Advertisements

ಸಾವಿರಾರು ಕೋಟಿ ಒಡೆಯ ತನ್ನ ಮಗನನ್ನ ನಿನಗೆ ತಾಕತ್ತಿದ್ರೆ ಒಂದು ತಿಂಗಳು ಹೊರಗೆ ಹೋಗಿ ಕೂಲಿ ಮಾಡಿ ಬದುಕಿ ತೋರಿಸಿ ಅಂತ ಕಳಿಸಿದಾಗ ಏನಾಯ್ತು ಗೊತ್ತಾ?

Inspire

ಪ್ರಿಯ ವೀಕ್ಷಕರೆ ಸೆಲೆಬ್ರೆಟಿಗಳು, ದೂಡ್ಡ ದೊಡ್ಡ ಸೂಪರ್ ಸ್ಟಾರ್ , ನಂಬರ್ ಒನ್ ಬ್ಯುಸಿನೆಸ್ ‌ಮ್ಯಾನ್, ದೇಶ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಜನರ ಐಶಾರಾಮಿ ಜೀವನವನ್ನು, ಬೃಹತ್ ಬಂಗಲೆಗಳನ್ನು, ಕಾರುಗಳನ್ನು ನೋಡೆ ಇರ್ತಿವಿ. ಇನ್ನು ಈ ಹಲವು ಆಗರ್ಭ ಶ್ರೀಮಂತರ ಮಕ್ಕಳ ಜೀವನ ಐಶಾರಾಮಿ ಕಾರು, ಬ್ರ್ಯಾಂಡೆಡ್‌ ಬಟ್ಟೆಗಳು,‌ ಪಾರ್ಟಿಗಳು, ಪಬ್, ವಿದೇಶಗಳಲ್ಲಿ ಮೊಜು ಮಸ್ತಿ, ಇವುಗಳಲ್ಲೆ ತಮ್ಮನ್ನು ತಾವು ಮುಳುಗಿಸಿಕೊಂಡು ಬಿಟ್ಟಿರುವುದನ್ನು ನೋಡಿದ್ದಿವಿ.‌ ಆದರೆ ಇಲ್ಲೊಬ್ಬ ಶ್ರೀಮಂತ ‌ವ್ಯಕ್ತಿ ತನ್ನಂತೆ ತನ್ನ ಮಕ್ಕಳು ಆಗಬೇಕೆಂದು ಮಾಡಿದ್ದೇನು ಗೊತ್ತಾ, ಯಾರು ಆ ಶ್ರೀಮಂತ, ಈಗ ಆತನ ಮಕ್ಕಳು ಏನಾಗಿದ್ದಾರೆ ಗೊತ್ತಾ.. ಗುಜರಾತ್ ಮೂಲದ‌ ಖ್ಯಾತ ಉದ್ಯಮಿಯಾದ ಘನಾ ಶಾಮ ಡೊಲಕಿಯಾ ಅವರು ಹರೆರಾಮ ಡೈಮಂಡ್ಸ್ ಎಕ್ಸ್ ಪೋಟ್೯ ಸಂಸ್ಥೆಯ ಮಾಲೀಕರು. ಈಗೀನ ಶ್ರೀಮಂತ ಮಕ್ಕಳ ಜೀವನಕ್ಕಿಂತ ಘನಾಶಾಮ‌ ಅವರ ಮಕ್ಕಳ ಜೀವನ ವಿಭಿನ್ನ. ಘನಾಶಾಮ‌ ಸಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.

[widget id=”custom_html-3″]

Advertisements

ಸ್ವಂತ‌ ಕಷ್ಟಪಟ್ಟು ದುಡಿದು ಸಂಸ್ಥೆಯನ್ನು ಕಟ್ಟಿಬೆಳೆಸಿದವರು.ತನ್ನ ಮಕ್ಕಳು ಕಷ್ಟದಿಂದ ಬೆಳೆದು ಸಮಾಜದ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕೆಂಬುವುದು ಇವರ ಆಸೆಯಾಗಿತ್ತು. ತನ್ನ ಮಕ್ಕಳು ಮೊಜು ಮಸ್ತಿ ದುಂದು ವೆಚ್ಚ ಸಮಾಜಿಕ ಜಾಲತಾಣಗಳ‌ ಸೇರಿದಂತೆ ಯಾವುದೇ ಬಾಹ್ಯ ಆಡಂಬರದ ಜೀವನಕ್ಕೆ‌‌ ಒಳಗಾಗದೆ ಸ್ವತಂತ್ರವಾಗಿ ಬದುಕು ನಡೆಸುವ ಕಲೆ ಬೆಳೆಸಿಕೊಳ್ಳಬೇಕೆಂಬ‌ ನಿಟ್ಟಿನಲ್ಲಿ ‌ಇವರು ಆಲೋಚಿಸಿದ್ದರು. ಘನಾಶಾಮ‌ ಅವರಿಗೆ ಒಟ್ಟು 7 ಜನ ಮಕ್ಕಳು. ಕಷ್ಟ ಎಂದರೆ ಎನು ಎಂದು ತಿಳಿದು ಮುಂದೆ‌ ಬರಬೇಕೆಂದು ಅವರು ತಮ್ಮ‌ ಎಮ್ ಬಿಎ ಓದಿದ ಮಗ ಹಾಗೂ ಮತ್ತೊಬ್ಬ ಮಗನಿಗೆ ಸ್ವಲ್ಪ‌ ಹಣ ನೀಡಿ ಒಂದು ವರ್ಷ ಕಾಲಾವಕಾಶ ನೀಡುವುದರ ಮೂಲಕ ಕೇರಳದ‌ ಕೊಚ್ಚಿಗೆ ಕಳುಹಿಸಿಕೊಟ್ಟು ಯಶಸ್ವಿಯಾದ ಬಳಿಕ ಕರೆ ಮಾಡಿ ಎಂದು ಮನೆಯಿಂದ‌ ಕಳಿಹಿಸಿಕೊಟ್ಟಿದ್ದರು. ಇವರ ಮೊದಲಿಬ್ಬರು ಮಕ್ಕಳೂ ಅವರು ಹಾಕಿಕೊಟ್ಟ ಶರತ್ತುಗಳನ್ನು ಗೆದ್ದು, ಅವರ. ಬ್ಯುಸಿನೆಸ್ ನಡೆಸಿಕೊಂಡು ಹೋಗುವಲ್ಲಿ‌ ಯಶಸ್ವಿಯಾದರು.

[widget id=”custom_html-3″]

ಇವರ ಮೂರನೆ ಮಗ ಹದಿರಾಮ ಕುಟುಂಬ ಪ್ರೀತಿಯ ಮಗ.‌ ಚಿಕ್ಕದಿನಿಂದಲೂ ಸುಖದ‌ ಸುಪ್ಪತ್ತಿಗೆಯಲ್ಲಿ‌ ಬೆಳದವನು. ತಂದೆಯ ಬ್ಯುಸಿನೆಸ್‌ ನಲ್ಲಿ ಕೆಲಸಮಾಡಲು ಕೇಳಿದಾಗ ನಿನಗೆ ‌ಕಷ್ಟ ಎಂದರೆ ಗೊತ್ತಾ, ಸಂಪಾದನೆ ಎಂದರೆ ಗೊತ್ತಾ, ನೀನು ಕಷ್ಟ ಪಡುವವರನ್ನು‌ ದೂರದಿಂದ‌ ನೋಡಿರುತ್ತೀಯಾ, ಆಳಾಗಿ ದುಡಿದರೆನೆ‌ ಅರಸನಾಗಿ‌ ಇರಲು ಸಾಧ್ಯ.‌ ನನ್ನ ಸಾವಿರಾರು ಕೋಟಿ ವ್ಯವಹಾರಕ್ಕೆ ನನ್ನ ಮಗನೆಂದು ನಿನಗೆ ಕೆಲಸ ನೀಡಲು ಸಾಧ್ಯವಾಗುವುದಿಲ್ಲ. ನನ್ನ ಹೆಸರು ಎಲ್ಲಿಯೂ ಬಳಸದೆ , ಅಪರಿಚಿತರ‌‌ ಮಧ್ಯ ನೀನು ಇದ್ದು ಬದುಕಿನ ಎಲ್ಲ‌ ಏರುಪೇರುಗಳನ್ನು ಕಂಡು ಮುಂದೆ ಬಂದಾಗ ನಿನಗೆ‌ ನನ್ನ ಉದ್ಯಮದಲ್ಲಿ ಕೆಲಸ ನೀಡುವುದಾಗಿ ಹಲವು ಶರತ್ತುಗಳನ್ನು ಹಾಕುತ್ತಾರೆ. ಅದಕ್ಕೆ ಒಪ್ಪಿದ ಹದಿರಾಮನಿಗೆ ಬಟ್ಟೆ, ಖರ್ಚಿಗೆ 5000 ಸಾವಿರ ಹಣ ನೀಡಿ ಒಂದು ತಿಂಗಳ ಕಾಲಾವಕಾಶ‌‌ ನೀಡಿ ಕಳುಸುತ್ತಾರೆ.

[widget id=”custom_html-3″]

ಹೊಸ ಸವಾಲನ್ನು ಎದುರಿಸಲು ಸಿದ್ಧನಾದ 23 ವರ್ಷದ ಹದಿರಾಮ ಆಂದ್ರಪ್ರದೇಶದ ಹೈದರಾಬಾದ್ ಬಂದಿಳಿದು ಅಲ್ಲಿಂದ ಸಿಕಂದರಾಬಾದ್ ‌ಪ್ರಯಾಣ ಬೆಳೆಸುತ್ತಾನೆ. ಸಾವಿರಾರು ಕೋಟಿ ರೂಪಾಯಿಗಳ ಒಡೆಯನಾದ ಮಗನಿಗೆ ಕೆಲಸ ಹಾಗು ಉಳಿದುಕೊಳ್ಳಲು ವಸತಿಯ ಅವಶ್ಯಕತೆ ಇತ್ತು. ಅಲ್ಲಿನ‌ ಬೀದಿ ಬೀದಿಗಳಲ್ಲಿ ‌ಅಡ್ಡಾಡುತ್ತಾ ಪ್ರತಿ‌‌ ಅಂಗಡಿಗಳಲ್ಲಿ ಕೆಲಸಕ್ಕಾಗಿ ಬೇಡಿಕೊಳ್ಳುತ್ತಾನೆ.‌ ತಾನು ಸರ್ಕಾರಿ‌ ಕೆಲಸದ ಆಕಾಂಕ್ಷಿ ಕೆಲಸಕ್ಕಾಗಿ ಹಣದ ಅವಶ್ಯಕತೆ ‌ಇದೆ ಫುಲ್ ಟೈಮ್ ಕೆಲಸಮಾಡುವುದಾಗಿ ಹೇಳುತ್ತಾನೆ. ಅಲ್ಲಿನ ಅಡಿಡಾಸ್ ಕೆಲಸ ಗಿಟ್ಟಿಸಿಕೊಂಡು 500 ರೂ ಕೆಲಸ‌‌ ಪ್ರಾರಂಭಿಸುತ್ತಾನೆ. ಮುಂದೆ‌ ಹಲವು ಕಡೆಗಳಲ್ಲಿ ಎಲ್ಲಾ‌‌ ರೀತಿಯ ಕೆಲಸ ಮಾಡಲು ಹದಿರಾಮ‌ ಮುಂದಾಗುತ್ತಾನೆ. ಪತ್ರಿಕೆಗಳಲ್ಲಿ‌ ಬರುವ ಉದ್ಯೋಗ ‌ಜಾಹಿರಾತುಗಳನ್ನು‌ ನೋಡಿ ಕೆಲಸ‌ ಮಾಡುವುದರೊಳಗೆ 1 ತಿಂಗಳು ಕಳೆದು ಹೋಗುತ್ತದೆ. ಕೆಲಸ‌ ಮಾಡಿ ಖರ್ಚು ಮಾಡಿ‌ ಆತ ಉಳಿಸಿದ್ದು 5 ಸಾವಿರ ರೂಪಾಯಿ.

[widget id=”custom_html-3″]

ತನ್ನ‌‌ ಸ್ನೇಹಿತನ ಪೋನ್ ನಿಂದ‌‌ ತಂದೆಗೆ ಕರೆ‌ ಮಾಡಿ ತಾನು ಕಂಡ ಜೀವನ,‌ ಅನುಭವಿಸಿದ ಕಷ್ಟ ,‌ಬದುಕೆಂದರೆ ಏನು,‌ಹಣದ‌ ಮಹತ್ವ ಎಲ್ಲದ‌ ಕುರಿತು ವಿವರಿಸುತ್ತಾನೆ. ಇದರಿಂದ ಸಂತಸ ಪಟ್ಟ ಘನಾಶಾಮ‌ ತಮ್ಮ‌ ನಾಲ್ಕನೆ ಮಗ ಪಿಂಟು ಎಂಬಾತನನ್ನು‌ ಕೇರಳಕ್ಕೆ ‌ ಶರತ್ತುಗಳನ್ನು ಹಾಕಿ ಕಳುಹಿಸಿಕೊಡುತ್ತಾರೆ. ಜೀವನ ಎಂದರೆ ತಂದೆ ಗಳಿಸಿಟ್ಟ ಆಸ್ತಿಯಲ್ಲಿ ‌ಮಸ್ತಿ ಮಾಡುವುದಲ್ಲ.‌ಜೀವನ‌‌ ಎಂದರೆ ಹೋರಾಟ, ಎಕಾಂಗಿ ಹೋರಾಟ. ಅಲೆಗಳೆತ್ತರದ ಹಾಗೆ ಎದುರಾಗುವ‌ ಸಮಸ್ಯೆಗಳನ್ನು ಎದೆಗುಂದದೆ ಎದುರಿಸುವಲ್ಲಿ ಕಲಿಯುವ ಪಾಠವೇ ನಮ್ಮನ್ನು ಬದುಕಿನ ಉತ್ತುಂಗದ‌ ನಿಲುವಿನಲ್ಲಿ ನಿಲ್ಲಿಸಿ ಬೀಡುತ್ತದೆ ಎಂಬುವುದುಕ್ಕೆ‌ ಘನಾಶಾಮ ಅವರ ಈ ಮಕ್ಕಳೇ ಸಾಕ್ಷಿ.

[widget id=”custom_html-3″]