Advertisements

ಬ್ರಹ್ಮನ ಸೃಷ್ಟಿಯಾದದ್ದು ಹೇಗೆ ಗೊತ್ತಾ?

Adyathma

ಜಗತ್ತಿನಲ್ಲಿ ಯಾವುದೇ ಮನುಷ್ಯರಾಗಲಿ, ಪ್ರಾಣಿಯಾಗಲಿ, ಅಥವಾ ಇನ್ನಾವುದೇ ಜೀವರಾಶಿಯಾಗಲಿ ಎಲ್ಲವನ್ನೂ ಸೃಷ್ಟಿಸಿರುವುದು ಬ್ರಹ್ಮದೇವರು. ಅಷ್ಟೇ ಅಲ್ಲ ಆ ಜೀವಿಗಳ ಕರ್ತೃ, ಕರ್ಮ, ಕ್ರಿಯೆ ಎಲ್ಲವೂ ಅವನ ನಿರ್ಧಾರದಂತೆಯೇ ಸಾಗುತ್ತದೆ. ಪ್ರತೀಯೊಂದು ಜೀವಿಯ ಹುಟ್ಟಾಗಲಿ, ಸಾವಾಗಲಿ, ಬದುಕಾಗಲಿ ಅವನು ಬರೆದಂತೆಯೇ ನಡೆಯುತ್ತದೆ.

Advertisements

ಹಣೆಬರಹವನ್ನು ಬರೆದು ಭೂಮಿಗೆ ಕಳುಹಿಸಿ ಈ ಸಂಸಾರವೆಂಬ ಬಂಧನದಲ್ಲಿ ನೂಕಿ ಸುಖ-ದುಃಖ ನೋವು-ನಲಿವುಗಳ ಜೊತೆ ಒಂದಷ್ಟು ಅನುಭವಗಳನ್ನು ನೀಡಿ ಕೊನೆಗೆ ನಮ್ಮ ಆತ್ಮದಲ್ಲಿನ ಕರ್ಮಗಳನ್ನು ತುಲನೆ ಮಾಡಿ ಮುಕ್ತಿ ಕೊಡುವ ಅಥವಾ ನರಕಕ್ಕೆ ನೂಕುವ ಬ್ರಹ್ಮನ ಸೃಷ್ಟಿ ಹೇಗಾಯಿತು?

ಸಕಲ ಚರಾಚರಗಳ ಸೃಷ್ಟಿಕರ್ತನ ಸೃಷ್ಟಿಯು ವಿಚಿತ್ರವಾದದ್ದು.‌ ಒಮ್ಮೆ ಪ್ರಳಯ ಕಾಲದಲ್ಲಿ ನಾರಾಯಣನು ಲಕ್ಷ್ಮೀಯೊಂದಿಗೆ ನಿದ್ರಿಸುತ್ತಿದ್ದಾಗ ಅವನಿಗೆ ಜಗತ್ತಿನಲ್ಲಿ ಸೃಷ್ಟಿ ಮಾಡಬೇಕೆಂದಿನಿಸಿ ತನ್ನ ನಾಭಿಯಿಂದ ಒಂದು ಕಮಲವನ್ನು ಸೃಷ್ಟಿಸುತ್ತಾನೆ. ಆ ಕಮಲದಿಂದ ಬಂದವನೇ ಈ ಬ್ರಹ್ಮ. ಹಾಗಾಗಿಯೇ ಬ್ರಹ್ಮ ಸದಾ ಕಮಲದ ಮೇಲೆಯೇ ಕುಳಿತಿರುತ್ತಾನೆ. ಕಮಲದಿಂದ ಕೆಳಗೆ ಬಂದ ಬ್ರಹ್ಮ ತಾನ್ಯಾರು, ಏತಕ್ಕಾಗಿ ಬಂದಿರುವೆ ಎಂದು ಯೋಚಿಸಿದಾಗ ಏನೂ ಹೊಳೆಯುವುದಿಲ್ಲ. ತ

ಕ್ಷಣ ಅವನೂ ದೇವರ ಧ್ಯಾನ ಮಾಡಲು ಕೂರುತ್ತಾನೆ. ಹೀಗೇ ಧ್ಯಾನ ಮಾಡುತ್ತಾ ಸತತ 50 ವರ್ಷಗಳ ಕಾಲ ತಪಸ್ಸು ಮಾಡಿದಾಗ ಆ ನಾರಾಯಣನು ಅವನ ಮುಂದೆ ನಿಂತು ಜಗತ್ತನ್ನು ಸೃಷ್ಟಿಸಲು ನಾನು ನಿನ್ನನ್ನು ಸೃಷ್ಟಿಸಿರುವೇ, ಬ್ರಹ್ಮನು ನನ್ನಿಂದ ಹೇಗೆ ಸಾಧ್ಯವೆಂದಾಗ ನಾನೇ ನಿನ್ನಲ್ಲಿ ಕುಳಿತು ಸೃಷ್ಟಿಸುತ್ತೇನೆ. ಎಂದು ಹೇಳಿ ವಾಸುದೇವ ರೂಪದಿಂದ ಬ್ರಹ್ಮನ ಮೂಲಕ ಜಗತ್ತಿನ ಸೃಷ್ಟಿ ಮಾಡಿಸುತ್ತಾನೆ. ಜೊತೆಗೆ ನಾಲ್ಕು ದಿಕ್ಕುಗಳನ್ನೂ ಸದಾ ನೋಡಲು, ಅಲ್ಲಿಂದಲೇ ಸಕಲ ಕರ್ಮಫಲಗಳನ್ನು ಮಾಡಿಸಲು ಬ್ರಹ್ಮನಿಗೆ ಚತುರ್ಮುಖಗಳನ್ನು ಕೊಟ್ಟು ಹರಿಸಿದ ಹರಿ.

ವೈಜ್ಞಾನಿಕವಾಗಿ ಇಂದಿಗೂ ನಮ್ಮ ಸೃಷ್ಟಿಯ ಬಗ್ಗೆ ಸರಿಯಾದ ಸಾಕ್ಷ್ಯಗಳಿಲ್ಲ ಆದರೆ ನಮ್ಮ ಋಷಿಮುನಿಗಳು ಹಾಗೂ ಅವರು ಬರೆದಿರುವ ಪುರಾಣಗಳಲ್ಲಿ ಪ್ರತೀ ಸೃಷ್ಟಿಗೂ ಒಂದು ಕಾರಣವಿದೆ ಹಾಗೂ ಒಂದೊಂದು ಅರ್ಥವಿದೆ.