Advertisements

ಕೆಲವು ವರ್ಷದ ಹಿಂದೆ ಒಬ್ಬ ನರ್ಸ್ ಆಗಿದ್ದ ಇವರು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಇಡೀ ಬೆಂಗಳೂರು ಇವರನ್ನು ತಿರುಗಿ ನೋಡುತ್ತಿದೆ.. ದಿಟ್ಟ ಮಹಿಳೆಯ ರೋಚಕ ಜರ್ನಿ.

Inspire Kannada Mahiti

ನಮಸ್ತೆ ಸ್ನೇಹಿತರೆ, ಬದುಕುವ ಛಲ ಇದ್ದವರಿಗೆ ಸಾವಿರಾರು ಮಾರ್ಗಗಳು ಇರುತ್ತವೆ.. ಸಾಧನೆಯನ್ನ ಮಾಡಲೇಬೆಕು ಎಂದು ಹೊರಟವರು ಎಂದೂ ಕೂಡ ಅದರಿಂದ ಹಿಂದೆ ಸರಿಯಬಾರದು. ಇನ್ನೂ ಇಲ್ಲೊಬ್ಬ ಮಹಿಳೆ ವಿಶೇಷವಾದ ಸಾಧನೆಯನ್ನ ಮಾಡಿ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೈರ್ಯ ಮತ್ತು ಛಲ ಇದ್ದರೆ ಎನನ್ನಾದರು ಸಾಧಿಸಬಹುದೆಂದು ತೋರಿಸಿದ ದಿಟ್ಟ ಮಹಿಳೆಯ ರೋಚಕ ಕಥೆ ಇದು‌.. ಈ ಮಹಿಳೆಯ ಹೆಸರು ಪ್ರೇಮ ರಾಮಪ್ಪ. ಇವರಿಗೆ 36 ವರ್ಷ ವಯಸ್ಸು. ಇವರು ಬೆಳಗಾವಿಯ ಬೈರನಡ್ಡಿ ಎಂಬ ಊರಿನವರು.. ಇನ್ನೂ ಕೆಲವು ವರ್ಷದ ಹಿಂದೆ ಪ್ರೇಮ ಅವರು ಒಬ್ಬ ನರ್ಸ್ ಆಗಿದ್ದರು.

Advertisements

ಆದರೆ ಈ ಕೆಲಸವನ್ನು ನಂತರ ಬಿಟ್ಟು ಬಿಡುತ್ತಾರೆ.. ಅವರಿಗೆ ತಾನು ಮುಂದೊಂದು ದಿ‌ನ ಈಗೆ ಆಗುತ್ತೇನೆ ಎಂಬ ಸಣ್ಣ ಯೋಚನೆಯೂ ಕೂಡ ಇರಲಿಲ್ಲ. ಪ್ರೇಮ ಅವರು ಬೇರೆ ಕೆಲಸವನ್ನು ಹುಡುಕಲು ಬಹಳ ಪ್ರಯತ್ನ ಮಾಡುತ್ತಿದ್ದರು.‌. ಆದರೆ ಯಾವುದೂ ಕೂಡ ಇವರ ಕೈ ಹಿಡಿಯಲಿಲ್ಲ. ಇನ್ನೂ ಪ್ರೇಮ ಅವರಿಗೆ ಚಿಕ್ಕಂದಿನಿಂದಲೂ ಡ್ರೈವಿಂಗ್ ಮಾಡುವ ಕನಸನ್ನು ಹೊತ್ತಿದ್ದರು. ಇವರ ಗಂಡ ಇಹಲೋಕ ತ್ಯಜಿಸಿದ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ಇವರ ಮೇಲೆ ಬೀಳುತ್ತದೆ.. ತನ್ನ ವಯಸ್ಸಾದ ತಾಯಿ ಹಾಗೂ 11 ವರ್ಷದ ಮಗನನ್ನ ಇವರೇ ಸಾಕಬೇಕಾಗಿತ್ತು.

ಆರ್ಥಿಕ ಪರಿಸ್ಥಿತಿಯ ಒತ್ತಡದಿಂದ ಇವರು ಬೆಂಗಳೂರಿನ ಮೆಟ್ರೋ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್ ಅಂದರೆ ಬಿ.ಎಮ್.ಟಿಸಿ ಗೆ ಅಪ್ಲೈ ಮಾಡುತ್ತಾರೆ.. ಇವರ ಜೊತೆಯಲ್ಲಿ ಇನ್ನೂ ಆರು ಜನ ಮಹಿಳೆಯರು ಆಯ್ಕೆ ಆಗುತ್ತಾರೆ. ಆದರೆ ಅವರು ಕಂಡಕ್ಟರ್ ಆಗಿ ಕೆಲಸ ಮಾಡಲು ಇಚ್ಛಿಸುತ್ತಾರೆ.. ಪ್ರೇಮ ಅವರು ಮಾತ್ರ ಡ್ರೈವರ್ ಆಗಲು ಒಪ್ಪುತ್ತಾರೆ. ಆದ್ದರಿಂದ ಪ್ರೇಮ ಅವರೇ ಬೆಂಗಳೂರಿನ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.. ಪ್ರೇಮ ಅವರು ಮೊದಲು ಲಾರಿ ಡ್ರೈವಿಂಗ್ ಕಲಿತು. ಹೆವಿ ವೈಕಲ್ ಡ್ರೈವಿಂಗ್ ಲೈಸೆನ್ಸ್ ಪಡೆದು ನಂತರ ಬಿಎಮ್ ಟಿಸಿಗೆ ಅಪ್ಲೈ ಮಾಡುತ್ತಾರೆ.

ಟ್ರಾನ್ಸ್ ಪೋರ್ಟ್ ಕಮೀಷನರ್ಸ್ ಆಫೀಸ್ ನಲ್ಲಿ ಪುರುಷ ಚಾಲಕರು ಒಂದು ತಿಂಗಳು ಟ್ರೈನಿಂಗ್ ಪಡೆದರೆ.. ಆಶ್ಚರ್ಯವೆಂಬಂತೆ ಪ್ರೇಮ ಅವರು ಕೇವಲ 8  ದಿನಗಳಲ್ಲಿ ಡ್ರೈವಿಂಗ್ ಟ್ರೈನಿಂಗ್ ಮುಗಿಸಿದ್ದಾರೆ. ಇನ್ನೂ ಇವರ ಸರ್ವೀಸ್ ನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ.. ಪ್ರೇಮ ಅವರು ಕೆಲವೊಮ್ಮೆ ವಾಯುವಜ್ರ ಏರ್ಪೋರ್ಟ್ ಬಸ್ ಗಳನ್ನು ಸಹ ಡ್ರೈವಿಂಗ್ ಮಾಡುತ್ತಾರೆ. ನೈಟ್ ಶಿಪ್ಟ್ ಹೆಣ್ಣು ಮಕ್ಕಳಿಗೆ ಸುರಕ್ಷತೆ ಅಲ್ಲ ಎಂದು ಹೇಳುತ್ತಾರೆ.. ಆದರೆ ಪ್ರೇಮ ಮಾತ್ರ ಒಂದು ದಿನವೂ ಕೂಡ ಯಾವುದೇ ಕಿ’ರುಕುಳಕ್ಕೆ ಹೊಳಗಾಗದೆ ನೈಟ್ ಶಿಪ್ಟ್ ಸಹ ಕೆಲಸ ಮಾಡುತ್ತಿದ್ದಾರೆ.

ಅಲ್ಲಿ ಕೆಲಸ ಮಾಡುವ ಬಸ್ ಡ್ರೈವರ್ಸ್ ಕೂಡ ಅವರ ಜೊತೆ ವಿನಯದಿಂದ ನಡೆದುಕೊಳ್ಳುತ್ತಿದ್ದರಂತೆ.. ಈ ಹಿಂದೆ ಬಿಎಮ್ ಟಿಸಿ ಬಸ್ ಡ್ರೈವರ್ ಎಲ್ಲಾ ಒಂದು ದಿನದ ಮಟ್ಟಿಗೆ ಕೆಲಸವನ್ನು ಸ್ಥಗಿಸಗೊಳಿಸಿದ್ದರು. ಆದರೆ ಪ್ರೇಮ ಅವರು ಮಾತ್ರ ಡ್ಯೂಟಿಗೆ ರಿಪೋರ್ಟ್ ಆಗಿದ್ದಾರೆ.. ಅದಕ್ಕಾಗಿ ಟ್ರಾನ್ಸ್ ಪೋರ್ಟ್ ಮಿನಿಸ್ಟರ್ 10 ಸಾವಿರ ರೂಪಾಯಿ ಚೆಕ್ ನೀಡಿದ್ದರು. ಮತ್ತು ಚಿತ್ರದುರ್ಗದ ಮುರುಗರಾಜೇಂದ್ರ ಮಠದಿಂದ 5 ಸಾವಿರ ರೂಪಾಯಿ ಚೆಕ್ ಅನ್ನು ಪಡೆದುಕೊಂಡಿದ್ದಾರೆ‌.. ಪ್ರೇಮ ಅವರು ಅವರ ಸಹೋದ್ಯೋಗಿಗಳ ಜೊತೆ ನನ್ನ ಬಳಿ ಪ್ರಯಾಣಿಕರು ಅಸಭ್ಯವಾಗಿ ನಡೆದುಕೊಂಡಿದ್ದನ್ನು ಇದುವರೆಗೂ ಕಂಡಿಲ್ಲ..

ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗೂ ಒಂದು ಪತ್ರಿಕೆ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.. ನನಗೆ ನೈಟ್ ಡ್ಯೂಟಿ ಆದರೂ ಪರವಾಗಿಲ್ಲ ನಾನು ಮಾಡುತ್ತೇನೆ ಪ್ರಸ್ತುತ ಈಗಿನ ಶಿಪ್ಟ್ ಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ. ಅಥವಾ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಇರುತ್ತದೆ.. ನಾನು ನನ್ನ ಕೆಲಸಕ್ಕೆ ಬದ್ದಳಾಗಿದ್ದಾನೆ. ರಾತ್ರಿ ಒಂದು ಗಂಟೆಯಾದರೂ  ಕೆಲಸ ಮಾಡುವುದಾದರು ನಾನು ತಲೆ ಕೆಡಸಿಕೊಳ್ಳುವುದಿಲ್ಲ ಕೆಲಸ ಮಾಡುತ್ತೇನೆ ಎಂದಿದ್ದಾರೆ.. ಈ ದಿಟ್ಟ ಮಹಿಳೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ‌.