Advertisements

ಈ ಒಂದು ಕೋಳಿಗೆ 2 ಲಕ್ಷ , ಈ ಕೋಳಿಗಳಿಗೆ ಇಷ್ಟು ಬೆಲೆ ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ಒಂದು ಕೇಜಿ ಕೋಳಿಯ ಬೆಲೆ ಸುಮಾರು 200 ರೂಪಾಯಿ.. ಒಂದು ಕೋಳಿಯ ಬೆಲೆ 200 ರಿಂದ 400 ರೂಪಾಯಿ. ಆದರೆ ಈ ಕೋಳಿಯ ಬೆಲೆ ಬರೋಬ್ಬರಿ 2 ಲಕ್ಷ ರುಪಾಯಿಗಳು.. ಆಶ್ಚರ್ಯ ಆಗ್ತಾಯಿದಿಯೆಲ್ಲಾ. ಆಗಾದ್ರೆ ಈ ಕೋಳಿಗೆ ಇಷ್ಟು ಬೆಲೆ ಯಾಕೆ ಅಷ್ಟಕ್ಕೂ ಈ ಕೋಳಿಯ ವಿಶೇಷತೆ ಏನು ಎಂದು ನೋಡೊಣ ಬನ್ನಿ.. ಇಷ್ಟೊಂದು ಬೆಲೆ ಬಾಳುವ ಕೋಳಿಗಳು ಇರೋದು ಇಂಡೋನೇಷ್ಯಾ ದೇಶದಲ್ಲಿ.. ಅಲ್ಲಿ ಐಯಾನ್ ಚಮಲಿ ಎಂಬ ಕೋಳಿಗಳು ಇವೆ. ಇವನ್ನು ಲೆಂಬೋರ್ಗಿನಿ ಕೋಳಿಗಳು ಎಂತಲೂ ಸಹ ಕರೆಯುತ್ತಾರೆ..

Advertisements

ಅದಕ್ಕೆ ಕಾರಣ ಕೋಳಿಯ ಬೆಲೆ. ಈ ಕೋಳಿಗಳು ಕಪ್ಪು ಬಣ್ಣದಲ್ಲಿ ಇರುತ್ತವೆ.. ಅಂದರೆ ಕೆಲವು ಭಾಗ ಮಾತ್ರ ಕಪ್ಪು ಅಲ್ಲ. ಎಲ್ಲಾ ಕಪ್ಪಾಗೆ ಇರುತ್ತದೆ.. ಕೋಳಿಯ ರೆಕ್ಕೆ, ದೇಹ, ಕಣ್ಣು, ಮೊಟ್ಟೆ ಅಷ್ಟೇ ಅಲ್ಲದೇ ಹೊಳಗೆ ಇರುವ ಮಾಂ’ಸ ಕೂಡ ಕಪ್ಪು ಬಣ್ಣದಲ್ಲಿ‌ ಇರುತ್ತದೆ. ಇದೇ ಈ ಕೋಳಿಗಳ ವೈಶಿಷ್ಟ್ಯತೆ. ಅಷ್ಟು ಬೆಲೆ ಕೊಟ್ಟು ಈ ಕೋಳಿಗಳನ್ನ ಖರೀದಿ ಮಾಡಲು ಕಾರಣ ಏನು ಗೊತ್ತಾ? ಕೋಳಿಯ ವಯಸ್ಸಿಗೆ ತಕ್ಕಂತೆ ಅದರ ಬೆಲೆಯನ್ನ ನಿಗದಿ ಮಾಡಲಾಗುತ್ತದೆ. ಹೆಚ್ಚು ವಯಸ್ಸಿನ ಕೋಳಿಗೆ ಹೆಚ್ಚು ಬೆಲೆ.. ಎರಡು ಲಕ್ಷ ಬೆಲೆಯ ಕೋಳಿಗಳ ತೂಕ ಸುಮಾರು ಒಂದೂವರೆ ಕೇಜಿಯಿಂದ ಎರಡು ಕೇಜಿಯವರೆಗೂ ಇರುತ್ತದೆ.

ಇದರ ಮೂಲ ಇಂಡೋನೇಷ್ಯಾ ಆಗಿದ್ದು ಅಲ್ಲಿನ ಕೋಳಿಗೆ ಮಾತ್ರ ಈ ಬೆಲೆ ಸಿಗುತ್ತದೆ.. ಈ ಕೋಳಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲದೇ ಆರೋಗ್ಯಕರವಾಗಿ ತುಂಬಾ ಒಳ್ಳೆಯದು. ಈ ಕೋಳಿಯ  ಮಾಂ’ಸದಲ್ಲಿ ಐರಾನ್ ಕಂಟೆಂಟ್ ಹೆಚ್ಚಾಗಿರುತ್ತದೆ, ಇವುಗಳನ್ನ ಹೆಚ್ಚಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ತಿನ್ನುತ್ತಾರೆ‌. ಗರ್ಬಿಣಿಯರು ಈ ಕೋಳಿಯನ್ನು ತಿಂದರೆ ಹುಟ್ಟುವ ಮಗು ತುಂಬಾ ಆರೋಗ್ಯವಾಗಿ ಹುಟ್ಟುತ್ತದೆ ಎಂದು ಅಲ್ಲಿ ನಂಬುತ್ತಾರೆ. ಈ ಕೋಳಿಗೆ ಮಲೇಷಿಯಾ, ಸಿಂಗಾಪುರ್, ಅಮೇರಿಕ ಹಾಗೂ ಇತರೆ ದೇಶಗಳಲ್ಲಿ ಬಾರಿ ಬೇಡಿಕೆ ಇದೆ.. ಇನ್ನೂ ಈ ಕೋಳಿಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.