Advertisements

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಮತ್ತೆ ಶುರು.. ಯಾರೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಮತ್ತೆ ಬರ್ತಿದಾರೆ ಗೊತ್ತಾ?

Entertainment

ಕ’ರೋ’ನ ವೈ’ರಸ್ ಎರಡನೇ ಹಲೆಯ ಆವಳಿಯಿಂದಾಗಿ ಬಿಗ್ಬಾಸ್ ಕನ್ನಡ ಸೀಸನ್ ಅರ್ಧಕ್ಕೆ ನಿಂತಾಗ ಪ್ರೇಕ್ಷಕರಿಗೆ ಬೇಸರವಾಗಿತ್ತು.. ಆ ಸಂದರ್ಭದಲ್ಲಿ ಸ್ಪರ್ಧಿಸುತ್ತಿದ್ದ ಎಲ್ಲಾ 12 ಮಂದಿಗೂ ಆ ನಿರ್ಧಾರ ಶಾ’ಕ್ ನೀಡಿತ್ತು ಬಹುತೇಕರು ಕಣ್ಣೀರು ಹಾಕುತ್ತಾ ದೊಡ್ಮನೆಯಿಂದ ಹೊರ ಬಂದಿದ್ದರು.. ಆದರೆ ಅದೇ ಆಟವನ್ನ ಮತ್ತೆ ಅರಂಭಿಸಲು ತಿರ್ಮಾನಿಸಲಾಗಿದೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಹೊರಬಿದ್ದಿತ್ತು.. ಅದನ್ನ ಎರಡನೆ ಇನ್ನಿಂಗ್ಸ್ ಎಂದು ಕಲರ್ಸ್ ಕನ್ನಡ ವಾಹಿನಿ ಕರೆದಿದೆ.. ಈಗ ಆ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ದಿನಾಂಕ ಕೂಡ ನಿಗಧಿಯಾಗಿದೆ.

[widget id=”custom_html-3″]

Advertisements

ಹೌದು ಇದೇ ಬುಧವಾರದಿಂದ ಅಂದರೆ ಜೂನ್ 23 ರಿಂದ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿವೆ.. ಕಲರ್ಸ್ ಕನ್ನಡ ವಾಹಿನಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೊಗಳನ್ನು ಹಂಚಿಕೊಳ್ಳುವ ಮೂಲಕ ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಅರ್ಧ ಕ್ಕೆ ನಿಂತಿದ್ದ ಕನಸು ಮುಂದುವರೆಯುತ್ತಾ ಹೊಸ ಕನಸು ಶುರುವಾಗುತ್ತಾ ಎಂಬ ಕೂತೂಹಲದ ಪ್ರಶ್ನೆಯನ್ನ ಈ ಪ್ರೋಮೊದಲ್ಲಿ ಕೇಳಲಾಗಿದೆ..

[widget id=”custom_html-3″]

ಅಂದರೆ ಈ ಎರಡನೇ ಇನ್ನಿಂಗ್ಸ್ ನಲ್ಲಿ ಹಳೆ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳು ಬಂದ್ರು ಅಚ್ಚರಿ ಏನಿಲ್ಲ. ಅಲ್ಲದೇ ಬೇರೆ ಇನ್ನೊಂದಿಷ್ಟು ಹೊಸ ಟ್ವಿಸ್ಟ್ ಗಳು ಕೂಡ ಇರೋದು ಖಂಡಿತ.. ಬಿಗ್ ಬಾಸ್ ಅರ್ಧಕ್ಕೆ ಅಂತ್ಯವಾದಾಗ ಕಿಚ್ಚ ಸುದೀಪ್ ಅವರು ಅನಾರೋಗ್ಯದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಹಾಗಾಗಿ ಆ ಕೊನೆ ಸಂಚಿಕೆಗಳಲ್ಲಿ ಅವರು ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಬುಧವಾರ ಎರಡನೇ ಇನ್ನಿಂಗ್ಸ್ ನ ಮಹಾ ಸಂಚಿಕೆಗೆ ಸಕಲ ತಯಾರಿ ನಡೆದಿದ್ದು ಅಂದು ಸುದೀಪ್ ಕೂಡ ಕಾಣಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ.. ಇದನ್ನ ಮಹಾ ಸಂಚಿಕೆ ಎಂದು ವಾಹಿನಿ ಕರೆದಿದೆ.