Advertisements

ಈ ಪುಟ್ಟ ಪೋರನ ಜೋಷ್ ನೋಡಿ ಅಚ್ಚರಿಗೊಂಡ ಯೋಧರು ! ಪುಟ್ಟ ಕಂದಮ್ಮ ಮಾಡಿದ್ದೇನು ನೋಡಿ

News

ನಮಸ್ತೇ ಸ್ನೇಹಿತರೇ, ರಿಯಲ್ ಲೈಫ್ ಹೀರೋ, ಸೆಲೆಬ್ರೆಟಿಗಳೆಂದರೆ ನಮ್ಮ ವೀರ ಯೋಧರು. ಹಾಗಾಗಿಯೇ ನಮ್ಮ ಭಾರತದ ಧ್ವಜ, ನಮ್ಮ ಸೈನಿಕರನ್ನ ಕಂಡಾಗ ಭಾರತೀಯರ ಎದೆಯಲ್ಲಿ ರೋಮಾಂಚನದ ಅನುಭವವಾಗುತ್ತದೆ. ಅದು ದೊಡ್ಡವರೇ ಇರಲಿ, ಪುಟ್ಟ ಬಾಲಕರೇ ಇರಲಿ. ಹೌದು, ಸೈನಿಕರಿಗೆ ಪುಟ್ಟ ಪೋರನೊಬ್ಬ ಸೆಲ್ಯೂಟ್ ಹೊಡೆದಿದ್ದು ನೆಟ್ಟಿಗರ ಮನಗೆಲ್ಲುವಂತೆ ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿರುವ ಆ ಪುಟ್ಟ ಬಾಲಕನ ವಿಡಿಯೋ ನೋಡಿ ಮುಂದೆ ಈ ಪೋರ ಯೋಧನಾಗುತ್ತಾನೆ ಎಂದು ನೆಟ್ಟಿಗರು ಅವನನ್ನ ಹೊಗಳಿದ್ದಾರೆ.

ನಮ್ಮ ಸೈನಿಕರು ಇಂಡೋ ಟಿಬೆಟಿಯನ್ ಗಡಿಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯ ನಿಂತಿದ್ದ ಪುಟ್ಟ ಪೋರ ಯೋಧರನ್ನ ಕಂಡದ್ದೇ ತಡ ಹೈ ಜೋಶ್ ನಲ್ಲಿ ಸೆಲ್ಯೂಟ್ ಹೊಡೆಯುತ್ತಾನೆ. ಇನ್ನು ಇದನ್ನ ಅಲ್ಲೇ ಇದ್ದ ಸೈನಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಲೈಕ್ಸ್ ಕಾಮೆಂಟ್ ಗಳು ಲೆಕ್ಕವಿಲ್ಲದಂತೆ ಬಂದಿವೆ. ಫುಲ್ ಜಬರದಸ್ತ್ ಆಗಿ ಸೆಲ್ಯೂಟ್ ಹೊಡೆದ ಬಾಲಕನ ಹೆಸರು ನಮಗ್ಯಾಲ್ ಎಂದು.

ಲಡಾಖ್ ನ ಚುಶುಲ್ ನ ರಸ್ತೆ ಬದಿಯಲ್ಲಿ ಈ ಬಾಲಕ ನಿಂತಿದ್ದ ವೇಳೆ ಅದೇ ಮಾರ್ಗದಲ್ಲಿ ಯೋಧರು ಸಾಗಿದ್ದಾರೆ. ಅದೇ ಸಮಯದಲ್ಲಿ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದಲ್ಲದೆ ಯೋಧರ ಕಮ್ಯಾಂಡ್ ಗಳನ್ನ ಚಾಚು ತಪ್ಪದೆ ಪಾಲಿಸಿದ್ದಾನೆ. ಇನ್ನು ಈ ಪುಟ್ಟ ಕಂದಮ್ಮನ ಜೋಷ್ ನೋಡಿ ಸೈನಿಕರ ಜೊತೆಗೆ ನೆಟ್ಟಿಗರು ಕೂಡ ಫಿದಾ ಆಗಿಬಿಟ್ಟಿದ್ದಾರೆ. ಇನ್ನು ಚಿಕ್ಕವಯಸ್ಸಿಗೇನೇ ಆ ಮಗುವಿನ ಉತ್ಸಾಹ, ಮನಸ್ಥಿತಿ ಹಾಗೂ ಯೋಧರ ಮೇಲಿರುವ ಅಪಾರ ಗೌರವವನ್ನ ಕಂಡು ನೆಟ್ಟಿಗರು ಆ ಪೋರನಿಗೆ ಫಿದಾ ಆಗಿದ್ದಾರೆ.