ಸ್ನೇಹಿತರೆ ನೆನಸಿಟ್ಟ ಬಾದಾಮಿ ಬೀಜಗಳನ್ನ ತಿನ್ನುವುದರಿಂದ ನೀವು ನಂಬಲಾರದ ಹಲವಾರು ಪ್ರಯೋಜನಗಳಿವೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರಂತೂ ಆಗುವ ಆರೋಗ್ಯಲಾಭಗಳು ಅನೇಕ. ಹೌದು ಬಾದಾಮಿಯಲ್ಲಿ ಪೋಷಕಾಂಶಗಳ ಆಗರವೇ ಅಡಗಿದೆ. ನೀವು ಅಂಗಡಿಯಿಂದಲೇ ತಂದು ನೀರಿನಲ್ಲಿ ನೆನಸಿಟ್ಟ ಬಾದಾಮಿಯನ್ನ ನೆನೆಸಿದ ಬಾದಾಮಿಯಂತಲೇ ಕರೆಯುತ್ತಾರೆ. ಇನ್ನು ಬಾದಾಮಿಯಲ್ಲಿ ಸಿಹಿ, ಕಹಿ ಎಂಬ ಎರಡು ವಿಧದ ಬಾದಾಮಿಗಳಿವೆ. ಇನ್ನು ಸಿಹಿ ಬಾದಾಮಿಯಲ್ಲಿ ಪೋಷಕಾಂಶಗಳಾದ ಒಮೇಗಾ ೩, ಒಮೇಗಾ ೬ ಕೊಬ್ಬಿನ ಆಮ್ಲದ ಜೊತೆಗೆ ಕ್ಯಾಲ್ಸಿಯಂ, ಪಾಸ್ಪರಸ್ ಸೇರಿದಂತೆ ನಾರಿನ ಅಂಶ ಹೀರಿಕೊಳ್ಳುವ ಅಂಶಗಳನ್ನ ಹೊಂದಿದೆ.
ಇನ್ನು ಪ್ರತಿ ದಿನ ಬೆಳಿಗ್ಗೆ ನೆನಸಿಟ್ಟ ಬಾದಾಮಿಯನ್ನ ತಿನ್ನುವುದರಿಂದ ವಯಸ್ಸಿನ ಲಕ್ಷಣಗಳು ಕಾಣಿಸದಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ದೇಹದಲ್ಲಿ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿಯೂ ಕೂಡ ತುಂಬಾ ಉಪಕಾರಿಯಾಗಿದೆ. ಇನ್ನು ಗರ್ಭಿಣಿಯಾಗಿರುವವರು ನೆನಸಿಟ್ಟ ಬಾದಾಮಿಯನ್ನ ತಿನ್ನುವುದರಿಂದ ಹೊಟ್ಟೆಯಲ್ಲಿರುವ ಮಗುವಿಗೆ ಸಾಕಷ್ಟು ಶಕ್ತಿಯನ್ನ ಹೊದಗಿಸುವುದರ ಜೊತೆಗೆ ಮಗುವಿಗೆ ಪ್ರೊಟೀನ್ ಗಳನ್ನ ಒದಗಿಸುತ್ತದೆ.

ಇನ್ನು ದಿನಾಲೂ ನಾಲ್ಕರಿಂದ ಆರೆಂಟು ನೆನಸಿದ ಬಾದಾಮಿ ಬೀಜಗಳನ್ನ ತಿನ್ನುವುದರಿಂದ ಮೆದುಳಿಗೆ ಹೆಚ್ಚು ನೆನಪಿನ ಶಕ್ತಿಯನ್ನ ಒದಗಿಸುತ್ತದೆ. ಇನ್ನು ನೆನಸಿದ ಬಾದಾಮಿಯಲ್ಲಿ ನಾರಿನ ಅಂಶ ಯಥೇಚ್ಛವಾಗಿರುವುದರಿಂದ ಕೊಬ್ಬನ್ನ ಕರಗಿಸಿ ದೇಹದ ತೂಕವನ್ನ ಕಡಿಮೆ ಮಾಡುವುದಲ್ಲದೆ ಮಲಬದ್ಧತೆಯನ್ನ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ನೆನಸಿಟ್ಟ ಬಾದಾಮಿಯನ್ನ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ತಿಳಿಯಲು ಕೆಳಗಿರುವ ಈ ವಿಡಿಯೋ ನೋಡಿ..