Advertisements

ಎರಡು ಗಂಟೆಯಲ್ಲಿ ಪ್ರೀತಿಸಿದ ಹುಡುಗಿಯನ್ನು ಹುಡುಕಲು ಈ ಹುಡುಗ ಮಾಡಿದ ಕೆಲಸ ಏನು ಗೊತ್ತಾ? ಇದುವರೆಗೂ ಯಾರು ಈ ರೀತಿ ಮಾಡಿಲ್ಲ..

Kannada Mahiti

ನಮಸ್ತೆ ಸ್ನೇಹಿತರೆ, ಮೊದಲ ನೋಟದ ಪ್ರೇಮ ಕಥೆಗಳನ್ನು ನಾವು ಹಲವು ಸಿನಿಮಾಗಳಲ್ಲಿ ನೋಡಿರುತ್ತೇವೆ ಹಾಗೂ ನೈಜ ಪ್ರಸಂಗಗಳಿಂದಲೂ ಕೇಳಿರುತ್ತೇವೆ.. ನಾವು ಈಗ ಹೇಳುವ ಈ ಹುಡುಗನ ಪ್ರೇಮ ಕಥೆ ಕೂಡ ಅಂತದ್ದೇ. ಈ ಹುಡುಗನಿಗೂ ಕೂಡ ಹುಡುಗಿಯ ಮೇಲೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿದ್ದು.. ಇನ್ನೂ ಆ ಹುಡುಗಿಗೂ ಕೂಡ ಈ ಹುಡುಗನ ಮೇಲೆ ಮೊದಲ ನೋಟದಲ್ಲೇ ಕ್ರಶ್ ಆಗಿತ್ತು. ಇಬ್ಬರು ಕಣ್ಣಲ್ಲೇ ಮಾತನಾಡಿದರು‌.. ಆದರೆ ಇಬ್ಬರು ಕೆಲವೇ ಕ್ಷಣಗಳಲ್ಲಿ ದೂರವಾದರು. ನಂತರ ಈ ಹುಡುಗ ಮೊದಲ ನೋಟದಲ್ಲಿ ಸೆಳೆದ ಹುಡುಗಿಯನ್ನು ಹುಡುಕಲು ಮಾಡಿದ ಪ್ರಯತ್ನ ಮಾತ್ರ ಎಲ್ಲರನ್ನೂ ಆಶ್ಚರ್ಯ ಪಡುವಂತೆ ಮಾಡುತ್ತದೆ..

Advertisements

ಈ ಹುಡುಗನ ಹೆಸರು ಬಿಶ್ವಜಿತ್ 20 ವರ್ಷದ ಯುವಕ ಸರ್ಕಾರಿ ಉದ್ಯೋಗದಲ್ಲಿ ಇದ್ದಾನೆ. ಈತ ಕಳೆದ ತಿಂಗಳಲ್ಲಿ ಲೋಕಲ್ ಸ್ಟೇಷನ್ ನಲ್ಲಿ ತಾರಾಪೀಠ ಎಂಬಲ್ಲಿಗೆ ಹೋಗಲು ರೈಲನ್ನು ಹತ್ತುತ್ತಾನೆ.. ಈತ ಹತ್ತಿದ ಕಂಪಾರ್ಟ್ಮೆಂಟ್ ನಲ್ಲಿಯೇ ಒಬ್ಬ ಯುವತಿ ಕೂಡ ಹತ್ತುತ್ತಾಳೆ.. ಈತನ ಅದೃಷ್ಟ ಎಂಬಂತೆ ಆ ಹುಡುಗಿ ಕೂಡ ಹೆದುರಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ. ಸುಂದರವಾದ ಈ ಹುಡುಗಿಯನ್ನು ನೋಡಿ ಆ ಹುಡುಗಿ ಆಕರ್ಷಿತನಾಗಿ ಪದೇ ಪದೇ ಹುಡುಗಿಯ ಕಡೆ ನೋಡುತ್ತಿರುತ್ತಾನೆ.. ಈಗೆಲ್ಲಾ ಮಾಡುವುದು ಹುಡುಗಿಗೆ ಇಷ್ಟವಾಗುತ್ತಿಲ್ಲ ಎನಿಸಿ ಸ್ವಲ್ಪ ಸಮಯ ಸುಮ್ಮನಾಗುತ್ತಾನೆ. ಮತ್ತೆ ಸ್ವಲ್ಪ ಹೊತ್ತಿನ ನಂತರ ಮನಸ್ಸು ತಡೆಯದೇ ಮತ್ತೆ ಆ ಹುಡುಗಿಯನ್ನು ನೋಡಲು ಪ್ರಾರಂಭಿಸುತ್ತಾನೆ..

ಈ ಬಾರಿ ಆ ಹುಡುಗಿ ಕೂಡ ಹುಡುಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾಳೆ. ಈತನನ್ನು ನೋಡಿ ಮುಗುಳು ನಗೆ ಬೀರುತ್ತಾಳೆ.. ಅಲ್ಲಿಗೆ ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ. ಸತತ ಎರಡು ಗಂಟೆ ಜರ್ನಿಯಲ್ಲಿ ಇಬ್ಬರು ಕಣ್ಣಲ್ಲೇ ಮಾತನಾಡಿಕೊಳ್ಳುತ್ತಾರೆ.. ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಚಿಗುರುತ್ತದೆ.. ನಂತರ ಈ ಹುಡುಗಿ ತನ್ನ ನಿಲ್ದಾಣದಲ್ಲಿ ಇಳಿಯುತ್ತಾಳೆ. ಹುಡುಗಿ ಪೋಷಕರ ಜೊತೆ ಇದ್ದ ಕಾರಣ ಮಾತನಾಡಿಸಲು ಆಗುವುದಿಲ್ಲ.. ಹುಡುಗಿ ಇಳಿದು ಹೋಗುವಾಗ ಪೋನ್ ನಂಬರ್ ಕೇಳಲು ಪ್ರಯತ್ನ ಪಡುತ್ತಾಳೆ.

ಆದರೆ ಇಬ್ಬರಿಗೂ ಪೋನ್ ನಂಬರ್ ವಿನಿಮಯ ಮಾಡಿಕೊಳ್ಳಲು ಆಗುವುದಿಲ್ಲ.. ನಂತರ ಬಿಶ್ವಜಿತ್ ಹುಡುಗಿಯ ಪ್ರೀತಿಯಲ್ಲಿ ಮುಳುಗುತ್ತಾನೆ. ಹೇಗಾದರೂ ಮಾಡಿ ಹುಡುಗಿಯನ್ನು ಮತ್ತೆ ಮೀಟ್ ಮಾಡಬೇಕೆಂದು ಪ್ರಯತ್ನಿಸುತ್ತಾನೆ.. ಆದರೆ ಹೇಗೆ ಈ ಹುಡುಗಿಯನ್ನು ಮತ್ತೆ ಹುಡುಕುವುದು ಎಂದು ತಿಳಿಯುವುದಿಲ್ಲ. ಆಗ ಬಿಶ್ವಜಿತ್ ಗೆ ಒಂದು ಐಡಿಯಾ ಹೊಳೆಯುತ್ತದೆ.. ತನ್ನ ಪೋನ್ ನಂಬರ್ ಮತ್ತು ವಿವರಗಳನ್ನೆಲ್ಲಾ ನೀಡಿ ನಾಲ್ಕು ಸಾವಿರದಷ್ಟು ಪೋಸ್ಟ್ ಗಳನ್ನು ಪ್ರಿಂಟ್ ಮಾಡಿಸಿ..

ಎಲ್ಲಾ ಕಡೆ ಅಂಟಿಸುತ್ತಾನೆ. ಮನೆಯವರೆಲ್ಲಾ ಹುಚ್ಚ ಎಂದು ಕರೆದರು ತಲೆ ಕೆಡಿಸಿಕೊಳ್ಳುವುದಿಲ್ಲ.. ನಂತರ ತಾನು ಅಂದು ಧರಿಸಿದ ಕೆಂಪು ಟೀಶರ್ಟ್ ಧರಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾನೆ. ಆ ವೀಡಿಯೊಗೆ ಕೊನ್ನಾಗರ್ ಎಂದು ಹೆಸರಿಟ್ಟಿದ್ದಾನೆ.. ಇಷ್ಟೆಲ್ಲಾ ಮಾಡಿದರು ಕೂಡ ಇದುವರೆಗೂ ಈ ಹುಡುಗನಿಗೆ ತಾನು ಮೊದಲ ನೋಟದಲ್ಲಿ ಪ್ರೀತಿಸಿದ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.