Advertisements

ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂದ್ರೆ ಈ ಮಾತುಗಳನ್ನು ಯಾವತ್ತು ಮರಿಬೇಡಿ.

Motivation

ನೂರಾರು ಕನಸು ಹೊತ್ತು ಪ್ರಾಮಾಣಿಕವಾಗಿ ಸಾಧಿಸಲು ಹೊರಟಿರೋ ಎಲ್ಲಾ ಪ್ರತಿಭೆಗಳಿಗಾಗಿ. ನಿಮಗೆಲ್ಲ ಖಂಡಿತ ಈ ಬರವಣಿಗೆಯಿಂದ ಒಂದಷ್ಟು ಆತ್ಮವಿಶ್ವಾಸ ಮೂಡುತ್ತೆ ಅನ್ನೋ ನಂಬಿಕೆ ಇದೆ . ಓದಿದ ಮೇಲೆ ಎನನ್ಸ್ತು ಅಂತ ಕಾಮೆಂಟ್ ಮೂಲಕ ತಿಳಿಸಿ.

Advertisements

ಈ ಮೌನ ಇದ್ಯಲ್ಲ ಇದ್ರಲ್ಲಿ ಸಿಗೋ ನೆಮ್ಮದಿ ಎಲ್ಲದಕ್ಕಿಂತ ಮಿಗಿಲು ಕಂಡ್ರಿ. ಮೌನ ಒಂಥರಾ ಮೆಡಿಟೇಶನ್ ಇದ್ದಂಗೆ ನಮ್ಮನ್ನ ನಾವು ಅರಿಯೋಕೆ ನಮ್ಮೊಡನೆ ನಾವು ಸರಿಯಾಗಿ ಬದುಕೋಕೆ ಕೇವಲ ಮೌನವಾಗಿದ್ರೆ ಸಾಕು. ಸ್ವಾಮಿ ವಿವೇಕಾನಂದರ ಹತ್ರ ಒಬ್ಬ ಭಕ್ತ ಕೇಳ್ತಾನಂತೆ ಗುರುಗಳೇ ಜೀವನದಲ್ಲಿ ಏನಾದ್ರು ಸಾಧಿಸ್ಬೇಕು ಏನ್ ಮಾಡ್ಲಿ ಅಂತ ಮೊದಲು ಮೌನಿಯಾಗು ಕಾಯಕದಲ್ಲಿ ದೇವರನ್ನು ಕಾಣು ಜಯ ನಿನ್ನದೇ ಅಂದ್ರಂತೆ ಸ್ವಾಮೀಜಿ.

ನಮ್ ಸಮಾಜದಲ್ಲಿ ಬಹಳಷ್ಟು ಜನ ಜನ್ಮ ಎತ್ತಿರೋದೇ ಕಷ್ಟ ಪಟ್ಟು ಬೆಳೆಯುತ್ತಿರೋ ಪ್ರತಿಭೆಗಳನ್ನ ತುಳಿಯೋಕೆ. ಆದ್ರೆ ಏನ್ ಮಾಡೋದು ನಾವೆಲ್ಲರೂ ಅವ್ರ ನಡುವೆಯೇ ಬದುಕಬೇಕು.ಹಾಗಾದ್ರೆ ಇವರೆಲ್ಲರ ಮಧ್ಯೆ ನಾವು ನಮ್ಮ ಗುರಿ ತಲುಪಬೇಕಂದ್ರೆ ಏನ್ ಮಾಡ್ಬೇಕು ಗೊತ್ತ ಅನವಶ್ಯಕ ಮಾತು ಕಡಿಮೆ ಮಾಡಿ ಕೆಲ್ಸ ಜಾಸ್ತಿ ಮಾಡ್ಬೇಕು. ಅದೆಷ್ಟೋ ಬಾರಿ ಮಾತು ಅತಿಯಾಗಿ ಸ್ನೇಹ ಪ್ರೀತಿ ಭಾಂದವ್ಯ ಎಲ್ಲವನ್ನೂ ಕಳೆದುಕೊಳ್ತೀವಿ ಜೊತೆಜೊತೆಗೆ ಪ್ರತಿಭೆಯೂ ಕೂಡ ನಮಗರಿವಿಲ್ಲದಂತೆ ನೆಲಕಚ್ಚುತ್ತಿರುತ್ತೆ.

ಸೋಲೋಕೇ ರೆಡಿ ಆಗೋಣ ಅವಮಾನವನ್ನ ಸ್ವೀಕರಿಸೋಣ. ತುಳಿಯೋರು ತುಳಿಯಲಿ ಕಾಲೆಳೆಯೋರು ಎಳೆಯಲಿ ಅರಚಿಕೊಳ್ಳೋರು ಅರಚಲಿ ನಾವು ಮಾತ್ರ ಗಟ್ಟಿಯಾಗೋಣ ಮತ್ತಷ್ಟು ಗಟ್ಟಿಯಾಗೋಣ. ಈ ಜಗತ್ತಲ್ಲಿ ಕಾಯಕವನ್ನೇ ನಂಬಿರೋನು ಸೋತಿರೋದು ಚರಿತ್ರೆಯಲ್ಲೇ ಇಲ್ಲ. ನಾನಂತು ಮೌನವಾಗಿದ್ದೇನೆ ಸ್ನೇಹಿತರೆ ಕಾಯಕ ಬಿಟ್ರೆ ನಂಗೇನು ಕಾಣಿಸ್ತಿಲ್ಲ ಎಲ್ಲಿಯವರೆಗೆ ಈ ಮೌನ ಗೊತ್ತ ಸಾಧನೆಯೇ ಮಾತನಡುವವರೆಗೆ.

ಸಾಧಿಸಲು ಹೊರಟವನ ಸಾಧನೆ ಮಾತಾಗಬೇಕೇ ಹೊರತು ಮಾತೇ ಸಾಧನೆಯಾಗಬಾರದು.ಕೆಲಸದಲ್ಲಿ ದೇವರನ್ನ ಅಥವಾ ದೇವರ ನೆನೆದು ಕೆಲಸವನ್ನ ಹೇಗಾದ್ರು ಸರಿ ನಿಷ್ಠೆ ಪ್ರಾಮಾಣಿಕತೆ ಶ್ರದ್ದೆ ಭಕ್ತಿ ಪರಿಶ್ರಮದಿಂದ ಮಾಡ್ಬೇಕು. ಒಂದು ದಿನ ಬಂದೇ ಬರುತ್ತೆ ಸ್ನೇಹಿತರೆ ನಮ್ಮೆಲ್ಲಾ ಪರಿಶ್ರಮಕ್ಕೆ ಉತ್ತರ ಸಿಗುತ್ತೆ ನಮ್ಮೆಲ್ಲರ ಮುಖದಲ್ಲೂ ಸಾರ್ಥಕತೆಯ ಭಾವನೆ ವ್ಯಕ್ತವಾಗುತ್ತೆ.ಆ ದಿನ ಅದೇ ದಿನ ನಮ್ಮೆಲ್ಲರ ಮೌನವೂ ಮಾತಾಗುತ್ತೆ.