Advertisements

ಸುಲಭವಾಗಿ ಒಬ್ಬರೇ ವ್ಯವಸಾಯ ಮಾಡಿ ತಿಂಗಳಿಗೆ 1 ಲಕ್ಷ ಗಳಿಸುತ್ತಿದ್ದಾರೆ ಈ ಮಹಿಳೆ.. ಹೇಗೆ ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಬೆಳಗ್ಗೆ ಎದ್ದು ಅಡುಗೆ ಮಾಡಿ ನಂತರ ಕೃಷಿ ಕೆಲಸದಲ್ಲಿ ಎಲ್ಲರಂತೆ ಸಮನಾಗಿ ಕೆಲಸ ಮಾಡುವ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಅನ್ನೊದನ್ನು ಒಪ್ಪಿಕೊಳ್ಳಬೇಕಾದ ಸತ್ಯ.. ಈ ಮಹಿಳೆಯೂ ಹಾಗೆ ಕುಟುಂಬದ ಪರಿಸ್ಥಿತಿಯಲ್ಲಿ ತುಂಬಾ ಕೆಟ್ಟ ಸ್ಥಿತಿಗೆ ತಲುಪಿದಾಗ ಇವರ ಒಂದೇ ಒಂದು ಆಲೋಚನೆ ಈ ದಿನ ತಿಂಗಳಿಗೆ ಒಂದು ಲಕ್ಷ ದುಡಿಯುವಂತೆ ಮಾಡಿದೆ. ಅಷ್ಟಕ್ಕೂ ಇವರು ಕೈಗೊಂಡ ನಿರ್ಧಾರಗಳು ಏನು ಎಂದು ನೋಡೊಣ.. ಇವರ ಹೆಸರು ವೀಣಾ ದೇವಿ ಬಿಹಾರ್ ರಾಜ್ಯದ ಇವರು ಎಲ್ಲರಂತೆ ಮದುವೆಯಾಗಿ. ಗಂಡನ ಮನೆಗೆ ಕಾಲಿಟ್ಟರು.. ವ್ಯವಸಾಯ ಮಾಡಿ ಬದುಕುತ್ತಿತ್ತು ಗಂಡನ ಕುಟುಂಬ. ದುಡಿದ ಹಣ ತಿನ್ನುವುದಕ್ಕೆ ಸಾಕಾಗುತ್ತಿತ್ತು..

Advertisements

ವೀಣಾ ದೇವಿ ಅವರಿಗೆ ಮಕ್ಕಳಾದ ಮೇಲೆ ಅವರ ಜೀವನ ಕೂಡ ನನ್ನಂತೆ ಆಗಬಾರದು ಅವರಿಗೆ ಉತ್ತಮ ಜೀವನ ರೂಪಿಸಬೇಕು ಎನ್ನುವ ಅಲೋಚನೆ ವೀಣಾ ದೇವಿಯವರ ಮನಸ್ಸಿನಲ್ಲಿ ಮೂಡಿತು.. ಅದೇ ಸಮಯಕ್ಕೆ ವ್ಯವಸ್ಥಿತ ವ್ಯವಸಾಯ ಮಾಡುವ ದೆಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಕೊಡಲಾಗುತ್ತಿತ್ತು. ಆ ತರಬೇತಿಗೆ ಹೋಗುತ್ತಿದ್ದ ವೀಣಾ ದೇವಿ ಅವರಿಗೆ ಹಣಬೆ ಹಾಗು ಸಹಜ ಪದ್ದತಿಯಲ್ಲಿ ವ್ಯವಸಾಯ ಮಾಡುವ ಬಗ್ಗೆ ಆಸಕ್ತಿ ಬೆಳೆಯಿತು.‌ ಅದರ ಜೊತೆ ಟ್ರೈನಿಂಗ್ ನಲ್ಲಿ ಹೇಗೆ ಹಣಬೆ ಬೆಳೆಯಬೇಕು ಎಂದು ಹೇಳಿಕೊಟ್ಟರು..

ಕೊನೆಗೂ ಕುಟುಂಬ ಪದ್ದತಿಗಳನ್ನು ದಾಟಿ ಹಣಬೆ ಬೆಳೆಯುವುದಕ್ಕೆ ಮುಂದಾದ ವೀಣಾ ದೇವಿಯವರು ಮನೆಯ ಪಕ್ಕದಲ್ಲಿದ್ದ ಗುಡಿಸಲಿನಲ್ಲಿ ಹಣಬೆ ಕೃಷಿ ಆರಂಭಿಸಿ ಮೊದಲಿಗೆ ಒಂದು ಕೇಜಿ ಬೆಳೆದರು. ಆಗ ವೀಣಾ ದೇವಿಯವರಿಗೆ ದೈರ್ಯ ಬಂತು.. ನಂತರ ನೂರಾರು ಕೇಜಿ ಹಣಬೆ ಬೆಳೆಯಲು ಆರಂಭಿಸಿದ ಇವರು ಹತ್ತಿರದ ಅಂಗಡಿ ಹಾಗೂ ತಮ್ಮ ಮನೆಯ ಮುಂದೆಯೇ ಹಣಬೆ ಮಾರಾಟ ಮಾಡಲು ಮುಂದಾದರು.. ಅದರ ಜೊತೆ ತಮಗಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಸಹಜ ಪದ್ದತಿಯಲ್ಲಿ ವ್ಯವಸಾಯ ಕೂಡ ಆರಂಭಿಸಿದರು. ಕೊನೆಗೂ ವೀಣಾ ದೇವಿಯವರು ಇದರಲ್ಲಿ ಯಶಸ್ಸು ಗಳಿಸಿದರು.

ಈಗ ಹಣಬೆ ಹಾಗೂ ಸಹಜ ಕೃಷಿಯಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ಲಾಭ ಗಳಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಈಗ ಉನ್ನತ ವಿದ್ಯಾಭ್ಯಾಸ ಕೊಡಿಸುತ್ತಿರುವ ವೀಣಾ ದೇವಿಯವರು ಸುತ್ತ ಮುತ್ತಲಿನ ಹಳ್ಳಿ ಅವರಿಗೂ ಹಣಬೆ ಕೃಷಿಯನ್ನು ಕಲಿಸಿಕೊಡುತ್ತಿದ್ದಾರೆ.‌. ನಿಜ ಹೇಳಬೇಕೆಂದರೆ ಹಣಬೆಗೆ ಬಾರಿ ಬೇಡಿಕೆ ಇದೆ. ಆಗೆ ಇದನ್ನ ಬೆಳೆಯುವುದು ಅಷ್ಟು ಕಷ್ಟದ ಕೆಲಸವಲ್ಲ.. ಬೆಂಗಳೂರಿನ ಹೆಸರಘಟ್ಟ ಬಳಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೆ.

ಇಲ್ಲಿ ಹಣಬೆ ಬೆಳೆಯುವುದು ಹೇಗೆ ಎಂದು ಟ್ರೈನಿಂಗ್ ಕೊಟ್ಟು ಅದಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡಲಾಗುವುದು. ಹಣಬೆ ಕೃಷಿಗೆ ಯಾವುದೇ ಜಮೀನು ಬೇಕಾಗಿಲ್ಲ ಮನೆಯಲ್ಲೂ ಬೆಳೆಯಬಹುದು.. ಆಗೆ ಅತ್ತಿರದ ಶಾಪ್ ಗಳಲ್ಲಿ ಹಾಗು ಆನ್ಲೈನ್ ಮೂಲಕ ಸುಲಭವಾಗಿ ಹಣಬೆ ಮಾರಾಟ ಮಾಡಬಹುದು. ಇನ್ನೂ ಇಲ್ಲಿ ಇನ್ನೊಂದು ಉಪಯೋಗ ಅಂದರೆ ಪ್ರೆಶ್ ಹಣಬೆ ಮಾರಾಟ ಆಗಲಿಲ್ಲ ಅಂದರೆ ಅದನ್ನು ಒಣಗಿಸಿ ಮಾರಾಟ ಮಾಡಬಹುದು ಹಾಗಾಗಿ ಯಾವುದೇ ನಷ್ಟ ಅಂತೂ ಇಲ್ಲ. ವೀಣಾ ದೇವಿಯವರ ಒಂದು ದೃಡ ನಿರ್ಧಾರ ಹೆಜ್ಜೆ ಅವರನ್ನು ಈ ದಿನ ಆದರ್ಶ ಮಹಿಳೆಯಂತೆ ಮಾಡಿದೆ..