Advertisements

ಬಿಗ್ ಬಾಸ್ ಮನೆಯಲ್ಲಿ ನಡೆಯಿತಾ ರಿಯಲ್ ಮದುವೆ! ಯಾರದು..

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜು ಅವರದ್ದೇ ಕಾರು ಬಾರು.. ದೊಡ್ಡ ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್ ಅವರನ್ನ ಪಟಾಯಿಸಿದ್ದ ಮಂಜು ಮನೆಮಂದಿಯ ಮನಸ್ಸನ್ನ ಗೆದ್ದಿದ್ದಾರೆ. ಅವರ ಕಚಗುಳಿ ಕಾಮಿಡಿ ಮಾತುಗಳಿಂದ ಎಲ್ಲರೂ ಕೂಡ ಫಿದಾ ಆಗಿದ್ದಾರೆ. ದಿನ ಕಳೆದಂತೆ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ಬಿಗಿಯಾಗುತ್ತಿದ್ದು ಸ್ಪರ್ಧಿಗಳು ಮನೆಯಲ್ಲಿ ಉಳಿಯಲು ಒಬ್ಬರಿಗಿಂತ ಒಬ್ಬರು ತುಂಬಾನೆ ಅದ್ಬುತವಾಗಿ ಟಾಸ್ಕ್ ಗಳನ್ನ ನಿರ್ವಹಿಸುತ್ತಿದ್ದಾರೆ.. ಟಾಸ್ಕ್ ಗಳ ನಡುವೆ ಈಗ ಬಿಗ್ ಬಾಸ್ ಮನೆಯಲ್ಲಿ ಲವ್ ಕಹಾನಿಗಳು ಶುರುವಾಗಿದೆ.

Advertisements

ಅದು ಒಂದಲ್ಲ ಎರಡಲ್ಲ ಮೂರು ಪ್ರೆಮ್ ಕಹಾನಿಗಳು ಶುರುವಾಗಿದೆ. ಮೊದಲ ದಿನವೇ ಮಂಜು ಪಾವಗಡ ಅವರಿಗೆ ಸಹಾಯ ಮಾಡುವ ಬಗ್ಗೆ ಕೇಳಿದಾಗ ದಿವ್ಯಾ ಅವರು ನಿಮ್ಮ ಕೈಯಿಗೆ ನೋವಾದರೆ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿ ಮಂಜು ಅವರ ಹೃದಯ ಕದ್ದಿದ್ದರು.. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಲೌವ್ ಸ್ಟೋರಿ ಶುರುವಾಗಿದೆ. ಮತ್ತೊಬ್ಬ ಸ್ಪರ್ಧಿ ಶಮಂತ್ ಅವರಿಗೆ ಲೌವ್ ಆಗಿದೆಯಂತೆ ನನ್ನನ್ನ ಒಬ್ಬರು ಮನಸ್ಸಿನಲ್ಲಿ ತುಂಬಾ ಪ್ರೀತಿ ಮಾಡುತ್ತಿದ್ದಾರೆ.. ಅವರು ಯಾರು ಅಂತ ಸಧ್ಯದಲ್ಲೇ ನಿಮಗೆಲ್ಲಾ ಗೊತ್ತಾಗಲಿದೆ ಎಂದು ಹೇಳಿದ್ದಾರೆ ಶಮಂತ್ ಅವರು.

ಇನ್ನೂ ಇಷ್ಟೇ ಅಲ್ಲದೇ ಸಿಕ್ಕ ಸಿಕ್ಕವರನ್ನೆಲ್ಲಾ ಗಂಟೆಗಟ್ಟಲೆ ತಬ್ಬಿಕೊಳ್ಳುವ ಪ್ರಶಾಂತ್ ಸಂಬರಗಿ ಅವರನ್ನ ಕಳೆದ ವಾರ ಸುದೀಪ್ ಅವರು ಖಡಕ್ಕಾಗಿ ವಾ’ರ್ನಿಂಗ್ ಕೂಡ ಕೊಟ್ಟಿದ್ದರು.. ಇನ್ನೂ ಇದೀಗ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಹುರುಡುಗ ಲೌವ್ ಸ್ಟೋರಿ ಶುರುವಾಗಿದೆಯಂತೆ. ಇನ್ನೇನು ಮದುವೆ ಕೂಡ ಆಗ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ದಿವ್ಯಾ ಅವರು ಗುಸು ಗುಸು ಮಾತನಾಡುತ್ತಿದ್ದು ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ ನಮ್ಮ ಮನೆಯಲ್ಲಿ ಗೊತ್ತಿಲ್ಲ ಎನ್ನುವ ಮಾತುಗಳನ್ನ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಶುಭ ಪೂಂಜಾ ಮದುವೆಯಾಗುತ್ತಾರೆ.. ಅವರ ನಂತರ ಅರವಿಂದ್ ಮತ್ತು ದಿವ್ಯಾ ಹುರುಡುಗ ಅವರ ಮದುವೆ ಪಿಕ್ಸ್ ಎಂದು ಸ್ಪರ್ಧಿಗಳು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದಾರೆ.