Advertisements

ತಂದೆ ಕೊಟ್ಟಿದ್ದ ರಿಂಗ್ ಅನ್ನು ಅರವಿಂದ್ ಬೆರಳಿಗೆ ಆಕಿದ ದಿವ್ಯಾ.. ಜೀವನ ಪೂರ್ತಿ ನನ್ನ ಜೊತೆ ಇರ್ತಿಯಾ ಅಂತ ಕೇಳಿದಕ್ಕೆ ಅರವಿಂದ್ ಹೇಳಿದ್ದೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ದಿವ್ಯಾ ಅರವಿಂದ್ ಜೋಡಿ ಬಿಗ್ ಬಾಸ್ ನೀಡಿದ ಜೋಡಿ.. ಟಾಸ್ಕ್ ನಿಂದ ಜೊತೆಯಾಗಿರುವ ಈ ಜೋಡಿ ಬಿಟ್ಟು ಹೋಗುವಂತೆ ಕಾಣ್ತಾಯಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಆಗ್ತಾ ಇರ್ತಾರೆ.. ಇದೀಗ ಇಬ್ಬರು ಕಣ್ಣೀರು ಆಕಿರುವ ದೃಶ್ಯವನ್ನು ಖಾಸಗಿ ವಾಹಿನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.. ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡಿದ್ದರು. ಹುಡುಗರು ತಮ್ಮ ಮನಸ್ಸು ಕದ್ದಿರುವ ಹುಡುಗಿಯರಿಗೆ ಬಲೂನ್ ನೀಡಬೇಕು ಹೆಣ್ಣು ಮಕ್ಕಳು ಅವರ ಸ್ವಂತದ ವಸ್ತುವನ್ನು ಹುಡುಗರಿಗೆ ನೀಡಬೇಕು ಎಂದು ಹೇಳಿದ್ದರು.. ಈ ವೇಳೆ ದಿವ್ಯಾ ಹುರುಡುಗ ಅವರು ಅರವಿಂದ್ ಅವರಿಗೆ ‌ನೀಡಿದ ಆ ಒಂದು ವಸ್ತು ತುಂಬಾ ಸ್ಪೆಷಲ್ ಆಗಿ ಕಂಡು ಬಂದಿದೆ.

Advertisements

ನಾನು ತುಂಬಾ ಮಾತಾಡೋದಿಲ್ಲ.. ಮಾತಿಲ್ಲದೆ ಅವಳಿಗೆ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಪ್ರೀತಿಯಿಂದ ಅರವಿಂದ್ ಅವರು ದಿವ್ಯಾಗೆ ಬಲೂನ್ ಕೊಟ್ಟಿದ್ದಾರೆ. ಅರವಿಂದ್ ಜೀವನ ಪರ್ಯಂತ ನನ್ನ ಜೊತೆ ಇರ್ಬೇಕು ನಾನು ನನ್ನ ಅಪ್ಪಾಜಿ ಕೊಟ್ಟಿರುವ ಉಂಗುರುವನ್ನು ಅರವಿಂದ್ ಗೆ ಕೊಡುತ್ತೇನೆ ಎಂದು ದಿವ್ಯಾ ಹೇಳುತ್ತಿರುವಾಗ ಅರವಿಂದ್ ಕಣ್ಣೀರು ಹಾಕಿದ್ದಾರೆ.. ದಿವ್ಯಾ ತನ್ನ ಕೈಯಲ್ಲಿರುವ ಉಂಗುರವನ್ನು ತಗೆದು ಅರವಿಂದ್ ಅವರಿಗೆ ಹಾಕಿ ಪ್ರೀತಿಯಿಂದ ಇಬ್ಬರು ತಬ್ಬಿಕೊಂಡಿದ್ದಾರೆ. ದಿವ್ಯಾ ಸುರೇಶ್ ನನಗೆ ಮಂಜು ಕಾಣಿಸಲಿಲ್ಲ ಅಂದರೆ ನನ್ನ ಸ್ವಂತದ್ದು ಹತ್ತಿರ ಇಲ್ಲ ಎನಿಸುತ್ತದೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ..

ಚಕ್ರವರ್ತಿ ಅವರು ದಿವ್ಯಾ ನೋಡಿದಾಗ ನನಗೆ ನನ್ನ ಮಗಳು ನೆನಪಾಗುತ್ತಾಳೆ ಎಂದು ಹೇಳಿದ್ದಾರೆ. ಈಗೆ ಸ್ಪರ್ಧಿಗಳು ತಮ್ಮಲಿರುವ ಪ್ರೀತಿಯ ಪಾತ್ರರಿಗೆ ಉಡುಗೊರೆಯನ್ನ ನೀಡಿದ್ದಾರೆ. ಪ್ರೀತಿಯಿಂದ ದಿವ್ಯಾ ಕೊಟ್ಟ ಉಂಗುರವನ್ನು ಅರವಿಂದ್ ಅವರು ಕುಷಿಯಿಂದ ಹಾಕಿಕೊಳ್ಳುತ್ತಾರೆ.. ಸ್ವಲ್ಪ ಹೊತ್ತಾದ ಮೇಲೆ ನೋಡಿದ್ರೆ ಕೈ ಬರಳಿ‌ನಲ್ಲಿ ಉಂಗುರ ಕಾಣ್ತಾಯಿಲ್ಲ. ಅರವಿಂದ್ ಇಡೀ ಮನೆ ಹುಡುಕಾಡುತ್ತಿದ್ದಾರೆ.. ಸಿಕ್ಕಿದ್ದನ್ನೆಲ್ಲಾ ಜಾಲಾಡ್ತಾರೆ. ಇದು ಗೊತ್ತಾಗಿ ಮನೆಯವರೆಲ್ಲಾ ರಿಂಗ್ ಹುಡುಕೋದಕ್ಕೆ ಅರವಿಂದ್ ಗೆ ಸಹಾಯ ಮಾಡುತ್ತಾರೆ..

ಪ್ರತಿಯೊಬ್ಬರು ಉಂಗುರುವನ್ನ ಹುಡುಕುತ್ತಾರೆ. ಅಲ್ಲೇ ಕೂತಿರುವ ದಿವ್ಯಾಗೆ ಏನಾಗುತ್ತಿದೆ ಅಂತ ಯಾರು ಕೂಡ ಹೇಳ್ತಿಲ್ಲ.. ಅರವಿಂದ್ ಅವರು ಉಂಗುರವನ್ನು ಹುಡುಕಾಡುತ್ತಿದ್ದಾಗ ಅರವಿಂದ್ ಅವರ ಕಣ್ಣು ಒದ್ದೆಯಾಗಿದೆ. ದಿವ್ಯಾಗೆ ನಾನು ಹೇಳುತ್ತೇನೆ, ಬಿಗ್ ಬಾಸ್ ಉಂಗುರ ಕಾಣುತ್ತಿಲ್ಲ ಎಂದು ಹೇಳುವಾಗ ಅರವಿಂದ್ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು.. ಅರವಿಂದ್ ಗೆ ಕಳೆದು ಹೋಗಿರುವ ರಿಂಗ್ ಸಿಗುತ್ತಾ ಮುಂದೆ ಏನಾಗುತ್ತೋ ನೋಡಬೇಕು.