಸುತ್ತಿರುವುದು ಜನರಲ್ಲಿ ಹಲವು ಯೋಚನೆಯನ್ನು ಹುಟ್ಟು ಹಾಕಿದೆ.. ಏಕೆಂದರೆ ಒಂದು ರೂಪಾಯಿಗಾಗಿ ಭಿಕ್ಷೆ ಬೇಡುವ ಜನರು ಹೇಗೆಲ್ಲ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ ಎನ್ನುವುದು ಆಶ್ಚರ್ಯಕರ ಸಂಗತಿ ಆಗಿದೆ. ಅದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬರು ಭಿಕ್ಷುಕಿಯ ಬ್ಯಾಂಕ್ ಖಾತೆ ನೋಡಿದರೆ ದಂ’ಗಾಗು’ವುದಂತು ಗ್ಯಾರಂಟಿ.. ಕಳೆದ ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ರೈಲ್ವೇ ಹಳಿ ದಾಟುವಾಗ ಸಾ’ವನ್ನ’ಪ್ಪಿದ್ದ ಭಿಕ್ಷುಕಿಯ ಮನೆಯಲ್ಲಿ ಒಟ್ಟು ಹತ್ತು ಲಕ್ಷ ಅಧಿಕ ಹಣ ಪತ್ತೆಯಾದ ಬೆನ್ನಲ್ಲೇ..

Advertisements

ಅದೇ ರೀತಿ ಮತ್ತೊಂದು ಪ್ರ’ಕ’ರಣ ಬೆಳಕಿಗೆ ಬಂದಿದೆ. ಅರಬ್‌ ದೇಶದ ಲೆಬನಾನ್ ನಲ್ಲಿ ಈ ಘ’ಟನೆ ನಡೆದಿದ್ದು ಇಲ್ಲೊಬ್ಬ ಭಿಕ್ಷುಕಿಯ ಖಾತೆಯಲ್ಲಿ ಬರೋಬ್ಬರಿ 5 ಕೋಟಿ 62 ಲಕ್ಷ ರೂಪಾಯಿ ಪತ್ತೆಯಾಗಿದೆ.. ಲೆಬನಾನ್ ನ ಜಮ್ಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಹಣವಿಟ್ಟಿದ್ದ ಭಿಕ್ಷುಕಿ ಈಗ ಕೋಟ್ಯಾಧಿಪತಿ. ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಆ ಭಿಕ್ಷುಕಿಗೂ ಸಹ ಗೊತ್ತೇ ಇರಲಿಲ್ಲ ಎಂಬ ವಿಷಯ ಇನ್ನೊಂದು ವಿಶೇಷ.. ಈ ಹಿನ್ನೆಲೆಯಲ್ಲಿ ಆ ಬ್ಯಾಂಕ್ ನ ಅಧಿಕಾರಿಗಳು ಬ್ಯಾಂಕ್‌ ನ ಗ್ರಾಹಕರ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಂಡಿದ್ದಾರೆ.

ಈ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ ಗೆ ಚೆಕ್ ಬಂದಾಗ ಪರಿಶೀಲಿಸಿದ ಸಿಬ್ಬಂದಿಗೆ ಆಕೆಯ ಖಾತೆಯಲ್ಲಿ ಸುಮಾರು 6 ಕೋಟಿ ರೂಪಾಯಿ ಇರುವ ವಿಷಯ ತಿಳಿದು ಶಾ’ಕ್ ಆಗಿದ್ದಾರೆ.. ಆಸ್ವತ್ರೆಯ ಬಳಿ ದಿನನಿತ್ಯ ಭಿಕ್ಷೆ ಬೇಡುತ್ತಿರುವ ಈ ಮಹಿಳೆ ಅಲ್ಲಿನ ಸಿಬ್ಬಂದಿಗೆ ಬಹಳ ಪರಿಚಿತಳು. ಸುಮಾರು 10 ವರ್ಷಗಳಿಂದ ಆಕೆ ಅಲ್ಲೇ ಭಿಕ್ಷೆ ಬೇಡುತ್ತಿರುವುದು ವಿಶೇಷ.. ತನ್ನ ಹೆಸರಿನಲ್ಲಿ ಇದ್ದ ಹಣವನ್ನು ಬೇರೆ ಖಾತೆಗೆ ಕಳುಹಿಸಲು ಚೆಕ್ ನೀಡಿದ್ದಳು. ಆಗ ಬ್ಯಾಂಕ್ ಸಿಬ್ಬಂದಿ ಆಕೆ ಕೋಟ್ಯಾಧಿಪತಿ ಎಂಬುವ ವಿಷಯ ಗೊತ್ತಾಗಿದೆ.. ಇನ್ನೂ ಸೆಪ್ಟೆಂಬರ್ 30 ರಂದು ಆಕೆ ಬ್ಯಾಂಕ್ ಗೆ ನೀಡಿರುವ ಚೆಕ್ ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ನಮ್ಮ ದೇಶದಲ್ಲಿಯೂ ಕೂಡ ಕೆಲವು ಶ್ರೀಮಂತ ಭಿಕ್ಷುಕರು ಹಾಗಾಗ ಸುದ್ದಿಯಲ್ಲಿ ಇರುತ್ತಾರೆ..