Advertisements

ಕೆಲಸವಿಲ್ಲದೆ ತನ್ನ ಹುಟ್ಟೂರಿಗೆ ಹೋಗಿ, ಗೊಬ್ಬರ ಹೊತ್ತು ಬೆವರು ಸುರಿಸಿ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಕನ್ನಡದ ನಟಿ.

Life News

ಈ ಕೊರೊ,ನಾ ಬಂದ ಮೇಲೆ ರಾಜ್ಯದಲ್ಲಿ ಲಾಕ್ ಡೌನ್ ಹಾಗಿದ್ದು ಉದ್ಯೋಗಿಗಳಿಗೆ ಕೆಲಸ ವಿಲ್ಲದೆ ತಮ್ಮ ತಮ್ಮ ಊರುಗಳಿಗೆ ವಾಪಸ್ ಹಾಗಿದ್ದಾರೆ. ಅಲ್ಲದೇ ಹಲವು ಜನರು ತಮ್ಮ ಹೊಲ ಗದ್ದೆಗಳಲ್ಲಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಯಾರು ಕೈ ಬಿಟ್ಟರೂ ಭೂಮಿ ತಾಯಿ ಕೈ ಬಿಡೊದಿಲ್ಲ ಅನ್ನುವುದಕ್ಕೆ ಇದೇ ಸಾಕ್ಷಿ. ಅದೇ ರೀತಿ ನಟನೆ, ವಿಧ್ಯಬ್ಯಾಸ ಮಾಡಲೆಂದು ಸಿಲಿಕಾನ್ ಸಿಟಿಗೆ ಹೋಗಿದ್ದ ಬಿಗ್ ಬಾಸ್ ಸ್ವರ್ದಿ ಭೂಮಿ ಶೆಟ್ಟಿಯವರು ಮನೆಗೆ ಬಂದು ಗದ್ದೆಯ ಕೆಲಸವನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

Advertisements

ಹೌದು ಬೆಂಗಳೂರಿನಲ್ಲೇ ಓದಿನ ಜೊತೆಗೆ ನಟನೆ ಮಾಡಿಕೊಂಡು. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಭೂಮಿ ಶೆಟ್ಟಿ ಹೆಸರಾಗಿದ್ದರು‌. ಕೊರೊ,ನಾ ದಿಂದ ಲಾಕ್ ಡೌನ್ ಆದ ಪರಿಣಾಮ, ಉಡುಪಿ ಜಿಲ್ಲೆಯ ಬೈಂದೂರ ತಾಲ್ಲೂಕಿನ ಬೀಜೂರು ಗ್ರಾಮದ ಗಂಟೆಹೊಳೆಯಲ್ಲಿರುವ ತಮ್ಮ ಹುಟ್ಟೂರಿನ ಮನೆಗೆ ಬಂದಿದ್ದಾರೆ.

ಇನ್ನೂ ಭೂಮಿ ಶೆಟ್ಟಿಯವರು ಮನೆಯಲ್ಲಿ ಯಾಕೆ ಸುಮ್ಮನೆ ಕೂತು ಸಮಯ ಕಳೆಯುವುದು ಎಂದು ಗದ್ದೆಯಲ್ಲಿ ಕೆಲಸ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಹಾಗೂ ಗೊಬ್ಬರ ವನ್ನು ಹೊರುವ ಫೊಟೊಗಳು ಹಾಗೂ ವೀಡಿಯೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದರ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ, ಮನೆಯವರು ಈ ಬಾರಿ ಬೇಸಾಯ ಮಾಡುವುದು ಬೇಡ ಅಂದಿದ್ದರು, ನಾವೇ ಎಲ್ಲರೂ ಸೇರಿ ಯಾಕೆ ವ್ಯವಸಾಯ ಮಾಡಬಾರದು ಎಂದು ಹೇಳಿ ನಾನು ಸಹಾಯ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಈ ಭಾರಿ ನಾನು ಗದ್ದೆಯ ಕೆಲಸದಲ್ಲಿ ತೊಡಗಿಕೊಂಡಿದ್ದು, ಈ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.