Advertisements

ಶಂಕರ್ ಆಶ್ವಥ್ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವುದಕ್ಕೆ ಎಲ್ಲರೂ ಪ್ಲಾನ್.. ಪ್ರೇಕ್ಷಕರಿಗೆ ಆಶ್ಚರ್ಯ! ನಿಜಕ್ಕೂ ಅಲ್ಲಿ ನಡೆದಿದ್ದೇನು.

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಬಿಗ್ ಬಾಸ್ ಸೀಸನ್ 8 ಆರಂಭವಾಗಿದ್ದೂ.. ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳನ್ನ ಸೆಮಿ ಸೆಲೆಬ್ರಿಟಿಗಳು ಎಂದೇ ಹೇಳಬಹುದು. ಕಲರ್ ಫುಲ್ ಆಗಿ ಕಾಣುತ್ತಿರುವ ಈ ಬಿಗ್ ಬಾಸ್ ನಲ್ಲಿ ಟಾಸ್ಕ್ ಗಳು ಕೂಡ ಈಗಾಗಲೇ ಶುರುವಾಗಿದೆ. ಇದಿಷ್ಟೇ ಅಲ್ಲದೇ ಮೊದಲ ವಾರದ ಎಲಿಮೇಷನ್ ಗಾಗಿ ನಾಮಿನೇಷನ್ ನನ್ನು ನೋಡಿ ಪ್ರೇಕ್ಷಕರಿಗೊಂದು ಆಶ್ಚರ್ಯವಾಗಿದೆ.. ಹೌದು ಏಕೆ ಅಂತ ನೋಡ್ತಾ ಹೋದ್ರೆ ಅದರಲ್ಲಿ ಬಹುತೇಕರು..

Advertisements

ಪ್ರತಿಭಾವಂತ ಕಲಾವಿದ ಶಂಕರ್ ಅಶ್ವಥ್ ಅವರನ್ನ ಈ ಬಾರಿ ಮನೆಯಿಂದ ಹೊರ ಹೋಗುವುದಕ್ಕೆ ನಾಮಿನೇಟ್ ಮಾಡುತ್ತಾರೆ. ನಿಜಕ್ಕೂ ಇದು ತುಂಬಾ ಜನ ಪ್ರೇಕ್ಷಕರಿಗೆ ಬೇಸರ ತಂದಿದೆ.. ಯಾಕೆಂದರೆ ಈ ಸ್ಪರ್ಧಿಗಳು ಕೊಟ್ಟ ಕಾರಣ ತುಂಬಾ ಸಿಲ್ಲಿ ಅನಿಸಿತು. ಶಂಕರ್ ಅಶ್ವಥ್ ಅವರಿಗೆ ತುಂಬಾ ವಯಸ್ಸಾಗಿದೆ.. ಟಾಸ್ಕ್ ಗಳಲ್ಲಿ ಭಾಗವಹಿಸುವುದಕ್ಕೆ ತೊಂದರೆಯಾಗುತ್ತದೆ. ಮುಂದೆ ಅವರು ಚೆನ್ನಾಗಿರ್ಲಿ ಅನ್ನುವ ಕಾರಣವನ್ನು ಕೊಟ್ಟು ಮನೆಯಿಂದ ಹೊರ ಹೋಗುವುದಕ್ಕೆ ಹೇಳಿ ಕಳುಹಿಸುತ್ತೇವೆ ಎಂದು ಸ್ಪರ್ಧಿಗಳು ಹೇಳುತ್ತಾರೆ.

ಇನ್ನೂ ಇದನ್ನ ನೋಡಿದರೆ ನಿಜಕ್ಕೂ ಮೊದಲ ವಾರವೇ ಶಂಕರ್ ಆಶ್ವಥ್ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವುದಕ್ಕೆ ಎಲ್ಲರೂ ಪ್ಲಾನ್ ಮಾಡಿಕೊಂಡಿದ್ರಾ ಎಂದು ಅನಿಸುತ್ತದೆ‌‌. ಇನ್ನೂ ಕೊನೆಯಲ್ಲಿ ನಡೆದ ಟ್ವಿಸ್ಟ್ ಅಂದರೆ.. ಬಿಗ್ ಬಾಸ್ ಈ ವಾರದ ಕ್ಯಾಪ್ಟನ್ ಆಗಿರುವ ಶಮಂತ್ ಅವರು ಶಂಕರ್ ಅಶ್ವಥ್ ಅವರನ್ನ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ನಿಂದ ಹೊರತೆಗೆದು ಅವರನ್ನ ಅಲ್ಲೇ ಉಳಿಸುಕೊಂಡಿದ್ದಾರೆ.