Advertisements

ಬಿಗ್ ಬಾಸ್ ಸಂಜನಾ ಮದುವೆ ಸಂಭ್ರಮ ಹುಡುಗ ಯಾರು ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಕರ್ನಾಟಕ ಜನತೆಯ ಗಮನ ಸೆಳೆದ ನಟಿ ಅಂದರೆ ಅದು ಸಂಜನಾ.. ಹೌದು ಬಿಗ್ ಬಾಸ್ ಮೂಲಕ ಇವರು ಸಿಕ್ಕಾಪಟ್ಟೆ ಟ್ರೋಲ್ ಕೂಡ ಹೊಳಗಾಗಿದ್ದರು. ಇನ್ನೂ ಬಿಗ್ ಬಾಸ್ ನಲ್ಲಿ ಪ್ರಥಮ್ ಹಾಗೂ ಸಂಜನಾ ನಡುವೆ ಸಿಕ್ಕಾಪಟ್ಟೆ ಜಗಳವಾಗುತ್ತಿತ್ತು.. ಆ ಸಮಯದಲ್ಲಿ ಸಂಜನಾ ಅವರಿಗೆ ಸಪೋರ್ಟಿವ್ ಆಗಿ ನಟ ಭುವನ್ ಅವರು ಇದ್ದರು.. ಇನ್ನೂ ಆಗ ಬಿಗ್ ಬಾಸ್ ಮನೆಯಲ್ಲಿ ಸಂಜನಾ ಹಾಗು ಭುವನ್ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದಾರೆ ಮುಂದೆ ಮದುವೆ ಕೂಡ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಅದೆಲ್ಲಾ ಊಹಾ ಪೋಹಗಳಷ್ಟೇ..

Advertisements

ಯಾಕೆಂದರೆ ಸಂಜನಾ ಅವರು ಮದುವೆಯಾಗುತ್ತಿರುವ ಹುಡುಗನೇ ಬೇರೆ.. ಹೌದು ಇನ್ನೂ ಸ್ವಲ್ಪ ದಿನಗಳಲ್ಲಿ ಮದುವೆಯಾಗಲಿದ್ದಾರೆ. ಇದನ್ನು ಸ್ವತಃ ಸಂಜನ ಅವರೇ ಹೇಳಿಕೊಂಡಿದ್ದು ಬಾಯ್ ಪ್ರೇಂಡ್ ಜೊತೆ ಇರುವ ಫೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.‌. ಸಂಜನಾ ಹಾಗು ಮೋಹನ್ ಅವರ ಕುಟುಂಬದವರು ಈ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ಈ ವಿಷಯವನ್ನು ಸಂಜನಾ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಂಜನಾ ಅವರು ಮದುವೆಯಾಗುತ್ತಿರುವ ಹುಡುಗನ ಹೆಸರು ಮೋಹನ್..

ಇವರು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದರು. ಇವರದು ಲವ್ ಕಮ್ ಅರೆಂಜ್ ಮ್ಯಾರೇಜ್.. ಸಂಜನಾ ಹಾಗು ಮೋಹನ್ ಅವರು ಮೊದಲು ಬೆಸ್ಟ್ ಪ್ರೆಂಡ್ಸ್ ಆಗಿದ್ದರು. ನಂತರ ಇವರಿಬ್ಬರಿಗೂ ಪ್ರೀತಿಯಾಗಿ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಸಂಜನಾ ಅವರು ತಮ್ಮ ಹುಡುಗನ ಬಗ್ಗೆ ಹೇಳಿದ್ದು ಏನೆಂದರೆ ನನ್ನ ಜೀವನದಲ್ಲಿ ಬಂದು ಇನ್ನಷ್ಟು ಸುಂದರಗೊಳಿಸಿದಕ್ಕಾಗಿ ಧನ್ಯವಾದಗಳು.. ನಿನ್ನಂತ ರತ್ನವನ್ನು ನಾನು ಪಡೆಯಲು ತುಂಬಾ ಪುಣ್ಯ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ. ಈಗಾಗಲೇ ಮದುವೆ ಸಿದ್ಧತೆಗಳು ನಡೆಯುತ್ತಿದ್ದು ಇನ್ನು ಸ್ವಲ್ಪ ದಿನಗಳಲ್ಲಿ ಇಬ್ಬರು ಎಂಗೇಜ್ ಮೆಂಟ್ ಆಗುವ ಸಾಧ್ಯತೆಗಳು ಹೆಚ್ಚಿದೆ..