Advertisements

ನೂರಾರು ವರ್ಷಗಳಿಂದ ಈ ಸರ್ಪ ಕಾಯುತ್ತಿದೆ ವಿಶ್ವದ ಅತೀ ದೊಡ್ಡ ದೇವಾಲಯ! ಎಲ್ಲಿದೆ ಗೊತ್ತಾ?

Temples

ಪ್ರಿಯ ಓದುಗರೆ ಭಾರತ ಹಿಂದೂ ಧರ್ಮ ದೇವರುಗಳ ತವರೂರು. ಚಿಕ್ಕ ದೇವರಿಂದ ಹಿಡಿದು ದೊಡ್ಡ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಅಷ್ಟೇ ಶಕ್ತಿಶಾಲಿ ದೇವರು ಇದ್ದಾರೆ. ಅಂದಹಾಗೆ ಭಾರತ ಬಿಟ್ಟು ಬೇರೆ ದೇಶದಲ್ಲಿಯೂ ಹಿಂದೂ ಧರ್ಮದ ದೇವಾಲಯಗಳಿವೆ. ಅದನ್ನು ವಿಶ್ದ ಅತೀ ದೊಡ್ಡ ದೇವಾಲಯವೆಂದು ಕರೆಯಲಾಗಿದೆ. ಈ ದೇವಾಲಯವನ್ನು ಕಾಯುತ್ತಿರುವವರು ಯಾರು ಗೊತ್ತಾ? ಇದು ಇರುವುದು ಎಲ್ಲಿ.? ಅದಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆ? ಇದನ್ನು ಪೂರ್ಣವಾಗಿ ಓದಿ. ಈ ದೇವಾಲಯವು ಮಲೇಶಿಯಾದಲ್ಲಿದ್ದು, ಇದು ಪುಟ್ಟ ಗುಹೆಗಳಿಂದ ನಿರ್ಮಾಣವಾಗಿದೆ. ಸುಣ್ಣದ ಗುಹೆಗಳಿಂದ ಕೂಡಿದ ಈ ಪುಟ್ಟ ದೇವಾಲಯಗಳ ಸರಣಿಯನ್ನು ಹೊಂದಿವೆ. ಇವೆಲ್ಲವೂ ಹಿಂದೂ ಧರ್ಮ ದೇವಾಲಯಗಳು ಆಗಿವೆ. ಇಲ್ಲಿ ಅತೀ ವಿಶ್ವ ವಿಖ್ಯಾತ ಸುಬ್ರಹ್ಮಣ್ಯಸ್ವಾಮಿಯ 42.7 ಮೀ. ಎತ್ತರದ ಬ್ರಹತ್ ಮೂರ್ತಿಯನ್ನು ತಮಿಳು ವ್ಯಾಪಾರಿ ಕೆ.ತಂಬುಸ್ವಾಮಿ ಪಿಳ್ಳೆ ಎನ್ನುವವರು 1890 ರಲ್ಲಿ ನಿರ್ಮಿಸಿದರು.

Advertisements

ಇದು ಈಗ ಮಲೇಶಿಯಾದ ಪ್ರಸಿದ್ಧ ದೇವಾಲಯ ಮತ್ತು ಪ್ರವಾಸಿ ತಾಣವಾಗಿದೆ. “ತೈಪುಸಂ ” ಎಂಬ ಹಬ್ಬವನ್ನು ಇಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ಪ್ರಸಿದ್ಧ ಹಬ್ಬಕ್ಕೆ ಆಸ್ಟ್ರೇಲಿಯಾ, ಸಿಂಗಪುರ್, ಮಲೇಶಿಯಾ, ಇಂಡೋನೇಶಿಯಾ, ಬಾರ್ಲಿ ಸೇರಿದಂತೆ ಮುಂತಾದ ದೇಶಗಳಿಂದ ಹಿಂದೂ ಭಕ್ತರು ಮತ್ತು ಲಕ್ಷಾಂತರ ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಂತೆ ‘ಅಂಕೋರವಾಟ ‘ ದಲ್ಲಿಯೂ ಹಿಂದೂ ದೇವಾಲಯವಿದೆ. ಅಂಕುರವಾಟ ಎಂದರೆ ದೇವಾಲಯಗಳ ರಾಜಧಾನಿ ಎಂದರ್ಥ.ಇದು 12ನೇ ಶತಮಾನದ ಆಗಿದ್ದು, ಕಾಂಬೋಡಿಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇದನ್ನು ಕಮೈರ್ ಸಾಮ್ರಾಜ್ಯದ ರಾಜ ಸೂರ್ಯವರ್ಮನು ಸುಮಾರು 27 ವರ್ಷಗಳ ಕಾಲಾವಧಿ ಪಡೆದು ಕಟ್ಟಿಸಿದ ದೇವಾಲಯವಾಗಿದೆ. ಇದು ಹಿಂದೂ ಮತ್ತು ಬೌದ್ಧ ಧರ್ಮವನ್ನು ಪ್ರತಿಬಿಂಬಿಸುತ್ತಿದೆ. ಇದಕ್ಕೆ ಸರ್ಪವೊಂದು ನೂರಾರು ವರ್ಷಗಳಿಂದ ಕಾಯುತ್ತಿದೆ. ಆದ್ದರಿಂದಲೇ ನೂರಾರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಇನ್ನೂ ಕಟ್ಟಿಮುಟ್ಟಾಗಿದೆ ಎನ್ನವ ನಂಬಿಕೆ ಇದೆ.

ಹೀಗೆ ಪ್ರಪಂಚದ ವಿವಿದೇಡೆ ಹಿಂದೂ ಧರ್ಮಕ್ಕೆ ಸೇರಿದ ಬೃಹತ್ ದೇವಾಲಯಗಳಿವೆ. ಅಮೆರಿಕದಲ್ಲಿ ಶ್ರೀ ಸ್ವಾಮಿ ನಾಥ್ ನಾರಾಯಣ ದೇವಾಲಯವಿದೆ. ಇದು 32 ಸಾವಿರ ಚದುರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, 30 ಎಕರೆ ಭೂಮಿಯಲ್ಲಿ 75 ಅಡಿ ಎತ್ತರದಲ್ಲಿಈ ದೇವಸ್ಥಾನವಿದೆ. ಇದು ವಿಶ್ವದ ಅತಿದೊಡ್ಡ ಮತ್ತು ಮಾರ್ಬಲ್ನಿಂದ ನಿರ್ಮಿಸಿದ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಇಂಡೋನೇಷ್ಯಾದ ಮಧ್ಯ ಜಾವದಲ್ಲಿ ಪ್ರಂಬನನ್ ದೇವಾಲಯವಿದೆ. ಇದು 47 ಮೀಟರ್ ಎತ್ತರದಲ್ಲಿ 8 ದೇವಾಲಯಗಳಿಂದ ಕೂಡಿದೆ. ಹಾಗೆ ಸುತ್ತಲೂ ಪುಟ್ಟದಾದ 250 ದೇವಾಲಯಗಳಿಂದ ಸುತ್ತುವರೆದಿದೆ. 8 ದೇವಾಲಯಗಳ ಗೋಡೆಯ ಮೇಲೆ ವಿಷ್ಣುಪುರಾಣ, ರಾಮಾಯಣ, ಮಹಾಭಾರತದ ಮೂರ್ತಿಗಳನ್ನು ಹಾಗೂ ದಂತಕಥೆಗಳನ್ನು ಮೂರ್ತಿಗಳ ಮೂಲಕ ಕೆತ್ತಲಾಗಿದೆ. ಹೀಗೆ ಹಿಂದೂ ಧರ್ಮವನ್ನು ಪ್ರತಿಪಾದಿಸುವ ಅನೇಕ ಬೃಹತ್ ದೇವಾಲಯಗಳು ಪ್ರಪಂಚದ ಮೂಲೆಮೂಲೆಗಳಲ್ಲಿಯೂ ಇವೆ. ವಿಶ್ವದಂದ್ಯಾತ ಇದೀಗ ಹಿಂದೂಗಳು ಇರುವುದನ್ನು ಕಾಣಬಹುದು. ಹಿಂದೂ ಧರ್ಮಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ..