Advertisements

ರೈಲು ಹತ್ತಿ ನಿದ್ರೆಗೆ ಜಾರಿದ ಈತ ಹೋಗಿದ್ದು ಎಲ್ಲಿಗೆ ಗೊತ್ತಾ? 24 ವರ್ಷಗಳ ನಂತರ ತಾಯಿಯನ್ನು ಹುಡುಕಿದ್ದೇ ರೋಚಕ..

Kannada Mahiti

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತನ್ನ ಮಕ್ಕಳಿಗೆ ಯಾವುದೇ ಕೊರತೆಯಾಗದ ರೀತಿ ನೋಡಿಕೊಳ್ಳುವ ಜೀವ ಅಂದ್ರೆ ಅದು ಮಾತೃ ಜೀವ.. ಮರೆಯಲಾಗದ ಭಾಂದವ್ಯ ಅದು, ಅದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಎಂಬ ಮಹಾಮಯಿಗೆ ಅತ್ಯುನ್ನತ ಸ್ಥಾನ, ಇವತ್ತು ನಾವು  ಹೇಳ್ತೀರುವ ಈ ಸತ್ಯಕತೆಯನ್ನು ಕೇಳಿದ್ರೆ ಇದು ನಿಜಾನಾ ಅನ್ನೋವಷ್ಟರ ಮಟ್ಟಿಗೆ ಆಶ್ಚರ್ಯ ಹುಟ್ಟಿಸುತ್ತೆ. ಹೌದು 25 ವರ್ಷಗಳ ಬಳಿಕ ಕಳೆದು ಹೋದ ಮಗನೋರ್ವ ವಿದೇಶದಿಂದ ಬಂದು ತನ್ನ ತಾಯಿಯನ್ನ ಹುಡುಕಿದ ಕತೆಯಿದು. ಈತನ ಹೆಸರು ಶೇರು ಮುನ್ಸಿಕಾನ್, ಮಧ್ಯಪ್ರದೇಶದ ಕಾಂಡ್ವಾ ಎನ್ನುವ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಈ ಹುಡುಗ ಜನಿಸಿರುತ್ತಾನೆ, ಈತನ ತಾಯಿಯ ಹೆಸರು ಸಿಯೋ, ಮೊದಲೇ ಬಡತನದಲ್ಲಿದ್ದ ಕುಟುಂಬವನ್ನು ಈತನ ತಂದೆ ಸಹ ಬಿಟ್ಟು ಹೋಗ್ತಾನೆ..

[widget id=”custom_html-3″]

Advertisements

ಒಂದು ಹೊತ್ತಿನ ಊಟಕ್ಕು ಸಹ ಪರದಾಡುವಂತಹ ಸ್ಥಿತಿಯಿತ್ತು. ಅಂತಹ ಸಂದರ್ಭದಲ್ಲಿ ಸಿಯೋ ಗಾರೆ ಕೆಲಸ ಮಾಡಿ ಈ ಕುಟುಂಬವನ್ನು ನೋಡಿಕೊಡ್ತಾಳೆ, ಶೇರು ಮುನ್ಸಿಕಾನ್ ಅವರಿಗೆ ಇಬ್ಬರು ಅಣ್ಣಂದಿರು, ಹಾಗೂ ಒಬ್ಬಳು ತಂಗಿ ಸಹ ಇದ್ದಳು, ಸಿಯೋ ಕೆಲಸಕ್ಕೆ ಹೋದಾಗ ಶೇರು ಹಾಗೂ ಆತನ ಸಹೋದರರು ಸಮಯ ವ್ಯರ್ಥ ಮಾಡೋದು ಬೇಡ ಅಂತ ರೈಲ್ವೆ ಸ್ಟೇಷನ್‌ನಲ್ಲಿ ಬಿಕ್ಷೆ ಬೇಡ್ತಾಯಿದ್ದರು, ಬಿಕ್ಷೆ ಬೇಡುತ್ತಾ ಅಲ್ಲೇ ಆಟವನ್ನು ಆಡುತ್ತಾ ತಮ್ಮ ದಿನವನ್ನು ಸಹ ಕಳೀತಾಯಿದ್ರು. ಹೀಗೆ ಆಟ ಆಡುತ್ತೊ ಇರುವಾಗ ಅವರು ಅಲ್ಲಿಯ ಗೂಡ್ಸ್ ರೈಲುಗಳನ್ನು ಹತ್ತಿ ಸುತ್ತಮುತ್ತಲ ಗ್ರಾಮಗಳಿಗೆ ಪ್ರಯಾಣ ಸಹ ಮಾಆಸ್ಟ್ರೇಲಿಯಾಿದ್ದರು, ಉಚಿತವಾಗಿ ಪ್ರಯಾಣ ಮಾಡೋದು ಅವರಿಗೆ ರೂಢಿಯಾಗಿ ಹೋಗಿತ್ತು. ಗೂಡ್ಸ್ ಗಾಡಿಯಲ್ಲಿ ಚೆಕ್ಕಿಂಗ್ ಅಷ್ಟೊದು ಮಾಡದೇ ಇರೋದು..

[widget id=”custom_html-3″]

ಹಾಗೂ 25 ವರ್ಷಗಳ ಹಿಂದೆ ಈಗಿರುವ ಕಠಿಣ ಚೆಕ್ಕಿಂಗ್ ಇಲ್ಲದಿರುವುದು ಈ ಬಾಲಕರಿಗೆ ಸಹಾಯವಾಗಿತ್ತು.
ಒಂದು ದಿನ ಹೀಗೆ ಬುರ್ಹಾನ್ ಗ್ರಾಮಕ್ಕೆ ಹೋದ ಶೇರು ಹಾಗೂ ಆತನ ಒಬ್ಬ ಸಹೋದರ ಮತ್ತೆ ವಾಪಾಸ್ ಬಂದೇ ಇಲ್ಲ, ಬುರ್ಹಾನ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಹೋದ ಶೇರುವಿನ ಅಣ್ಣ ಇನ್ನೊಂದು ರೈಲಿನಡಿ ಸಿಲುಕಿ ಸ’ತ್ತು ಹೋಗಿರ‍್ತಾನೆ, ಈ ವಿಚಾರ ತಿಳಿಯದೇ ಶೇರು ಅಣ್ಣ ಬರುತ್ತಾನೆ ಅಂತ ನಿದ್ರೆಗೆ ಜಾರಿ ಮಧ್ಯಪ್ರದೇಶದಿಂದ ದೂರದ ಕಲ್ಕತ್ತಾಗೆ ಪಯಣ ಬೆಳೆಸಿರುತ್ತಾನೆ, ನಿದ್ದೆಯಿಂದ ಎದ್ದು ನೋಡಿದಾಗ ಆತ ಕಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಇರುತ್ತಾನೆ, ತನ್ನೂರಿಗೆ ವಾಪಸ್  ಹೋಗಲು ಆಗದೇ ಸ್ಥಳೀಯ ಭಾಷೆಯೂ ಗೊತ್ತಿಲ್ಲದೇ ಅಕ್ಷರಶಃ ಶೇರು ಕೆಲದಿನಗಳವರೆಗೆ ಒದ್ದಾಡಿ ಹೋಗ್ತಾನೆ..

[widget id=”custom_html-3″]

ನಂತರ ಅಲ್ಲಿ ತನ್ನಂತಿರುವ ಮಕ್ಕಳ ಜೊತೆ ಸೇರಿ ಭಿಕ್ಷೆ ಬೇಡಿ ದಿನದೂಡ್ತಾ ಇರುತ್ತಾನೆ, ಆ ವೇಳೆ ಪೊಲೀಸರ ಕೈಗೆ ಸಿಕ್ಕಿ ಈತನ ವಿಳಾಸ ಕೇಳುತ್ತಾರೆ, ಆದರೆ ಪೊಲೀಸರಿಗೆ ಈತ ಏನು ಹೇಳ್ತಾಯಿದ್ದಾನೆ ಅಂತ ಅರ್ಥವಾಗದ ಕಾರಣ ಶೇರುವನ್ನು ದೀನದಲಿತರ ಕ್ಷೇಮಾಭಿವೃದ್ಧಿ ಸಂಘಕ್ಕೆ ಕೊಡಲಾಗುತ್ತೆ, ಅಲ್ಲಿ ಶೇರುವನ್ನು ಆಸ್ಟ್ರೇಲಿಯಾ ಮೂಲದ ದಂಪತಿ ದತ್ತು ತೆಗೆದುಕೊಂಡು ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗ್ತಾರೆ, ಆಗ ಶೇರುವಿಗೆ 6 ವರ್ಷವಂತೆ. ನಂತರ ಉತ್ತಮ ವಿಧ್ಯಾಭ್ಯಾಸವನ್ನು ಪಡೆದು ಶೇರು ಗೂಗಲ್ ಮುಖಾಂತರ ತನ್ನ ಹುಟ್ಟೂರಿಗೆ ಬಂದು ಬಾಲ್ಯದ ಫೋಟೋವನ್ನು ತೋರಿಸಿ ತಾಯಿ ಬಗ್ಗೆ ವಿಚಾರಣೆ ನಡೆಸ್ತಾನೆ..

[widget id=”custom_html-3″]

ವರ್ಷಗಳ ಸತತ ಶ್ರಮದಿಂದ ತನ್ನ ತಾಯಿಯನ್ನು ಹುಡುಕುವಲ್ಲಿ ಯಶಸ್ವಿಯಾಗ್ತಾನೆ, ಇನ್ನು ಸಿಯೋಳಿಗಾಗಿ ಆಸ್ಟ್ರೇಲಿಯಾ ಒಂದು ಮನೆ ಖರೀದಿಸಿ ಆಕೆಯನ್ನು ಸಹ ತನ್ನ ಜೊತೆಯಲ್ಲಿಯೇ ಶೇರು ಕರೆದುಕೊಂಡು ಹೋಗಿದ್ದಾನೆ. ಇನ್ನು ಈ ಅಪರೂಪದ ತಾಯಿ ಮಗನ ಭಾಂದವ್ಯದ ಬಗ್ಗೆ ಶೇರುವೇ ಆತ್ಮಚರಿತ್ರೆ ಮುಖಾಂತರ ಜಗತ್ತಿಗೆ ತಿಳಿಸಿದ್ದಾನೆ. ಹಾಗೇ ಲಯನ್ ಎನ್ನುವ ಹಿಂದಿ ಇಂಗ್ಲೀಷ್ ಮಿಶ್ರಿತ ಸಿನಿಮಾ ಸಹ ಈ ತಾಯಿ ಮಗನ ಪ್ರೀತಿಯನ್ನು ತೆರೆಮೇಲೆ ತಂದಿದೆ..