Advertisements

ದಿವ್ಯ ಸುರೇಶ್ ಜೊತೆ ಲ್ಯಾಗ್ ಮಂಜು ಮದ್ವೆ ಆಗೋಯ್ತಾ ! ಎರಡೇ ದಿನಕ್ಕೆ ಬಿಗ್ ಮನೆಯಲ್ಲಿ ಲವ್ ಸ್ಟೋರಿನಾ ?

Entertainment

ಕನ್ನಡದ ಖ್ಯಾತ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ೮ ಈಗಾಗಲೇ ಅದ್ದೂರಿಯಾಗಿ ಶುರುವಾಗಿದೆ. ಇನ್ನು ಪ್ರತೀ ಬಿಗ್ ಬಾಸ್ ಸಂಚಿಕೆಗಳಲ್ಲಿ ಲವ್ ಸ್ಟೋರಿ, ತ್ರಿಕೋನ ಪ್ರೇಮ ಕತೆಗಳು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ನು ಕೆಲ ಪ್ರೇಮಕಥೆಗಳು ಸಕ್ಸಸ್ ಆಗಿ ಮದುವೆ ಕೂಡ ಆಗಿದೆ. ಅದರಂತೆ ಬಿಗ್ ಬಾಸ್ ೮ ಶುರುವಾಗಿ ಇನ್ನು ಕೇವಲ ಎರಡೇ ದಿನಗಳು ಕಳೆದಿರುವುದು, ಅದಾಗಲೇ ಮತ್ತೊಂದು ಲವ್ ಸ್ಟೋರಿ ಶುರುವಾಗಿದೆ. ಒಂದು ಮಟ್ಟಕ್ಕೆ ಬಿಗ್ ಬಾಸ್ ನ ಈ ಸ್ಪರ್ಧಿಗಳ ನಡುವೆ ಮದುವೆಯೇ ನಡೆದುಹೋಗಿದೆ ಅನ್ನುವಷ್ಟರ ಮಟ್ಟಿಗೆ ಸುದ್ದಿಯಾಗುತ್ತಿದೆ. ಹೌದು, ಮಜಭಾರತ ಖ್ಯಾತಿಯ ಲ್ಯಾಗ್ ಮಂಜ ಎಂದೇ ಕರೆಯುವ ಪಾವಗಡ ಮಂಜು ಮೊದಲ ದಿನದಿಂದಲೇ ಮಾಡೆಲ್ ಆಗಿರುವ ದಿವ್ಯ ಸುರೇಶ್ ಅವರ ಹಿಂದೆ ಬಿದ್ದಿರುವುದು ಬಿಗ್ ಬಾಸ್ ಪ್ರಿಯರಿಗೆ ಗೊತ್ತಿರುವ ವಿಚಾರವೇ..

Advertisements

ಹೌದು, ಈಗ ಪಾವಗಡ ಮಂಜು ಹಾಗು ದಿವ್ಯ ಅವರ ನಡುವೆ ಮದ್ವೆ ಮಡೆದುಹೋಗಿದೆ ಎಂಬ ಟಾಕಿಂಗ್ ಶುರುವಾಗಿದೆ. ಬಿಗ್ ಮನೆ ಪ್ರವೇಶ ಮಾಡಿದ ಮೊದಲ ದಿನವೇ ದಿವ್ಯ ಅವರ ಬಳಿ ಬಂದ ಪಾವಗಡ ಮಂಜು ನಿಮಗೋಸ್ಕರ ನಾನು ಏನು ಬೇಕಾದ್ರು ಮಾಡ್ತೇನೆ..ನಿಮಗೆ ಏನಾದ್ರು ಬೇಕಾದ್ರೆ ನನಗೆ ಹೇಳಿ ಎಂದು ಹೇಳಿದ್ದು, ಅದಕ್ಕೆ ಪ್ರತಿಯಾಗಿ ದಿವ್ಯ ಸುರೇಶ ಕೂಡ ನಿಮ್ಮ ಕೈಲಿ ಕೆಲಸ ಮಾಡಿಸಿದ್ರೆ ನಿಮಗೆ ನೋವಾಗುತ್ತೆ,ಇದರಿಂದ ನನ್ನ ಮನಸ್ಸಿಗೂ ನೋವು. ಹಾಗಾಗಿ ನಿಮ್ಮ ಕೈಲಿ ಏನೂ ಕೆಲಸ ಮಾಡಿಸಲ್ಲ ನಾನು ಅಂತ ಹೇಳಿದ್ದಾರೆ. ಇವರಿಬ್ಬರ ನಡುವಿನ ಈ ಸಂಭಾಷಣೆಯಿಂದ ಇವರಿಬ್ಬರ ನಡುವೆ ಏನೋ ಇದೆ ಎಂಬ ಗಾಸಿಪ್ ಅದಾಗಲೇ ಶುರುವಾಗಿತ್ತು. ಇನ್ನು ಇದೆಲ್ಲದರ ನಡುವೆಯೇ ಇವರಿಬ್ಬರ ನಡುವೆ ಮದುವೆ ಆಗೋ ಹುಡುಗ ಹುಡುಗಿಯಾಗಿ ಡ್ರಾಮಾವೊಂದು ಶುರುವಾಗಿದ್ದು, ನಿನ್ನ ಮದ್ವೆಯಾಗಲು ನನಗೆ ಇಷ್ಟ ಇಲ್ಲ ಎಂದು ದಿವ್ಯ ಹೇಳಿದಾಗ..

ಮಂಜು ನಂಗೇನು ಕಮ್ಮಿ, ನಾನೇಕೆ ನಿಮಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ನನಗೆ ಉದ್ದ ಇರೋ ಹುಡುಗರು ಇಷ್ಟ, ನೀನು ಕುಳ್ಳಗೆ ಇದ್ದೀಯ ಎಂದು ದಿವ್ವ್ಯ ಹೇಳಿದಾಗ, ಇದರಿಂದ ಆಗೋ ಸಮಸ್ಯೆ ಏನು, ನನಗೆ ಉದ್ದ ಹುಡುಗಿಯರು ಅಂದ್ರೆ ಇಷ್ಟ ಅಂತ ಪಾವಗಡ ಮಂಜ ಹೇಳುತ್ತಾನೆ. ಹಾಗಾದ್ರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳು ನನ್ನನ್ನ ಮದ್ವೆಯಾಗಲ್ಲ ಅಂತ ಮಂಜು ಹೇಳುತ್ತಾರೆ. ಇನ್ನು ಹೀಗೆ ಇವರಿಬ್ಬರ ಮಧ್ಯೆ ವಾದ ನಡೆಯುತ್ತಿರುವಾಗಲೇ ಪಾವಗಡ ಮಂಜ ತನ್ನ ಕತ್ತಿನಲ್ಲಿದ್ದ ಮೈಕ್ ನ್ನ ತೆಗೆದು ದಿವ್ಯ ಸುರೇಶ ಕಟ್ಟಿಗೆ ಹಾಕುತ್ತಾನೆ. ಬಳಿಕ ದಿವ್ಯಾ ಸುರೇಶ್ ಆ ಕ್ಯಾಮರವನ್ನ ತೆಗೆದು ಮತ್ತೆ ಮಂಜು ಕಟ್ಟಿಗೆ ಹಾಕುತ್ತಾರೆ. ಇನ್ನು ಇದನ್ನೆಲ್ಲಾ ನೋಡುತ್ತಿದ್ದ ಬಿಗ್ ಮನೆಯ ಸ್ಪರ್ಧಿಗಳು ಇವರಿಬ್ಬರ ನಡುವೆ ಮದುವೆಯೇ ಆಗಿಹೋಯ್ತು ಅಂತ ಘೋಷಣೆ ಮಾಡುತ್ತಾರೆ. ಒಟ್ಟಿನಲ್ಲಿ ಶುರುವಿನಲ್ಲೇ ದಿವ್ಯ ಸುರೇಶ್ ಹಿಂದೆ ಬಿದ್ದಿರುವ ಪಾವಗಡ ಮಂಜುವಿನ ಪ್ರೇಮಕತೆ ಎಲ್ಲಿಗೆ ಹೋಗಿ ಮುಟ್ಟುತ್ತೆ ಅಂತ ಕಾಡು ನೋಡಬೇಕಾಗಿದೆ.