Advertisements

ನಿಮ್ಮ ಹೆಣ್ಣುಮಕ್ಕಳ ಫೋಟೋಗಳನ್ನ ದಯವಿಟ್ಟು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಡಿ ! ವಿನಂತಿ ಮಾಡಿಕೊಂಡ ಪೊಲೀಸ್ ಆಯುಕ್ತರು ?

News

ಲಾಕ್ ಡೌನ್ ಸಮಯದ್ಲಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳ ಫೋಟೋಗಳನ್ನ ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಬೇಡಿ ಎಂದು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisements

ಲಾಕ್ ಡೌನ್ ಇರುವಕಾರಣ ಎಲ್ಲರೂ ಮನೆಯಲ್ಲೇ ಇರುವುದರಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ತಮಾಷೆಗಾಗಿಯೋ, ತರ್ಲೆಗಾಗಿಯೋ ಆನ್ಲೈನ್ ನಲ್ಲಿ ಪಾಠ ಮಾಡುತ್ತಿದ್ದಾಗ ಕೆಟ್ಟ ರೀತಿಯ ವಿಡಿಯೋ, ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಾರೆ. ಫೋಟೋಗಳನ್ನ ಕೆಟ್ಟದಾಗಿ ಸೃಷ್ಟಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರಿಂದ ನೀವು ಆತಂಕ ಪಡುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಹಾಗಾಗಿ ನಿಮ್ಮ ಮನೆಯ ಮಕ್ಕಳ, ಪತ್ನಿಯ, ಅಕ್ಕ ತಂಗಿಯರ ಫೋಟೋಗಳನ್ನ ದಯವಿಟ್ಟು ಆನ್ಲೈನ್ ನಾಲ್ ಅಪ್ಲೋಡ್ ಮಾಡಬೇಡಿ, ಇದರಿಂದ ನಿಮಗೆ ಅವಮಾನ ಆಗುತ್ತದೆ. ಇಂತಹಕೆಲಸಗಳು ಲಾಕ್ ಡೌನ್ ಕಾರಣ ಮನೆಯಲ್ಲಿರುವ ವ್ಯಕ್ತಿಗಳಿಂದ ನಡೆಯುತ್ತಿದೆ ಎಂದು ಹೇಳಿರುವ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.