Advertisements

ಒಡೆದ ಹಾಲನ್ನ ಬಿಸಾಡೋ ಮೊದಲು ಇಲ್ಲಿ ನೋಡಿ ! ಅದರಿಂದ ಏನೆಲ್ಲಾ ಮಾಡಬಹುದು ಗೊತ್ತಾ ?

Kannada Mahiti

ಸ್ನೇಹಿತರೇ, ಕೆಟ್ಟು ಹೋಗಿದ್ದರೂ ಮರು ಬಳಕೆ ಮಾಡಬಹುದಾದ ಎಷ್ಟೋ ಆಹಾರ ಪದಾರ್ಥಗಳನ್ನ ನಾವು ಬಿಸಾಡಿಬಿಡುತ್ತೇವೆ. ಆದರೆ ಅಂತಹ ಆಹಾರಪದಾರ್ಥಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ತಿಳಿದಾಗ ಮಾತ್ರ ಅವನ್ನ ಉಪಯೋಗಿಸಲು ಇಷ್ಟಪಡುತ್ತಾರೆ. ಅಂತದ್ದರಲ್ಲಿ ಒಂದು ಒಡೆದು ಹೋಗಿರುವ ಹಾಲು. ಯಾವುದೇ ಕಾಲವಾಗಿದ್ದರೂ ಒಂದಲ್ಲಾ ಒಂದು ಕಾರಣಕ್ಕೆ ಹಾಲು ಒಡೆಯುವುದು ಸಾಮಾನ್ಯ. ಬಹುತೇಕರು ಒಡೆದ ಹಾಲನ್ನ ಬಿಸಾಡಿಬಿಡುತ್ತಾರೆ. ಆದರೆ ಅದೇ ಒಡೆದ ಹಾಲಿನಲ್ಲಿ ಪ್ರೊಟೀನ್, ಪೋಷಕಾಂಶಗಳು ಹೆಚ್ಚಾಗಿವೆ ಎಂಬುದರ ಬಗ್ಗೆ ಎಷ್ಟೋ ಜನಕ್ಕೆ ತಿಳಿದಿಲ್ಲ. ಹಾಗಾದ್ರೆ ಒಡೆದ ಹಾಲಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ನೋಡೋಣ ಬನ್ನಿ..

Advertisements

ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚಾಗಿರುವ ಕಾರಣ, ದೇಹದಲ್ಲಿನ ರೋಗನಿರ್ಧಕ ಶಕ್ತಿ ವರ್ಧನೆ ಮಾಡುವುದಲ್ಲದೆ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇನ್ನು ಒಡೆದ ಹಾಲನ್ನ ಆಗಾಗ ಸೇವನೆ ಮಾಡುತ್ತಿದ್ದಾರೆ ಕೊಲೆಸ್ಟ್ರಾಲ್ ಮಟ್ಟವನ್ನ ನಿಯಂತ್ರಣ ಮಾಡಬಹುದಾಗಿದೆ. ಇನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲೂ ಸಹ ಇದು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಚಪಾತಿ ಅಥ್ವಾ ರೊಟ್ಟಿ ಇಟ್ಟನ್ನ ಕಲಿಸುವ ಸಮಯದಲ್ಲಿ ಒಡೆದ ಹಾಲನ್ನ ಹಾಕುವುದರಿಂದ ಹಿಟ್ಟು ಮೃದುವಾಗುವುದರ ಜೊತೆಗೆ ಚಪಾತಿಯ ರುಚಿಯು ಸಹ ಹೆಚ್ಚಾಗುತ್ತದೆ.

ಇನ್ನು ನಿಮ್ಮ ಚರ್ಮದ ತ್ವಚೆಯನ್ನ ಕಾಪಾಡಿಕೊಳ್ಳುವಲ್ಲಿ ಕೂಡ ಒಡೆದ ಹಾಲು ಉಪಯೋಗಕಾವಾಗಿದೆ. ಒಡೆದ ಹಾಲಿಗೆ ಹರಿಶಿನ, ಗಂಧದ ಪುಡಿ ಮತ್ತು ಕಡಲೆ ಇಟ್ಟನ್ನ ಸೇರಿಸಿ ಪೇಸ್ಟ್ ರೀತಿ ಮಾಡಿ ಮುಖದ ಮೇಲೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗಲಿದೆ. ಇನ್ನು ಒಡೆದ ಹಾಲಿನಿಂದ ಸಿಹಿ ತಿಂಡಿಯನ್ನು ಕೂಡ ಮಾಡಬಹುದಾಗಿದೆ. ಹೇಗೆಂದರೆ..ಒಡೆದ ಹಾಲನ್ನ ಪಾತ್ರೆಯೊಂದಕ್ಕೆ ಹಾಕಿ ಎಷ್ಟು ಬೇಕೋ ಅಷ್ಟು ಮಾತ್ರ ಸಕ್ಕರೆ ಹಾಕಿ. ನೀರು ಆವಿಯಾಗುವವರೆಗೂ ಕಾಯಿಸಬೇಕು. ಇನ್ನು ಕೊನೆಗೆ ಉಳಿಯುವ ಒಡೆದ ಹಾಲಿನ ಪದಾರ್ಥದಿಂದ ರಸಗುಲ್ಲ ಮತ್ತು ಬರ್ಫಿಯನ್ನ ತಯಾರಿಯಿ ಸವಿಯಬಹುದಾಗಿದೆ.

ಇದೇ ಒಡೆದ ಹಾಲಿನಿಂದ ಪನ್ನೀರ್ ಕೂಡ ಮಾಡಬಹುದಾಗಿದೆ. ಅದು ಹೇಗೆಂದು ಮುಂದೆ ನೋಡಿ..ಮೊದಲಿಗೆ ಒಡೆದ ಹಾಲನ್ನ ಚೆನ್ನಾಗಿ ಕುದಿಸಿ. ಬಳಿಕ ಸ್ವಚ್ಛವಾದ ಒಡನು ಬಟ್ಟೆಯೊಳಗೆ ಹಾಲನ್ನ ಹಾಕಿ ಬಿಗಿಯಾಗಿ ಕಟ್ಟಿ. ಇನ್ನು ಕೆಲ ಗಂಟೆಗಳಲ್ಲೇ ಪನ್ನೀರ್ ಸಿದ್ದವಾಗಿರುತ್ತದೆ ಹಾಗೂ ಮೃದುವಾಗಿಯೂ ಇರುತ್ತದೆ. ಇನ್ನು ಒಡೆದ ಹಾಲಿನಿಂದ ಮೊಸರು ಕೂಡ ಮಾಡಬಹುದಾಗಿದೆ. ನೋಡಿದರೆಲ್ಲಾ..ಒಡೆದ ಹಾಲಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಅಂತ..ಒಂದು ವೇಳೆ ನಿಮ್ಮ ಮನೆಯಲ್ಲಿ ಒಡೆದ ಹಾಲಿದ್ದರೆ ಬಿಸಾಡುವ ಬದಲು ಅದರಿಂದ ಪ್ರಯೋಜನಗಳನ್ನ ಪಡೆದುಕೊಳ್ಳಿ.