Advertisements

ಕೆಲವೇ ದಿನಗಳಲ್ಲಿ ಬೊಜ್ಜು ಇಳಿಸಲು ಇಲ್ಲಿದೆ ಉತ್ತಮ ಉಪಾಯ!

Kannada Mahiti

ನಮ್ಮ ದೇಹ ತೂಕವನ್ನು ಇಳಿಸುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಎಷ್ಟೇಷ್ಟೋ ಸರ್ಕಸ್ ಮಾಡಬೇಕು, ಡಯಟ್, ವರ್ಕೌಟ್ ಹೀಗೆ.. ಆದರೂ ತೂಕ ಇಳಿಸಲು ಸಾಧ್ಯವಾಗುವುದೆ ಇಲ್ಲ. ಹೀಗಾಗಿ ಸಾಕಷ್ಟು ಜನ ಇದಕ್ಕಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ರಾಸಾಯನಿಕ ಪದಾರ್ಥಗಳನ್ನು ಸೇವಿಸುವುದು ಮೊದಲಾದ ತಪ್ಪುಗಳನ್ನು ಮಾಡುತ್ತಾರೆ. ಇವು ಭವಿಷ್ಯದಲ್ಲಿ ನಮ್ಮ ಆರೊಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದೇ ಹೊರತು ಒಳ್ಳೆಯದಲ್ಲ.

ಹಾಗಾಗಿ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೇವಲ ಉತ್ತಮ ಫಲಿತಾಂಶವನ್ನು ಮಾತ್ರ ಕೊಡುವ ಮನೆಮದ್ದುಗಳನ್ನು ಬಳಸುವುದು ಸೂಕ್ತ. ಅಂತಹ ಒಂದು ಮನೆಮದ್ದು ನಿಮ್ಮ ಮುಂದೆ!
ಚಿಯಾ ಬೀಜ.. ಈ ಹೆಸರನ್ನು ಎಲ್ಲರೂ ಕೇಳಿರಲು ಸಾಧ್ಯವಿಲ್ಲ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂಥದ್ದಾದರೂ ಇದರ ಬಳಕೆ ತೀರಾ ಕಡಿಮೆ. ಹಾಗಾಗಿ ಎಲ್ಲರೂ ಈ ಹೆಸರನ್ನು ಕೇಳಿರುವುದಿಲ್ಲ. ಆದರೆ ಇದೊಂದು ಪೋಷಕಾಂಶಗಳ ಗಣಿ ಎಂದರೆ ತಪ್ಪಾಗಲಾರದು. ಚಿಯಾ ಬೀಜ, ಬೇಕಾದಷ್ಟು ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಒಮೆಗಾ -3 ಅಂದರೆ ಉತ್ತಮ ಕೊಬ್ಬನ್ನು ಹೊಂದಿದೆ.

ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ತೂಕ ಇಳಿಸಲೂ ಸಹಾಯಕಾರಿ. ಹಾಗಾದ್ರೆ ಚಿಯಾ ಬೀಜ ತೂಕ ಇಳಿಸಲು ಹೇಗೆ ಸಹಾಯಕಾರಿ ಅಂತಿರಾ? ಇಲ್ಲಿದೆ ಉತ್ತರ. ಚಿಯಾ ಬೀಜ ಹೊಟ್ಟೆ ತುಂಬಿಸುವ ಆಹಾರವಿದ್ದಂತೆ. ನೀವು ದಿನಕ್ಕೆ 30 ಗ್ರಾಂ ನಷ್ಟು ಇದನ್ನು ಸೇವಿಸುತ್ತಾ ಬಂದರೆ ನಿಮಗೆ ಅತಿಯಾಗಿ ಹಸಿವಾಗುವುದು ನಿಯಂತ್ರಣಕ್ಕೆ ಬರುತ್ತದೆ. ದೇಹ ತೂಕ ಹೆಚ್ಚಾಗಲು ನಾವು ಅಗತ್ಯಕ್ಕಿಂತ ಅತಿಯಾಗಿ ಆಹಾರವನ್ನು ಸೇವಿಸುವುದು ಕೂಡ ಒಂದು ಪ್ರಮುಖ ಕಾರಣ. ಹಾಗಾಗಿ ದಿನವೂ ಸ್ವಲ್ಪವೇ ಆಹಾರವನ್ನು ಸೇವಿಸಿ ಚಿಯಾ ಬೀಜವನ್ನು ಸೇವಿಸಿದರೆ ನಿಮ್ಮ ಅತಿಯಾದ ಹಸಿವೆಯನ್ನು ನಿಯಂತ್ರಣದಲ್ಲಿಡಬಹುದು.

ಚಿಯಾ ಬೀಜವನ್ನು ಸೇವಿಸುವುದು ಹೇಗೆ? ಒಂದು ಅರ್ಧ ಚಮಚದಷ್ಟು ಚಿಯಾ ಬೀಜವನ್ನು ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ ಒಂದು ಗಂಟೆಗಳ ಕಾಲ ನೆನೆಸಿಟ್ಟರೂ ಸಾಕು ಅಥವಾ ರಾತ್ರಿ ನೆನೆಸಿಟ್ಟು ಬೆಳಗಿನ ಹೊತ್ತಿನಲ್ಲಿ ತಿನ್ನಬಹುದು. ಇದನ್ನು ನೀರಿಗೆ ಹಾಕಿದರೆ ದಪ್ಪವಾಗುತ್ತದೆ. ಹಾಗಾಗಿ ನೇರವಾಗಿ ಇದನ್ನು ಸೇವಿಸಬಹುದು. ಅಷ್ಟೇ ಅಲ್ಲದೇ ಚಿಯಾ ಬೀಜವನ್ನು ನೀವು ದಿನವೂ ಸೇವಿಸುವ ಯಾವುದೇ ಆಹಾರ ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಹುದು. ಜ್ಯೂಸ್ ಮಾಡಿಕೊಂಡು ಅಥವಾ ಸಲಾಡ್ ಗಳಲ್ಲಿಯೂ ಬೆರೆಸಿಕೊಂಡು ಸೇವಿಸಬಹುದು. ಇದನ್ನು ಯಾವುದೇ ರೀತಿಯಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.