Advertisements

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 17 ಜನ ಅಚ್ಚರಿಯ ಸ್ಪರ್ಧಿಗಳು ! ನಿಮ್ಮ ನೆಚ್ಚಿನ ಸ್ಪರ್ಧಿ ಯಾರು.?

Entertainment

ನಮಸ್ತೇ ಸ್ನೇಹಿತರೇ, ಕಿರುತೆರೆಯ ವೀಕ್ಷಕರು ತುಂಬಾ ಕಾತುರದಿಂದ ಕಾಯುತ್ತಿದ್ದ ಕನ್ನಡದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸಂಚಿಕೆ ೮ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ಬಿಗ್ ಮನೆಗೆ ೧೭ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಸ್ನೇಹಿತರೇ, ಬಿಗ್ ಬಾಸ್ 8 ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರೆಟಿಗಳು ಪ್ರವೇಶ ಮಾಡಲಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಹೆಸರುಗಳು ಕೇಳಿಬಂದಿದ್ದವು. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಮನ್ ಮ್ಯಾನ್ ಪ್ರವೇಶ ಇರುವುದಿಲ್ಲ. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸೆಲೆಬ್ರೆಟಿಗಳ ಪ್ರವೇಶ ಆಗಲಿದೆ ಎನ್ನಲಾಗಿತ್ತು..ಹಾಗಾದ್ರೆ ಬಾರಿಯ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ ನೋಡೋಣ ಬನ್ನಿ..

ಸ್ಯಾಂಡಲ್ವುಡ್ ನ ಚಾಮಯ್ಯ ಮೇಷ್ಟ್ರು ಹಿರಿಯ ನಟ ಅಶ್ವಥ್ ಅವರ ಮಗ ನಟ ಶಂಕರ್ ಅಶ್ವಥ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಪುಟ್ಟಗೌರಿ ಧಾರವಾಹಿ ಮೂಲಕ ಕರುನಾಡಿನ ಮನೆ ಮನೆಗಳಲ್ಲಿ ಖ್ಯಾತರಾಗಿರುವ ಈಗ ಕಮಲಿ ಧಾರಾವಾಹಿಯಲ್ಲಿ ಕೂಡ ಅಜ್ಜಿಯ ಪಾತ್ರದಲ್ಲಿ ನಟಿಸುತ್ತಿರುವ ಚಂದ್ರಕಲಾ ಮೋಹನ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಟಿಕ್ ಟಾಕ್ ಸೋಷಿಯಲ್ ಮೀಡಿಯಾ ಮೂಲಕ ಹೆಸರಾದ ಧನುಶ್ರೀ, ಯೂಟ್ಯೂಬ್ ನಲ್ಲಿ ಬಾ ಗುರು ಎಂದು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಯೂಟ್ಯೂಬ್ ಸ್ಟಾರ್ ಬ್ರೋ ಗೌಡ ಶಮಂತ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Advertisements

ಬ್ರಹ್ಮಗಂಟು ಧಾರವಾಹಿ ಮೂಲಕ ಹೆಸರು ಮಾಡಿರುವ ಗುಂಡಮ್ಮ ಖ್ಯಾತಿಯ ನಟಿ ಗೀತಾ ಭಟ್ ಈ ಬಾರಿಯ ಬಿಗ್ ಮನೆಗೆ ಪ್ರವೇಶ ಮಾಡಿದ್ದು ಅಲ್ಲಿ ಹೇಗೆ ಇರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಸ್ಯಾಂಡಲ್ವುಡ್ ನ ಚಿತ್ರಗಳಲ್ಲಿ ಮಿಂಚಿ ಬಳಿಕ ಬಾಲಿವುಡ್ ನ ಕೆಲ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದ ನಟಿ ನಿಧಿ ಸುಬ್ಬಯ್ಯ ಕೂಡ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ ಕಲಾವಿದೆಯಾಗಿರುವ ದಿವ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸನ್ನಿಧಿ ಪಾತ್ರದ ಮೂಲಕ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಿಂಚಿ ಅಪಾರ ಅಭಿಮಾನಿ ಬಳಗವನ್ನ ಪಡೆದಿರುವ ನೈ ವೈಷ್ಣವಿ ಸನ್ನಿಧಿಗೌಡ ಈ ಬಾರಿಯ ಬಿಗ್ ಬಾಸ್ ಮನೆಗೆ ಪ್ರವೇಶ ಕೊಟ್ಟಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಗ್ಲಾಮರ್ ಬೊಂಬೆಯಾಗಿ ಮಿಂಚುತ್ತಿರುವ ನಟಿ ಶುಭಾ ಪೂಂಜಾ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಬಿಗ್ ಮನೆಯಲ್ಲಿ ತನ್ನ ಗ್ಲಾಮಾರ್ ನಿಂದಲೇ ಕಿ’ಚ್ಚು ಹಚ್ಚಲಿದ್ದಾರೆ ಎನ್ನಲಾಗಿದೆ. ಇನ್ನು ಕಿಚ್ಚ ಸುದೀಪ್ ಅವರು ನಟಿಸಿದ್ದ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ಅವರ ಸಹೋದರಿ ಪಾತ್ರವನ್ನ ಬೇಡ ಎಂದಿದ್ದ ದಿವ್ಯ ಸುರೇಶ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ವಿಭಿನ್ನ ಟ್ರೆಂಡ್ ಕ್ರಿಯೇಟ್ ಮಾಡಿದ ರಘು ಗೌಡ ಎಂಬುವವರು ಹಾಗೂ ಬೈಕ್ ರೇಸರ್ ಎಂದೇ ಹೆಸರು ಮಾಡಿರುವ ಉಡುಪಿಯ ಬೈಕ್ ರೇಸರ್ ಅವರವಿಂದ್ ಈ ಸಾಲದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಹಾಡು ಕರ್ನಾಟಕ ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಖ್ಯಾತರಾಗಿರುವ ಗಾಯಕ ಕೇವಲ ೧೯ ವರ್ಷದ ಧಾರವಾಡದ ಹುಡುಗ ವಿಶ್ವನಾಥ್ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಈ ನಟನ ಬಗ್ಗೆ ಕನ್ನಡ ಕಿರುತೆರೆಯ ವೀಕ್ಷಕರಿಗೆ ಪರಿಚಯ ಇದ್ದೆ ಇದೆ. ಹೌದು, ಮಜಾ ಭಾರತ ಕಾಮಿಡಿ ಶೋ ಮೂಲಕ ಖ್ಯಾತರಾಗಿರುವ ಲ್ಯಾಗ್ ಮಂಜ ಎಂದೇ ಹೆಸರಾಗಿರುವ ಕಲಾವಿದ ಮಂಜು ಪಾವಗಡ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಮನೆಯಲ್ಲಿ ನಗೆಯ ರಸದೌತಣವನ್ನ ಉಣಬಡಿಸಲಿದ್ದಾರಾ ಎಂಬುದನ್ನ ಕಾದು ನೋಡಬೇಕಾಗಿದೆ. ಇನ್ನು ಸಾಮಾಜಿಕ ಹೋರಾಟಗಾರರು ಎಂದೇ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದು ಈ ಬಾರಿಯ ವಿಶೇಷವೆನಿಸಿದೆ. ಸಿಸಿಎಲ್ ಕ್ರಿಕೆಟ್ ನಲ್ಲಿ ಸುದೀಪ್ ಅವರ ಜೊತೆಗೆ ಮಿಂಚಿದ್ದ, ಕೆಲ ಚಿತ್ರಗಳಲ್ಲಿ ನಟ ಕೂಡ ಆಗಿರುವ ರಾಜೀವ್ ಹಾಗೂ ನಿರ್ಮಲಾ ಚೆನ್ನಪ್ಪ ಎಂಬ ಪ್ರತಿಭಾನ್ವಿತೆ ಕಲಾವಿದೆ ಕೂಡ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.