ಸ್ನೇಹಿತರೆ, ಪದೇ ಪದೇ ಗಡಿಯಲ್ಲಿ ಕಾಲ್ಕೆರೆದು ನಿಂತುಕೊಳ್ಳುವ, ಯುದ್ದೋನ್ಮಾದದಲ್ಲಿರುವ ಚೀನಾ ದೇಶಕ್ಕೆ ಬುದ್ದಿ ಬರೋದೇ ಇಲ್ವೇನೋ ಅನ್ನಿಸುತ್ತೆ. ತನ್ನ ಸೈನಿಕರನ್ನ ಗಡಿಯಲ್ಲಿ ನಿಲ್ಲಿಸಿ ತನ್ನ ಶಕ್ತಿ ಪ್ರದರ್ಶನ ಮಾಡುವ ದುಸ್ಸಾಹಸವನ್ನ ಮಾಡುತ್ತಿದೆ ಡ್ರಾಗನ್ ದೇಶ ಚೀನಾ. ಸ್ನೇಹಿತರೆ, ನಾವಿಲ್ಲಿ ಒಂದು ವಿಷಯದ ಬಗ್ಗೆ ಹೇಳಲೇಬೇಕು..ಚೀನಾ ಭಾರತದಲ್ಲಿ ದೊಡ್ಡದಾದ ಮಾರುಕಟ್ಟೆಯನ್ನೇ ಹೊಂದಿದೆ. ಹಾಗಾಗಿ ಭಾರತೀಯರು ಮನಸ್ಸು ಮಾಡಿದ್ರೆ ಚೀನಾಗೆ ಬುದ್ದಿ ಕಲಿಸುವುದು ಕಷ್ಟಸಾಧ್ಯವೇನು ಅಲ್ಲ.

ಸದಾ ತಕರಾರು ತೆಗೆಯುವ ಚೀನಾ ದೇಶಕ್ಕೆ ಬುದ್ದಿ ಕಲಿಸುವ ಸಲುವಾಗಿ ಭಾರತ ದೊಡ್ಡ ಯೋಜನೆಯೊಂದಕ್ಕೆ ಮುಂದಾಗಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳನ್ನ ಬಹಿಷ್ಕರಿಸಿ ಚೀನಾ ಮಾರುಕಟ್ಟೆಗೆ ಹೊಡೆತ ನೀಡಲು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ದೊಡ್ಡ ನಿರ್ಧಾರವನ್ನೇ ಮಾಡಿದೆ. ಇನ್ನು ಇತ್ತೀಚೆಗಷ್ಟೇ ಚೀನಾ ವಸ್ತುಗಳಿಲ್ಲದೆ ಭಾರತದ ಜನರು ಬದುಕಲು ಸಾಧ್ಯವಿಲ್ಲ ಎಂಬ ದುರಂಕಾರದ ವರದಿಯೊಂದನ್ನ ಚೀನಾ ಪತ್ರಿಕೆಯೊಂದು ವರದಿ ಮಾಡಿತ್ತು.
ಹೀಗಾಗಿ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ಭಾರತದಲ್ಲಿರುವ ಸುಮಾರು ೩ ಸಾವಿರ ಚೀನಾ ವಸ್ತುಗಳನ್ನ ಲಿಸ್ಟ್ ಮಾಡಿದ್ದು, ಭಾರತೀಯರ ಸ್ವಾಭಿಮಾನವನ್ನ ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿರುವ ಚೀನಾಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದೆ. ಚೀನಾದಿಂದ ಆಮದಾಗುವ ವಸ್ತುಗಳನ್ನ ಬಹಿಸ್ಕರಿಸಿ, ಭಾರತದ ವಸ್ತುಗಳ ಮಾರಾಟಕ್ಕೆ ಉತ್ತೇಜನ ಮಾಡುವ ಮಹತ್ವದ ನಿರ್ಧಾರ ಕೈಗೊಂದಿದೆ. ಇನ್ನು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ ಚೀನಾ ವಸ್ತುಗಳನ್ನ್ನ ಬಹಿಷ್ಕರಿಸುವ ಸಲುವಾಗಿ “ಭಾರತದ ವಸ್ತು, ನಮ್ಮ ಹೆಮ್ಮೆ” ಎಂಬ ಅಭಿಯಾನವನ್ನ ಶುರು ಮಾಡಿದೆ.
@TEAMCAIT officially launches the #BoycottChineseProducts campaign today via video press conference.Our nationwide campaign will be “ भारतीय सामान- हमारा अभिमान “/ “Indian Goods- Our Pride”.Traders & consumers will unite to reduce Chinese imports by 1 Lakh crore by December 2021 pic.twitter.com/RjSMcN4Naz
— CONFEDERATION OF ALL INDIA TRADERS ( CAIT) (@TEAMCAIT) June 10, 2020
ಸ್ನೇಹಿತರೆ, ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಕೈಗೊಂಡಿರುವ ನಿರ್ಧಾರಕ್ಕೆ ಭಾರತೀಯರಾದ ನಾವು ಸಹ ಕೈ ಜೋಡಿಸಬೇಕು. ಚೀನಾ ವಸ್ತುಗಳನ್ನ ಬಹಿಷ್ಕಾರ ಮಾಡುವ ಮೂಲಕ ಮೊದಲ ಹಂತವಾಗಿ ಕುತಂತ್ರಿ ಚೀನಾ ದೇಶಕ್ಕೆ ಪಾಠ ಕಲಿಸಬೇಕು. ಇದೆ ನಮ್ಮಲ್ಲಿರುವ ಮೊದಲ ಮಾರ್ಗ. ಇನ್ನು ಗಡಿಯಲ್ಲಿ ತಕರಾರು ಮಾಡಿದ್ರೆ ನಮ್ಮ ವೀರ ಯೋಧರು ಇದ್ದಾರಲ್ಲ..ನೋಡಿಕೊಳ್ಳುತ್ತಾರೆ. ಮೊದಲು ನಾವು ಯೋಧರಾಗೋಣ..