Advertisements

11 ವರ್ಷದ ಈ ಬಾಲಕ ಮಾಡಿದ ಸಾಹಸಕ್ಕೆ ಇಡೀ ಊರಿಗೆ ಊರೇ ಈತನನ್ನು ಕೊಂಡಾಡುತ್ತಿದೆ.. ಈತ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯನ ಜೀವನದಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಪ್ರಾ’ಣ.. ಇದಕ್ಕೆ ಬೆಲೆ ಕಟ್ಟಲು ಅಸಾಧ್ಯ. ತಂದೆ ತಾಯಿ ಜನ್ಮ ಕೊಟ್ಟ ದೇವರ ಸ್ಥಾನವನ್ನು ಪಡೆಯುತ್ತಾರೆ. ಕೆಲಮೊಮ್ಮೆ ದು’ರ್ಘ’ಟನೆಯಲ್ಲಿ ಸಿಕ್ಕಿ ಹಾಕಿಕೊಂಡು ಜೀವಕ್ಕೆ ಸ’ಮಸ್ಯೆ ಎದುರಾಗುವಂತಹ ಸನ್ನಿವೇಶ ಎದುರಾದಾಗ ದೇವರ ರೂಪದಲ್ಲಿ ಕೆಲವರು ಬಂದು ಜೀವವನ್ನು ಉಳಿಸಿ ನಮಗೆ ಮರುಜನ್ಮ ನೀಡುತ್ತಾರೆ. ಅದಕ್ಕೆ ಪ್ರತ್ಯುತ್ಕಾರವಾಗಿ ಅಥವಾ ಸಹಾಯಕ್ಕಾಗಿ ನಾವು ಅವರಿಗೆ ಮರಳಿ ಏನು ನೀಡಿದರು ಅದೆಲ್ಲವೂ ಜೀವಕ್ಕಿಂತ, ಜೀವನಕ್ಕಿಂತ ಮೌಲ್ಯವಲ್ಲ.. ಮರು ಜನ್ಮ ನೀಡಿದವರಿಗೆ ಜೀವನ ಪರ್ಯಂತ ಕೃತಜ್ಞತೆ ತೋರಿದರೆ ಸಾಕು.

Advertisements

ಇನ್ನೂ ಅಸ್ಸಾಂ ನ ಮಿಸ್ಸಮಾರಿಯ 11 ವರ್ಷದ ಬಾಲಕ ಉತ್ತಮ್ ತತಿ ಒಂದು ಮಾನವೀಯ ಕಾರ್ಯವನ್ನು ಮಾಡುವ ಮೂಲಕ ಸಾಧನೆಯನ್ನು ಮೆರೆದಿರುವುದು ಮಾತ್ರವಲ್ಲದೇ ಎರಡು ಜೀವಗಳನ್ನು ಕೂಡ ಉಳಿಸಿದ್ದಾನೆ. ಅಸ್ಸಾಂನ ಸೋನಿತ್ ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಎರಡು ಮಕ್ಕಳನ್ನು ಹಿಡಿದುಕೊಂಡು ಸಣ್ಣ ನದಿಯೊಂದನ್ನ ದಾಟುವ ಪ್ರಯತ್ನ ಮಾಡುವ ಸಂದರ್ಭದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.. ಆಗ ಮಹಿಳೆ ಹಾಗೂ ಆಕೆಯ ಮಕ್ಕಳು ನದಿ ದಾಟಲಾರದೆ ಪ್ರಾ’ಣಾಂ’ತಕ ಪರಿಸ್ಥಿತಿ ಎದುರಾಗಿಸಿದ್ದಾರೆ.

ಆಗ ಅಲ್ಲೇ ನದಿ ದಂಡೆಯಲ್ಲಿ ಕುಳಿತಿದ್ದ ಉತ್ತಮ್ ಹುಡುಗ ಕ್ಷಣ ಮಾತ್ರವೂ ಕೂಡ ತಡಮಾಡದೆ ತಾನೊಬ್ಬ ಬಾಲಕ ಎನ್ನುವುದನ್ನು ಕೂಡ ಮರೆತು ನೀರಿನೊಳಗೆ ದುಮುಕಿ ಈಜುತ್ತಾ ಹೋಗಿ ತಾಯಿ ಹಾಗೂ ಆಕೆಯ ಮಗುವೊಂದನ್ನ ಕಾಪಾಡುವುದರಲ್ಲಿ ಯಶಸ್ಸಿಯಾಗಿದ್ದಾನೆ.. ಆದರೆ ದುರಾದೃಷ್ಟವಶಾತ್ ಆಕೆಯ ಇನ್ನೊಂದು ಮಗು ಮು’ಳುಗಿ ಜೀ’ವ ಬಿಟ್ಟಿದೆ. ಆದರೂ ಎರಡು ಜೀವಗಳನ್ನ ಸಕಾಲದಲ್ಲಿ ದೈರ್ಯ ಮೆರೆದು ಬದುಕಿಸಿದ ಬಾಲಕನ ಸಾಧನೆಗೆ ಶ್ಲಾಘನೆ ವ್ಯಕ್ತವಾಗಿದೆ.. ಇನ್ನೂ ಈ ಹುಡುಗನ‌ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನ ತಿಳಿಸಿ.