Advertisements

ನೀವು ಕೂಡ ಸ್ವಂತ ಬೇಕರಿ ಮಾಡಬಹುದು.. ಆ ಸುವರ್ಣಾವಕಾಶ ಇಲ್ಲಿದೆ ನೋಡಿ!

Kannada Mahiti

ಪ್ರಿಯ ಓದುಗರೇ ಇತ್ತೀಚಿನ ದಿನಗಳಲ್ಲಿ ಮನೆಯ ತಿಂಡಿಗಳಿಗಿಂತ ನಮಗೆ ಬೇಕರಿ ತಿಂಡಿಗಳು ಹೆಚ್ಚು ರುಚಿಕರ ಅನಿಸುತ್ತವೆ. ಇದೀಗ ಗಲ್ಲಿ ಗಲ್ಲಿಗೂ ಒಂದು ಬೇಕರಿಯನ್ನು ಕಾಣಬಹುದು. ಅಷ್ಟರಮಟ್ಟಿಗೆ ನಮ್ಮ ಜನಾಂಗ ಬೇಕರಿ ತಿಂಡಿಗಳಿಗೆ ಎಡಿಟ್ ಆಗಿದೆ. ಬೆಳಗ್ಗೆ ಮತ್ತು ಸಂಜೆ ಚಹಾದ ಜೊತೆಗೆ ನಮಗೆ ಬೇಕರಿ ಐಟಮ್ಸ್ ಇರಲೇಬೇಕು. ಹೀಗಿರುವಾಗ ನಾವು ಯಾಕೆ ಸ್ವಂತವಾಗಿ ಇದೆ ಬೇಕರಿ ಉದ್ಯೋಗ ಮಾಡಬಾರದು ಎನ್ನುತ್ತಿದ್ದೀರಾ? ನಿಮಗೂ ಬೇಕರಿ ಉದ್ಯೋಗ ಮಾಡುವ ಆಸೆ ಇದ್ದರೆ ನಾವು ಈಗ ಹೇಳುವುದನ್ನು ಸರಿಯಾಗಿ ಓದಿಕೊಳ್ಳಿ.

[widget id=”custom_html-3″]

ಸ್ವಂತ ಬೇಕರಿ ಉದ್ಯೋಗ ಪ್ರಾರಂಭಿಸಿ. ಲಾಭ ಪಡೆಯಿರಿ ಅದು ಹೇಗೆ ಮಾಡುವುದು ಅಂತ ನಾವು ಹೇಳ್ತೀವಿ.
ಬೇಕರಿ ತಿಂಡಿಗಳನ್ನು ತಯಾರಿಸಲು ಅದಕ್ಕೆ ವೈಜ್ಞಾನಿಕ ತನ್ನದೇ ಆದ ಒಂದು ವಿಧಾನವಿದೆ. ಹೀಗೆ ತಯಾರಿಸಿದರೆ ಮಾತ್ರ ಬೇಕರಿ ತಿಂಡಿಗಳಿಗೆ ರುಚಿ, ಸ್ವಾದ, ಉತ್ತಮ ಬಣ್ಣ ಜೊತೆಗೆ ಉತ್ತಮ ಗುಣಮಟ್ಟ ಇರುತ್ತದೆ. ಹಾಗೂ ಬೇಗನೆ ಕೆಡುವುದಿಲ್ಲ. ಹೇಗೆ ಮಾಡಬೇಕು..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಎಲ್ಲಿ ಹೇಳಿ ಕೊಡುತ್ತಾರೆ.. ಸ್ವಂತ ಬೇಕರಿ ಉದ್ಯೋಗ ಪ್ರಾರಂಭಿಸಲು ಇಚ್ಚೆ ಇದ್ದವರು ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು. ಈ ಕುರಿತು ತರಬೇತಿ ಪಡೆಯಬೇಕು. ಆ ತರಬೇತಿ ಪಡೆಯಲು ಬೇರೆ ರಾಜ್ಯಕ್ಕೇನು ಹೊೀಗಬೇಕಿಲ್ಲ. ಈ ತರಬೇತಿಯನ್ನು ಇದೀಗ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಪ್ರಾರಂಭೀಸಿದ್ದಾರೆ. ಇದು ಭಾರತದಲ್ಲಿ ಮೂರನೇ ಸ್ಥಾನ ಪಡೆದುಕೊಂಡರೆ, ದಕ್ಷಿಣ ಭಾರತದಲ್ಲಿ ಇದಕ್ಕೆ ಮೊದಲ ಸ್ಥಾನವಿದೆ. ಅಷ್ಟರಮಟ್ಟಿಗೆ ಇಲ್ಲಿ ತರಬೇತಿ ಪಡೆದವರು ಬೇಕರಿ ಉದ್ಯೋಗವನ್ನು ಸ್ವಂತವಾಗಿ ಪ್ರಾರಂಭಿಸಿ ಲಾಭದಲ್ಲಿ ಇದ್ದಾರೆ. ಹಾಗೆ ಕೃಷಿ ವಿಶ್ವ ವಿದ್ಯಾನಿಲಯ ಹೆಚ್ಚು ಬೆಳೆ ಬೆಳೆಯುವ ಬಗ್ಗೆ ಹಾಗೂ ಬೆಳೆದ ಪದಾರ್ಥಗಳಿಗೆ ಮೌಲ್ಯ ವರ್ಧನೆಯನ್ನು ಸಹ ಮಾಡುತ್ತದೆ. ಕೃಷಿ ವಿಶ್ವ ವಿದ್ಯಾನಿಲಯ ಪ್ರತಿ ಹಂತದಲ್ಲಿಯೂ ಒಂದು ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಕೃಷಿ ವಿಶ್ವ ವಿದ್ಯಾನಿಲಯವು ಒಬ್ಬ ಉದ್ದಿಮೆದಾರನನ್ನಾಗಿ ಮಾಡುತ್ತಿದೆ. ಬೇಕರಿ ತಿನಿಸುಗಳ ತರಬೇತಿ ಪಡೆದ ಅನೇಕರು ಇದೀಗ ಸ್ವಂತ ಉದ್ದಿಮೆ ಮಾಡುತ್ತಿದ್ದು ಹೆಚ್ಚಿನ ಲಾಭಗಳನ್ನು ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ಸುಮಾರು ಹದಿನಾಲ್ಕು ವಾರದ ತರಬೇತಿ ಪಡೆದರೆ ಬೇಕರಿ ಉದ್ಯಮಿಯಾಗಿ ತಯಾರು ಆಗುತ್ತಾನೆ.

[widget id=”custom_html-3″]

ಈ ತರಬೇತಿಗೆ ಬರುವ ಮುನ್ನ ಬೇಕರಿಯ ಯಾವುದೇ ನಾಲೆಜ್ ಇಲ್ಲದಿದ್ದರೂ ತರಬೇತಿ ಪಡೆದ ನಂತರ ಪರಿಪೂರ್ಣ ಬೇಕರಿ ಉದ್ಯಮಿಯಾಗಿ ಹೊರಗೆ ಹೋಗುತ್ತಾನೆ. ಅಷ್ಟು ಸರಿಯಾದ, ಅಚ್ಚುಕಟ್ಟಾಗಿ ಇಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಕೆಲವರು ಇಡೀ ದಿನ ತರಬೇತಿಗೆ ಬರುವುದಿಲ್ಲ. ಎನ್ನುವರಿಗೆ ಅರ್ಧ ದಿನದ ತರಬೇತಿ ಇರುತ್ತದೆ. ಹಾಗೆಯೇ ಕೆಲವರು ಮೂರು ತಿಂಗಳು ತರಬೇತಿ ಬರಲು ಸಾಧ್ಯವಿಲ್ಲ ಎಂದು ಹೇಳಿದವರಿಗೆ ಒಂದುವರೆ ತಿಂಗಳ ತರಬೇತಿ ನೀಡುತ್ತಾರೆ. ಗುಣ ಮಟ್ಟದ ತರಬೇತಿ ಇರುತ್ತದೆ ತರಬೇತಿ ಕೇಂದ್ರದಲ್ಲಿ ಹೆಚ್ಚು ಮಹಿಳೆಯರೇ ಇರುತ್ತಾರೆ. ಇವರು ತರಬೇತಿ ನಂತ್ರ ಸ್ವಂತ ಉದ್ಯೋಗ ಪ್ರಾರಂಭಿಸಿದ್ದಾರೆ. ಇದು ಗುಣ ಮಟ್ಟದ ತರಬೇತಿ ಆಗಿರುವದರಿಂದ ಬೇಡಿಕೆಯು ಹೆಚ್ಚು ಇರುತ್ತದೆ.

[widget id=”custom_html-3″]

ಬೇಕರಿ ಉದ್ದಿಮೆ ಮಾಡಲು ಸುಮಾರು 2 ಲಕ್ಷ ದಿಂದ 5 ಲಕ್ಷದವರೆಗೆ ವೆಚ್ಚ ಆಗುತ್ತದೆ. ಜಾಗವನ್ನು ಬಿಟ್ಟು ಬೇಕರಿ ಸಾಮಗ್ರಿಗಳು ಎಲ್ಲ ಬರುತ್ತದೆ. ಬೇಡಿಕೆಯ ಆಧಾರದ ಮೇಲೆ ಸಾಮಗ್ರಿಗಳ ಖರ್ಚು ಬರುತ್ತದೆ. ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಬೇಕರಿಯ ತಿಂಡಿಗಳಲ್ಲಿ ಬದಲಾವಣೆ ಆಗುತ್ತದೆ. ಮೈದಾ ಪ್ರೋಡೇಕ್ಟ್ ಗಳು ಹೆಚ್ಚಾಗಿ ಇರುವುದರಿಂದ ಖರ್ಚು ಹೆಚ್ಚು. ಖರ್ಚು ಬಗ್ಗೆ ತರಬೇತಿಯಲ್ಲೂ ಹೇಳುತ್ತಾರೆ. ಮೊದಲು ಬೇಕರಿ ಮಾಡುವ ರೂಲ್ಸ್ ಗಳನ್ನು ಹೇಳಿ ಕೊಡುತ್ತಾರೆ. ಸಾಧ್ಯವಾದಷ್ಟು ಬೇಕರಿ ತಿಂಡಿಗಳಲ್ಲಿ ಆರೋಗ್ಯಯುತ ವಾದ ತಿಂಡಿಯನ್ನು ಸಿದ್ದ ಮಾಡಬೇಕು. ನೀವು ಕೂಡಾ ಇದೆ ಈ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದು ಸ್ವಂತ ಬೇಕರಿ ಉದ್ಯೋಗವನ್ನು ಪ್ರಾರಂಭಿಸಬಹುದು. ಮನೆಯಲ್ಲಿ ಬೇಕರಿ ತಿಂಡಿಗಳನ್ನು ತಯಾರಿಸಿದರೆ ನಿಮಗೆ ಹೆಚ್ಚು ಲಾಭಕರ ವಾಗುತ್ತದೆ..