Advertisements

ಅತೀ ಕಡಿಮೆ ದರದಲ್ಲಿ ಬೌನ್ಸ್ ಬೈಸಿಕಲ್ ಹಾಗೂ ಬೈಕ್ ಗಳ ಮಾರಾಟ ! ಎಷ್ಟು ಗೊತ್ತಾ?

News

ಬೆಂಗಳೂರಿನಲ್ಲಿ ಹೆಚ್ಚಾಗಿ ಜನಪ್ರಿಯವಾಗಿರುವ, ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲು ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವ ಬೌನ್ಸ್ ಸ್ಕೂಟರ್ ಗಿಂತ ಉತ್ತಮವಾದದ್ದು ಮತ್ತೊಂದಿಲ್ಲ. ಇನ್ನು ಸ್ಕೂಟರ್ ರೆಂಟಲ್ ಸ್ಟಾರ್ಟ್ ಅಪ್ ಆಗಿರುವ ಬೌನ್ಸ್ ಅಪ್ಡೇಟ್ ಆಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಲು ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.

Advertisements

ಇನ್ನು ಇದೆ ಕಾರಣದಿಂದ ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿರುವ ಬೌನ್ಸ್ ತನ್ನಲ್ಲಿರುವ 1500 ಬೌನ್ಸ್ ಬೈಸಿಕಲ್ ಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಅದು ಕೇವಲ 800 ರೂಪಾಯಿಗಳಿಗೆ. ಎಲೆಕ್ಟ್ರಿಕ್ ವೆಹಿಕಲ್ ಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿರುವ ಬೌನ್ಸ್ ಸ್ಕೂಟರ್ ಶೇರಿಂಗ್ ಉದ್ಯಮದತ್ತ ಹೆಚ್ಚು ಗಮನ ಹರಿಸುತ್ತಿದೆ. ಇನ್ನು ಕಡಿಮೆ ದೂರ ಚಲಿಸಲು ಬೈಕ್ ಗಳು ಉತ್ತಮವಾಗಿದ್ದು, ಇಂಧನ ಚಾಲಿತ ೫೦೦ ಬೌನ್ಸ್ ಸ್ಕೂಟರ್ ಗಳನ್ನ ಮಾರಾಟ ಮಾಡುತ್ತಿದ್ದೇವೆ ಎಂದು ಬೌನ್ಸ್ ಕಂಪನಿ ಹೇಳಿದೆ.

ಇನ್ನು ಬಳಕೆಯಾಗಿರುವ ಕೆಲವು ಬೌನ್ಸ್ ಸ್ಕೂಟರ್ ಗಳನ್ನ ಮರಳು ಮುಂದಾಗಿರುವುದರಿಂದ, ಕಂಪೆನಿಯನ್ನ ಮುಚ್ಚುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆಗುತ್ತಿದೆ. ಆದರೆ ವಾಟ್ಸಾಪ್ ಗಳಲ್ಲಿ ಏನೇ ವೈರಲ್ ಆದರೂ ನಾವು ಮಾರುತ್ತಿರುವುದು ಬಳಕೆಯಾದ ಬೈಕ್ ಗಳನ್ನಷ್ಟೇ ಎಂದು ಬೌನ್ಸ್ ಸಹ ಸಂಸ್ಥಾಪಕರಾಗಿರುವ ವಿವೇಕಾನಂದ ಹಳ್ಳೆಕೆರೆ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.