Advertisements

ಮುದುಕನಂತೆ ವೇಷ ಧರಿಸಿ ಪ್ರಯಾಣ ಮಾಡಲು ಬಂದ 32ರ ಯುವಕ.. ನಂತರ ನಡೆದಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮುದುಕನಂತೆ ವೇಷದರಿಸಿ ಪ್ರಯಾಣ ಮಾಡಲು ಬಂದ 32 ಯುವಕ.. ಹೌದು 32 ರ ಹದಿಹರೆಯದ ಯುವಕ 80 ವರ್ಷದ ಮುದುಕನಂತೆ ವೇಷಧರಿಸಿ ನ್ಯೂಯಾರ್ಕ್‌ ನಗರಕ್ಕೆ ಪ್ರಯಾಣಿಸಲು ಯತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಹೊಸ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.. ಜಯೆಷ್ ಪಾಟೀಲ್ ವಿಮಾನ ನಿಲ್ದಾಣದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಈತ 80 ವರ್ಷದ ವೃದ್ಧನಂತೆ ವಿಮಾನ ನಿಲ್ದಾಣಕ್ಕೆ ಬಂದಿದ್ದ..

Advertisements

ವೃದ್ಧರ ರೀತಿ ಗಡ್ಡ, ಕೂದಲಿಗೆ ಬಿಳಿ ಬಣ್ಣವನ್ನು ಬಳಿದು ತಲೆಗೆ ಪೇಟವನ್ನು ಸುತ್ತಿ ಅಶಕ್ತರಂತೆ ವೀಲ್ ಚೇರ್ ನಲ್ಲಿ ಕುಳಿತುಕೊಂಡು ವಿಮಾನ ನಿಲ್ದಾಣಕ್ಕೆ  ಆಗಮಿಸಿದ್ದ. ನಕಲಿ ಪಾಸ್‌ಪೋರ್ಟ್ ಬಳಿಸಿ ಅಮೇರಿಕಾದ ನ್ಯೂಯಾರ್ಕ್ ಗೆ ಹಾರಲು ಯತ್ನಿಸಿದ ಈತನನ್ನ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.. ವೀಲ್ ಚೇರ್ ನಲ್ಲಿ ಬಂದ ಈ ವ್ಯಕ್ತಿಯನ್ನು ಪರಿಶೀಲನೆಗಾಗಿ ನಿಲ್ಲುವಂತೆ ಅಧಿಕಾರಿಗಳು ಹೇಳಿದಾಗ ಆತ ನಿರಾಕರಿಸಿದ.

ಪಾಸ್‌ಪೋರ್ಟ್ ಪ್ರಕಾರ ಆತನ ದಿನಾಂಕ 1 ಪೆಬ್ರವರಿ 1938 ಆದರೆ ಆತನ ಚರ್ಮದಲ್ಲಿ ಯಾವುದೇ ಸೊಕ್ಕು ಇರಲಿಲ್ಲ ಮತ್ತು ಧ್ವನಿ ಕೂಡ ವೃದ್ಧನಂತೆ ಇರಲಿಲ್ಲ.. ಇದರಿಂದ ಅನುಮಾನಗೊಂಡು ಆತನನ್ನ ವಶಕ್ಕೆ ಪಡೆದು ವಿಚಾರ ನಡೆಸಿಲಾಗಿದೆ ಎಂದು ವಿಮಾನ ಅಧಿಕಾರಿಗಳು ತಿಳಿಸಿದ್ದಾರೆ.. ವಿದೇಶಕ್ಕೆ ಹಾರಲು ಈ ಸ್ವದೇಶಿಗರು ಏನೆಲ್ಲಾ ಖಸರತ್ತು ಮಾಡುತ್ತಾರೆ ನೋಡಿ.. ಇನ್ನೂ ಈತನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನ ತಿಳಿಸಿ.