Advertisements

ಬಿಗ್ ಬಾಸ್ ಮನೆಯಿಂದ 5ನೇ ವಾರ ಎಲಿಮಿನೇಟ್ ಆದ ಶಂಕರ್ ಅಶ್ವಥ್ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಈ ವಾರ ಬಿಗ್ ಬಾಸ್ ಮನೆಯಿಂದ ಹಿರಿಯ ನಟ ಶಂಕರ್ ಅಶ್ವಥ್ ಅವರು ಹೊರಬಂದಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ 8 ರಲ್ಲಿ ಎಲಿಮಿನೇಟ್ ಆಗಿದ್ದಾರೆ ಐದನೇ ಸ್ಪರ್ಧಿಯಾಗಿದ್ದ ಶಂಕರ್ ಅಶ್ವಥ್ ಅವರು. ಇದೀಗ ಐದನೇ ವಾರ ದೊಡ್ಮನೆ ಅಂಗಳದಿಂದ ಹೊರಬಂದಿರುವ ಶಂಕರ್ ಅಶ್ವಥ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಸಂಭಾವನೆ ಎಷ್ಟು ಎಂದು ನೋಡೊಣ. ಶಂಕರ್ ಅಶ್ವಥ್ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಂತಹ ಪ್ರಮುಖ ಪೋಷಕ ನಟ.

Advertisements

ಇವರು ಕನ್ನಡ ಸಿನಿ ರಂಗದ ದಿಗ್ಗಜ ನಟ ಅಶ್ವಥ್ ಅವರ ಪುತ್ರ.. ಇನ್ನೂ ತಮ್ಮ ಅದೃಷ್ಟ ಪರೀಕ್ಷೆಗಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಶಂಕರ್ ಅವರ ಅದೃಷ್ಟ ಕೈ ಹಿಡಿಯಲಿಲ್ಲ. ಕೇವಲ ಐದು ವಾರದಲ್ಲಿ ಮನೆಯಿಂದ ಹೊರಬಂದಿದ್ದಾರೆ.. ಈ ವಾರ ಮತ್ತು ಕಳೆದ ವಾರ ಎರಡರಲ್ಲೂ ಕೂಡ ಕಳ’ಪೆ ಪ್ರದರ್ಶನ ಮಾಡಿದ್ದಾರೆ ಅಂತ ಮನೆಯ ಸದಸ್ಯರು ಇವರನ್ನ ನಾಮಿನೇಟ್ ಮಾಡಿದ್ದರು.

ಅದರಂತೆಯೇ ಈ ವಾರ ಬಿಗ್ ಬಿ ಅಂಗಳದಿಂದ ಹೊರಬಂದಿದ್ದು.. ಒಂದು ವಾರಕ್ಕೆ 40 ಸಾವಿರದಂತೆ ಐದು ವಾರಕ್ಕೆ ಎರಡು ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದಿದ್ದಾರೆ. ಹೌದು ಶಂಕರ್ ಅಶ್ವಥ್ ಅವರು ಎರಡು ಲಕ್ಷ ರುಪಾಯಿಯನ್ನ ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದಾರೆ.. ಇನ್ನು ನಿಮ್ಮ ಪ್ರಕಾರ ಶಂಕರ್ ಅಶ್ವಥ್ ಅವರು ಇನ್ನಷ್ಟು ದಿನ ಮನೆಯಲ್ಲಿ ಇರಬೇಕಿತ್ತಾ, ಇಲ್ವಾ.