Advertisements

ರೈಲಿನಲ್ಲಿ ಓಬ್ಬನೇ ಹೋಗುತ್ತಿದ್ದ ಹಿಂದೂ ಹುಡುಗನಿಗೆ ಮುಸ್ಲಿಂ ಮಹಿಳೆ ಮಾಡಿದ ಕೆಲಸ ನೋಡಿದ್ರೆ ಶಾ’ಕ್ ಆಗ್ತೀರಾ..

Inspire Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಜಿಗುಪ್ಸೆ ಉಂಟಾದಾಗ ಅಥವಾ ಏನಾದರೂ ಕಷ್ಟ ಬಂದಾಗ ನಮ್ಮ ಜೊತೆ ಯಾರಾದರೂ ಇದ್ದೀವಿ ಎಂಬ ದೈರ್ಯ ಕೊಟ್ಟರೆ ನಮಗೆ ಆನೆ ಬಲ ಬಂದಾಗೆ ಆಗುತ್ತದೆ.. ಆದರೆ ಈಗ ಕಷ್ಟದಲ್ಲಿ ಜೊತೆಗೆ ನಿಲ್ಲುವವರು ಬಹಳ ವಿರಳ ಎಂದು ಹೇಳಬಹುದು‌. ಇನ್ನೂ ಈ ಮಾಹಿತಿಯಲ್ಲಿ ಕಿರಣ್ ಎಂಬ ಐಟಿ ಹುಡುಗನ ಜೀವನದಲ್ಲಿ ನಡೆದಂತಹ ಘಟನೆ ತಿಳಿದುಕೊಳ್ಳೋಣ ಬನ್ನಿ.. ಕಿರಣ್ ಕಷ್ಟಪಟ್ಟು ಓದಿ ಇಂಜಿನಿಯರಿಂಗ್ ಡಿಗ್ರಿ ಪಡೆದು.. ಚೆನ್ನೈನ ಒಂದು ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಿರಣ್ ಮೂಲತಃ ತಿರುಪ್ಪೂರ್ ಜಿಲ್ಲೆಗೆ ಸೇರಿದವರು.. ತಿರುಪ್ಪೂರ್ ನಲ್ಲಿ ತಂದೆ ತಾಯಿ ವಾಸಮಾಡುತ್ತಿದ್ದರೆ. ಕಿರಣ್ ಚೆನ್ನೈ ಸಿಟಿಯಲ್ಲಿ ಒಂದು ರೂಮ್ ಬಾಡಿಗೆ ಪಡೆದು ಕೆಲಸಕ್ಕೆ ಹೋಗುತ್ತಾ ಜೀವನ ನಡೆಸುತ್ತಿದ್ದಾನೆ.

Advertisements

ತಿರಪ್ಪೂರ್ ನಿಂದ ಚೆನ್ನೈಗೆ ಸುಮಾರು 400 ಕಿಲೋಮೀಟರ್ ಗಳ ಅಂತರವಿದೆ.. ಇನ್ನೂ ಕಿರಣ್ ಓದಿದ್ದು ಬೆಳೆದಿದ್ದು ಎಲ್ಲಾ ತಿರಪ್ಪೂರ್ ನಲ್ಲಿ. ಕಳೆದ ಒಂದು ವರ್ಷದಿಂದ ಚೆನ್ನೈನಲ್ಲಿ ವಾಸ ಮಾಡುತ್ತಿದ್ದಾನೆ. ಒಂದು ದಿನ ಕಿರಣ್ ಗೆ ದಿಡೀರ್ ಎಂದು ಫೋನ್ ಮಾಡಿದ ತಂದೆ.. ನಿನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಆಸ್ವತ್ರೆಯಲ್ಲಿ ಅಡ್ಮೀಟ್ ಮಾಡಿದ್ದೀವಿ ಆದಷ್ಟು ತಿರಪ್ಪೂರ್ ಗೆ ಬಾ ಎಂದು ಹೇಳುತ್ತಾರೆ. ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಕಿರಣ್ ಗೆ.. ತಾಯಿಗೆ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ಕೇಳಿದ ಕೂಡಲೇ ಆಕಾಶವೇ ಕೆಳಗೆ ಬಿದ್ದಾಗೆ ಆಯಿತು.. ಆ ಕೂಡಲೇ ಕೆಲಸಕ್ಕೆ ಒಂದು ವಾರ ರಜೆ ಹಾಕಿ ಟ್ರೈನ್ ಮೂಲಕ ಚೆನ್ನೈನಿಂದ ತಿರಪ್ಪೂರ್ ಗೆ ಪ್ರಯಾಣ ಆರಂಭಿಸಿದ. ತಾಯಿಯ ಬಗ್ಗೆ ಗಾಡವಾಗಿ ಯೋಚಿಸುತ್ತಾ ಕಿರಣ್ ಟ್ರೈನ್ ಅತ್ತಿ ಒಂದು ಬೋಗಿಯಲ್ಲಿ ಕುಳಿತುಕೊಂಡ..

ಕೆಲವು ಸಮಯದ ನಂತರ ಸುಮಾರು 45 ವರ್ಷ ವಯಸ್ಸಿನ ಮುಸ್ಲಿಂ ಮಹಿಳೆ ಎಂಟ್ರಿ ಕೊಡುತ್ತಾರೆ. ಈ ಮಹಿಳೆ ಕೂಡ ಕಿರಣ್ ಜೊತೆಗೆ ಪ್ರಯಾಣ ಮಾಡಲು ಬಂದಿದ್ದರು.. ಕಿರಣ್ ಕೂತಿದ್ದ ಸೀಟಿನ ಎದುರಿಗೆ ಈ ಮಹಿಳೆ ಕುಳಿತುಕೊಳ್ಳುತ್ತಾರೆ.. ಈ ಮಹಿಳೆಯ ಊರು ಹೆಸರು ಯಾವುದು ಎಂದು ಕಿರಣ್ ಅವರಿಗೆ ಗೊತ್ತಿರಲಿಲ್ಲ. ಈ ರೀತಿ ಒಬ್ಬರಿಗೊಬ್ಬರು ಎದರುಗಡೆ ಕೂತು ರೈಲಿನಲ್ಲಿ ತಾವು ಹೋಗಬೇಕಿದ್ದ ಜಾಗಕ್ಕೆ ಪ್ರಯಾಣ ಮಾಡುತ್ತಿದ್ದರು.. ಕೆಲವು ಸಮಯದ ಬಳಿಕ ಕಿರಣ್ ಅವರಿಗೆ ಮತ್ತೊಮ್ಮೆ ಕರೆ ಮಾಡಿದ ತಂದೆ.. ತಾಯಿ ಅರೋಗ್ಯ ಸ್ಥಿತಿ ಮತ್ತಷ್ಟು ಗಂ’ಭೀರವಾಗಿದೆ ಎಂದು ಹೇಳುತ್ತಾರೆ. ಈ ಸುದ್ದಿಯನ್ನು ಕೇಳಿ ಕಿರಣ್ ಬಿಕ್ಕಿ ಬಿಕ್ಕಿ ಅಳಲು ಶುರುಮಾಡುತ್ತಾನೆ..

ಕಿರಣ್ ಅಳುವ ಶಬ್ದ ಕೇಳಿ ಪಕ್ಕದ ಬೋಗಿಯಲ್ಲಿ ಕೂತಿದ್ದ ಪ್ರಯಾಣಿಕರು ಎದ್ದು ಬಂದು ಕೋಪದಿಂದ ನಮ್ಮ ನಿದ್ರೆಗೆ ತೊಂದರೆಯಾಗುತ್ತಿದೆ ನಿನ್ನ ಅಳುವನ್ನು ನಿಲ್ಲಿಸು ಎಂದು ರೇಗಾಡಿ ಹೋಗುತ್ತಾರೆ. ಇನ್ನೂ ಕಿರಣ್ ಮನಸಿನಲ್ಲಿ ಇದ್ದ ದುಃಖವನ್ನು ಯಾರೂ ಸಹ ಕೇಳಲಿಲ್ಲ.. ಎದುರಗಡೆ ಕೂತಿದ್ದ ಮುಸ್ಲಿಂ ಮಹಿಳೆ ಕಿರಣ್ ಗೆ ಏನೋ ದೊಡ್ಡ ಸ’ಮಸ್ಯೆ ಆಗಿದೆ ಎಂದು ಅರ್ಥ ಮಾಡಿಕೊಳ್ಳುತ್ತಾಳೆ. ತಾಯಿಗೆ ಉಷಾರಿಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕಿರಣ್ ಬಳಿ ಹೋದ ಈ ಮಹಿಳೆ ಆತನ ಸಮಸ್ಯೆಯ ಬಗ್ಗೆ ವಿಚಾರಿಸುತ್ತಾರೆ.. ಆಗ ಕಿರಣ್ ಏನು ಇಲ್ಲಾ ಎಂದು ಹೇಳುತ್ತಾನೆ. ಮತ್ತೊಮ್ಮೆ ಈ ಮಹಿಳೆ ನಿನ್ನ ಸಮ’ಸ್ಯೆಯನ್ನು ನನ್ನ ಹತ್ತಿರ ಹಂಚಿಕೋ ಎಂದು ಕೇಳುತ್ತಾರೆ‌.. ಆಗ ತನ್ನ ತಾಯಿಯ ಬಗ್ಗೆ ತಿಳಿಸಿ ಇದೇ ಕಾರಣಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ ಎಂದು ತಿಳಿಸುತ್ತಾನೆ.

ಇನ್ನೂ ಈ ವಿಷಯ ಕೇಳಿದ ಮುಸ್ಲಿಂ ಮಹಿಳೆಯೂ ಕೂಡ ಭಾವುಕರಾಗುತ್ತಾರೆ.. ಆನಂತರ ಕಿರಣ್ ಪಕ್ಕದಲ್ಲಿ ಕೂತು ಸಮಾಧಾನ ಮಾಡುತ್ತಾರೆ.. ಜೀವದ ಬೆಲೆ ಏನು ಎಂದು ನನಗೆ ತಿಳಿದಿದೆ.. ನಿನ್ನ ಹೃದಯದಲ್ಲಿ ತಾಯಿಗೆ ಎಂತಹ ಸ್ಥಾನ ಕೊಟ್ಟಿದ್ದೀಯಾ ಎಂದು ನನಗೆ ಗೊತ್ತಾಗುತ್ತಿದೆ. ನನ್ನ ಗಂಡ ಕೂಡ ಕೆಲವೇ ತಿಂಗಳ ಹಿಂದೆ ತೀ’ರಿಕೊಂಡರು.. ನಮ್ಮವರನ್ನು ನಾವು ಕಳೆದುಕೊಂಡಾಗ ದುಃಖವನ್ನು ತಡೆದುಕೊಳ್ಳುವುದು ಕಷ್ಡ. ದುಃಖ ಪಡಬೇಡ.. ಕಷ್ಟ ಎಂಬುದು ಎಲ್ಲರಿಗೂ ಸಹ ಬರುತ್ತದೆ ಎಂದು ದೈರ್ಯ ತುಂಬುತ್ತಾರೆ. ಇನ್ನೂ ಮುಸ್ಲಿಂ ಮಹಿಳೆ ಎಷ್ಟೇ ಸಮಾಧಾನ ಮಾಡಿದರು ಕಿರಣ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ದಾರಿ ಉದ್ದಕ್ಕೂ ಕಿರಣ್ ಅಳುತ್ತಲೇ ಇದ್ದ. ಕೆಲ ಹೊತ್ತಿನ ನಂತರ ತಿರಪ್ಪೂರ್ ಸ್ಟಾಪ್ ಬರುತ್ತದೆ.. ಕಿರಣ್ ತನ್ನ ಲಗೇಜ್ ಬ್ಯಾಗ್ ಗಳನ್ನು ಎತ್ತಿಕೊಂಡು ಇಳಿಯುತ್ತಾನೆ..

ಆಗ ಕಿರಣ್ ಗೆ ತನ್ನನ್ನು ಸಮಾಧಾನ ಮಾಡುತ್ತಿದ್ದ ಮುಸ್ಲಿಂ ಮಹಿಳೆ ನೆನಪಾಗಿ ಅವರಿಗೆ ಧನ್ಯವಾದ ತಿಳಿಸಿಬೇಕೆಂದು ಮತ್ತೆ ಆ ಮಹಿಳೆ ಬಳಿಗೆ ಹೋಗಿ.. ನೀವು ಎಲ್ಲಿ ಇಳಿಯುತ್ತೀರಾ! ನಿಮ್ಮ ಸ್ಟಾಪ್ ಯಾವುದು ಎಂದು ಕಿರಣ್ ಕೇಳುತ್ತಾನೆ. ಆಗ ಈ ಮಹಿಳೆ ನಗುತ್ತಾ ನಾನು ಹಿಂದಿನ ಸ್ಟಾಪ್ ನಲ್ಲೇ ಇಳಿಯಬೇಕಾಗಿತ್ತು.. ಆದರೆ ನೀನು ಅಳುತ್ತಿದ್ದನ್ನು ನೋಡಿ, ಜೊತೆಯಲ್ಲೇ ಇದ್ದು ಧೈರ್ಯ ತುಂಬಿಸುವ ಕಾರಣದಿಂದ ನಾನು ಇಲ್ಲಿಯವರೆಗೂ ಬಂದೆ ಎಂದು ಹೇಳುತ್ತಾರೆ. ಮಹಿಳೆ ಹೇಳಿದ ಮಾತನ್ನು ಕೇಳಿ ಕಿರಣ್ ಗೆ ಆಶ್ಚರ್ಯವಾಯಿತು..

ಮತ್ತೆ ಹೇಗೆ ವಾಪಸ್ ಹೋಗುತ್ತೀರಾ ಎಂದು ಮಹಿಳೆಗೆ ಕೆಳುತ್ತಾನೆ. ಆಗ ಆಕೆ ನಾನು ಬಸ್ ಗೆ ಹೋಗುತ್ತೇನೆ.. ಮೊದಲು ಹೋಗಿ ನಿಮ್ಮ ತಾಯಿಯನ್ನು ನೋಡು ಎಂದು ಹೇಳುತ್ತಾರೆ.. ನಂತರ ಕಿರಣ್ ಈಗಿನ ಕಾಲದಲ್ಲೂ ನಿಮ್ಮಂತಹವರು ಇದ್ದಾರೆ ಎಂಬುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ಎಂದಿಗೂ ಮರೆಯೋದಿಲ್ಲ ಎಂದು ಕಿರಣ್ ತಾಯಿಯನ್ನು ನೋಡಲು ಕಾತುರದಿಂದ ಹೊರಟು ಹೋಗುತ್ತಾನೆ.. ಈಕಡೆ ಮುಸ್ಲಿಂ ಮಹಿಳೆ ಕೂಡ ಬಸ್ ಅತ್ತಿ ಹೊರಡುತ್ತಾರೆ. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ ತಿಳಿಸಿ.