Advertisements

ಬಿಗ್ ಬಾಸ್ ಸೀಸನ್ 9 ಶುರು.. 17 ಸ್ಫರ್ಧಿಗಳ ಹೆಸರು ಫೈನಲ್.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಬಿಗ್ ಸೀಸನ್ 8 ಈ ಬಾರಿ ಸಾಕಷ್ಟು ಪ್ರಖ್ಯಾತಿಯನ್ನ ಗಳಿಸಿಕೊಂಡಿದ್ದು ಹಾಗೆ ಅತಿ ಹೆಚ್ಚು ಟಿಆರ್ ಪಿ ಕೂಡ ಬಂದಿತ್ತು.. ಸಾಕಷ್ಟು ಸವಾಲುಗಳ ನಡುವೆ ಮೊದಲ ಇನ್ನಿಂಗ್ಸ್ ಮತ್ತು ಸೆಕೆಂಡ್ ಇನ್ನಿಂಗ್ಸ್ ಎನ್ನುವ ರೀತಿಯಲ್ಲಿ ಬಿಗ್ ಬಾಸ್ ಸೀಸನ್ 8 ಅನ್ನು ಮಗಿಸಲಾಗಿದೆ.. ಅದರ ಬೆನ್ನಲ್ಲೇ ಮಿನಿ ಬಿಗ್ಬಾಸ್ ಕೂಡ ಬಂತು. ಯಾಕೆಂದರೆ ಬಿಗ್ ಬಾಸ್ ಆ ಅಡಿಕ್ಷನ್ ನಿಂದ ಜನರು ಹೊರಗೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಜೊತೆಜೊತೆಗೆ ಆ ಸೀರಿಯಲ್ ಪ್ರಮೋಷನ್ ಉದ್ದೇಶದಿಂದ ಅದೇ ರೀತಿ ಬಿಗ್ಬಾಸ್ ಗೂ ಇನ್ನಷ್ಟು ಹೆಸರು ಬರಲಿ ಎನ್ನುವ ಉದ್ದೇಶದಿಂದ ಮಿನಿ ಬಿಗ್ಬಾಸ್ ಕೂಡ ಮಾಡಿದ್ರು. ಆದರೆ ಅದೆಷ್ಟರ ಮಟ್ಟಿಗೆ ಸಕ್ಸಸ್ ಆಯ್ತೋ ಗೊತ್ತಿಲ್ಲಾ.. ಅದರ ಬೆನ್ನಲ್ಲೆ ಇದೀಗ ಬಿಗ್ ಬಾಸ್ ಸೀಸನ್ 9 ಗೆ ಆಡಳಿತ ಮಂಡಳಿಯವರು ಎಲ್ಲಾ ರೀತಿಯಲ್ಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಧ್ಯ ಕಲರ್ಸ್ ಕನ್ನಡ ಆಡಳಿತ ಮಂಡಳಿಯವರ ಕೈಯಲ್ಲಿ ಇರುವಂತಹ ಅಂತಿಮ ಪಟ್ಟಿಯೊಂದು ಲಭ್ಯವಾಗಿದೆ.. ಇದು ಯಾವುದೇ ಕ್ಷಣದಲ್ಲಿ ಬದಲಾಗಬಹುದು ಚೇಂಜಸ್ ಕೂಡ ಆಗಬಹುದು.

Advertisements

ಸಧ್ಯಕ್ಕೆ ಒಟ್ಟು 17 ಸ್ಪರ್ಧಿಗಳಿಗೆ ಕರೆ ಹೋಗಿದೆ ಅಂದರೆ ಇನ್ನೂ ತುಂಬಾ ಜನಕ್ಕೆ ಹೋಗಿದೆ.. ಇದರಲ್ಲಿ ಸ್ವಲ್ಪ ಮಟ್ಟಿಗೆ ಒಪ್ಪಿಗೆ ಕೊಟ್ಟಂತವರು ಸ್ವಲ್ಪ ಮಟ್ಟಿಗೆ ಯೋಚನೆ ಮಾಡುವಂತವರು ಬರ್ತೀನಿ ಬರಲ್ಲಾ ಎನ್ನುವ ರೀತಿ ಒಂದು ಯೋಚನೆಯಲ್ಲಿ ಇದಾರಲ್ವಾ ಅಂತವರು ಎಲ್ಲರನ್ನು ಕೂಡ ಸೇರಿ ಸಧ್ಯ 17 ಜನರ ಹೆಸರು ನಮ್ಮ ಕೈಗೆ ಸಿಕ್ಕಿದೆ. ಹಾಗಾದರೆ ಬಿಗ್ ಬಾಸ್ ಸೀಸನ್ 9 ಗೆ ಬರುವಂತಹ ಸ್ಪರ್ಧಿಗಳು ಯಾರು ಅನ್ನೊದು ನೋಡೋಣ.. ಮೊದಲಿಗೆ ವಿಜಯ್ ಸೂರ್ಯ, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ರು ತದನಂತರ ಬೇರೆ ಬೇರೆ ಸೀರಿಯಲ್ ಗಳಲ್ಲು ಕೂಡ ನಟಿಸಿದ್ದಾರೆ.. ಕೆಲವೊಂದು ಸಿನಿಮಾಗಳಲ್ಲು ಕೂಡ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಯಾವುದೇ ರೀತಿ ಹೇಳಿಕೊಳ್ಳುವಂತಹ ಪ್ರಸಿದ್ಧಿ ಪಡೆಯಲಿಲ್ಲ ಈಗಾಗಿ ವಿಜಯ್ ಸೂರ್ಯ ಅವರು ಬಿಗ್ ಬಾಸ್ ಗೆ ಬರ್ತಿದ್ದಾರೆ..

ಇನ್ನೂ ಮಜಾಭಾರತ ರಘು ಅಥವಾ ರಾಘವೇಂದ್ರ. ಬಹುತೇಕ ಪಾತ್ರಗಳಲ್ಲಿ ಹೆಣ್ಣಿನ ವೇಷಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಅದ್ಬುತ ಅಭಿನಯ ಮೂಲಕ ರಾಘವೇಂದ್ರ ಅವರು ಮಜಾಭಾರತದಲ್ಲಿ ಗುರುತಿಸಿ ಕೊಂಡಿದ್ದಾರೆ. ಈಗಾಗಿ ರಘು ಅವರನ್ನು ಕೂಡ ಬಿಗ್ ಬಾಸ್ ಗೆ ಕರೆಯಲಾಗಿದೆ.. ಮೂರನೆಯದಾಗಿ ಸೌಂದರ್ಯ ಜಯಮಾಲ ಅವರು ಉಪೇಂದ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ತದನಂತರ ಮೂರು ನಾಲ್ಕು ಸಿನಿಮಾಗಳಲ್ಲಿ ನಟಿಸ್ತಾರೆ ಆದರೆ ಯಾವುದೇ ಸಿನಿಮಾ ಅವರ ಕೈ ಹಿಡಿಯಲಿಲ್ಲ ಈಗಾಗಿ ಸೌಂದರ್ಯ ಜಯಮಾಲ ಅವರು ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ ಅದೃಷ್ಟ ಪರೀಕ್ಷೆ ಗೋಸ್ಕರ.. ನಾಲ್ಕನೆಯವರು ತರಂಗ ವಿಶ್ವ, ಮಜಾ ಟಾಕಿಸ್ ನಿಂದ ಗುರುತಿಸಿಕೊಂಡವರು. ಬೇರೆ ಬೇರೆ ಕಾರ್ಯಕ್ರಮಗಳಲ್ಲು ಕೂಡ ಕಾಣಿಸಿಕೊಂಡಿದ್ದಾರೆ, ಕೆಲವು ಸಿನಿಮಾ ಸೀರಿಯಲ್ ಗಳಲ್ಲು ಕೂಡ ಸಾಕಷ್ಟು ಖ್ಯಾತಿಯನ್ನ ಗಳಿಸಿಕೊಂಡಿದ್ದಾರೆ. ಇವರು ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಿದ್ದಾರೆ..

ಐದನೇ ಬಿಗ್ ಬಾಸ್ ಸ್ಪರ್ಧಿ ಮಂಡ್ಯ ರಮೇಶ್ ಹಿರಿಯರಲ್ಲಿ ಒಬ್ಬರಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಂಡ್ಯ ರಮೇಶ್ ಕೂಡ ಅದ್ಬುತ ನಟ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ, ಮಂಡ್ಯ ರಮೇಶ್ ರಂಗಭೂಮಿ, ಸಿನಿಮಾ, ಸೀರಿಯಲ್, ನಾಟಕ ತಂಡ ಎಲ್ಲವನ್ನು ಕೂಡ ಮಾಡಿ ಬಂದವರು.. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ಳೋಣ ಎನ್ನುವ ಕಾರಣಕ್ಕಾಗಿ ಮಂಡ್ಯ ರಮೇಶ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾಯಿದ್ದಾರೆ.. ಆರನೆಯದಾಗಿ ಚಂದನ್ ಶರ್ಮಾ ನ್ಯೂಸ್ ನಲ್ಲಿ ಸೆಲೆಬ್ರಿಟಿ ಸ್ಟೇಟಸ್ ಅನ್ನು ಪಡೆದುಕೊಂಡತವರು.. ಎಲ್ಲಾ ಕನ್ನಡ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದಾರೆ ಆದರೆ ಸಧ್ಯಕ್ಕೆ ಯಾವುದೇ ಚಾನೆಲ್ ನಲ್ಲಿ ಇಲ್ಲಾ. ಇದೀಗ ಚಂದನ್ ಶರ್ಮಾ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾಯಿದ್ದಾರೆ..

ಆರ್ ಜೆ ಸುನಿಲ್.. ಇವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕಾಗೆ ಸುನಿಲ್ ಅಂಥ ಅಂದರೆ ಎಲ್ಲರಿಗೂ ಗೊತ್ತಾಗುತ್ತೆ. ಇವರು ಎಪ್ ಎಮ್ ಮೂಲಕ ಎಲ್ಲರಿಗೂ ಕಾಗೆ ಹಾರಿಸುವ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.. ಈಗಾಗಿ ಅವರು ಕೂಡ ಬಿಗ್ ಬಾಸ್ ಮನೆಗೆ ಬರ್ತಾ ಇದ್ದಾರೆ. ಕೆಸಿ ಕಾರಿಯಪ್ಪ ಇವರು ಗೊತ್ತಿರಬಹುದು, ಗೊತ್ತಿಲ್ಲದೆ ಇರಬಹುದು. ಕೆಸಿ ಕಾರಿಯಪ್ಪ ಕ್ರಿಕೇಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಸುದೀಪ್ ಅವರ ಸ್ನೇಹಿತ ಕೂಡ ಹೌದು.. ಇನ್ನೂ ಕ್ರಿಡಾ ಕ್ಷೇತ್ರದಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾಯಿದ್ದಾರೆ. ಒಂಬತ್ತನೇದಾಗಿ ಮುಖ್ಯಮಂತ್ರಿ ಚಂದ್ರು.. ಇವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಸಿನಿಮಾ, ಸೀರಿಯಲ್ ಹಾಗು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಪ್ರಸಿಧ್ಧಿ ಪಡೆದುಕೊಂಡಿದ್ದಾರೆ. ಈಗಾಗಿ ಮುಖ್ಯಮಂತ್ರಿ ಚಂದ್ರು ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಾಯಿದ್ದಾರೆ..

ಹತ್ತನೇ ಸ್ಪರ್ಧಿ ರೇಖಾ ದಾಸ್. ರೆಖಾ ದಾಸ್ ಸಿನಿಮಾದಲ್ಲಿ ಸಾಕಷ್ಟು ಪ್ರಸಿದ್ಧಿಗಳನ್ನು ಪಡೆದುಕೊಂಡತವರು, ಕೆಲವು ಸೀರಿಯಲ್ ಗಳಲ್ಲು ಕಾಣಿಸಿಕೊಂಡಿದ್ದಾರೆ.. ಆನಂತರ ಯಾವುದೇ ಕಾರ್ಯಕ್ರಮಗಳು ರೇಖಾ ದಾಸ್ ಅವರಿಗೆ ಸಿಗಲಿಲ್ಲಾ, ಸ್ವಲ್ಪ ಕಷ್ಟದಲ್ಲು ಕೂಡ ಇದ್ದಾರೆ.. ಈಗಾಗಿ ಬಿಗ್ ಬಾಸ್ ವೇದಿಕೆ ಸಿಕ್ತಾ ಇದೆ.. ಇವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಡಲಿದ್ದಾರೆ.. ರವಿ ಶ್ರೀವತ್ಸ, ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಟರ್ ಆಗಿರುವಂತಹ ವ್ಯಕ್ತಿ. ಇವರು ಕೂಡ ಬಿಗ್ ಬಾಸ್ ಮನೆಗೆ ಬರ್ತಾ ಇದ್ದಾರೆ.. ಹತ್ತನೇ ದಾಗಿ ಆಲ್ ಓಕೆ, ಆಲ್ ಓಕೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ರ್ಯಾಪ್ ಸಾಂಗ್ ಗಳ ಮೂಲಕ ಕನ್ನಡಿಗರನ್ನ ಕುಣಿಸಿದಂತಹ ವ್ಯಕ್ತಿ.. ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.. ಈಗ ಆಲ್ ಓಕೆ ಬಿಗ್ ಬಾಸ್ ಮನೆಯಲ್ಲಿ ಅದೃಷ್ಟ ಪರೀಕ್ಷೆಗೋಸ್ಕರ ಎಂಟ್ರಿಯನ್ನ ಕೊಡ್ತಾಯಿದ್ದಾರೆ. ಹದಿಮೂರನೆ ಸ್ಪರ್ಧಿ ಪ್ರದೀಪ್ ಬಡೆಕ್ಕಿಲ, ಬಿಗ್ ಬಾಸ್ ನಲ್ಲೇ ಇವರದ್ದೇ ವಾಯ್ಸ್.. ಬಿಗ್ ಬಾಸ್ ಮೂಲಕವೇ ಸೆಲೆಬ್ರಿಟಿ ಸ್ಟೇಟಸ್ ಅನ್ನು ಪಡೆದುಕೊಂಡತವರು.

ಪ್ರತಿಯೊಬ್ಬರಿಗೂ ಬಿಗ್ ಬಾಸ್ ಅಂತಿದ್ದಾಗೆ ಪ್ರದೀಪ್ ಬಡೇಕ್ಕಿಲ ನೆನಪಾಗ್ತಾರೆ.. ಈಗಾಗಿ ಇವರನ್ನು ಕೂಡ ಬಿಗ್ ಬಾಸ್ ಮನೆಗೆ ಕರೆಯಲಾಗಿದೆ. ಮೇಘನ ಖುಷಿ, ಮೇಘನ ಖುಷಿಯನ್ನ ನಿವೆಲ್ಲಾ ಮರೆತಿರಬಹುದು ಆದರೆ ಇನ್ನೂ ಕೂಡ ಒಂದಷ್ಟು ಜನ ಮರೆತಿಲ್ಲಾ.. ಅರಗಿಣಿ ಸೀರಿಯಲ್ ಮೂಲಕ ಪೇಮಸ್ ಆದಂತವರು. ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾಯಿದ್ದಾರೆ.. ಹದಿನೈದನೇ ಸ್ಪರ್ಧಿ ನಮ್ರತಾ ಗೌಡ, ನಾಗಿಣಿ 2 ಸೀರಿಯಲ್ ನಟಿ. ಇವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾಯಿದ್ದಾರೆ. ಸುಪ್ರಿತ ಸತ್ಯನಾರಾಯಣ್, ಸೀತಾ ವಲ್ಲಬ ಸೀರಿಯಲ್ ಮೂಲಕ ಗುರತಿಸಿಕೊಂಡಂತವರು.. ಇವರು ಕೂಡ ಬಿಗ್ ಬಾಸ್ ವೇದಿಕೆಗೆ ಬರ್ತಾ ಇದ್ದಾರೆ. ಕೊನೆಯದಾಗಿ ವೇದಾ ಕೃಷ್ಣಮೂರ್ತಿ, ಭಾರತಿಯ ಕ್ರಿಕೇಟ್ ತಂಡದಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸಿರುವಂತವರು, ಇವರು ಕೂಡ ಬಿಗ್ ಬಾಸ್ ಮನೆಗೆ ಬರ್ತಾಯಿದ್ದಾರೆ. ಅವರಿಗೂ ಕೂಡ ಕರೆ ಹೋಗಿದೆ.. ಇನ್ನಿಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ತಾರೆ. ಯಾವುದೇ ಸಂದರ್ಭದಲ್ಲಿ.. ಈ ಪಟ್ಟಿಯಲ್ಲಿ ಯಾವುದೇ ಕ್ಷಣದಲ್ಲಿ ಯಾವುದೇ ಹೆಸರು ಬದಲಾಗಬಹುದು. ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಶುರು ಮಾಡುವಂತಹ ಸಾಧ್ಯತೆಗಳು ಕೂಡ ಇದೆ. ಇಷ್ಟು ಸ್ಪರ್ಧಿಗಳಲ್ಲಿ ನಿಮಗೆ ಯಾರ ಹೆಸರು ಇಷ್ಟ ಆಯ್ತು, ಹಾಗೆ ಈ ಬಿಗ್ ಬಾಸ್ ಗೆ ನಿಮಗಿಷ್ಟ ಆದಂತವರು ಯಾರು ಬರಬೇಕು ಎನ್ನುವಂತಹ ಅನಿಸಿಕೆಯನ್ನು ತಿಳಿಸಿ.