Advertisements

ಇದಪ್ಪಾ ದೇಶ ಭಕ್ತಿ ಅಂದ್ರೆ – ಚೀನೀ ಸೈನಿಕರಿಗೆ ಪಾಠ ಕಲಿಸಲು ಗಡಿಯತ್ತ ಹೊರಟ ಬಾಲಕರು ! ಮುಂದಾಗಿದ್ದೆನು ಗೊತ್ತಾ ?

News

ಸ್ನೇಹಿತರೆ, ಕುತಂತ್ರಿ ಚೀನಾ ದೇಶದ ಸೈನಿಕರು ನಮ್ಮ ಭಾರತೀಯ ವೀರ ಯೋಧರ ಜೊತೆ ರಕ್ಕಸರಂತೆ ಹೇಗೆ ನಡೆದುಕೊಂಡರು ಎಂಬುದನ್ನ ಇಡೀ ಜಗತ್ತೇ ನೋಡಿತು. ಚೀನಿ ಸೈನಿಕರ ಕುತಂತ್ರದಿಂದಾಗಿ ಗಾಲ್ವಾನ್ ಗಾಡಿಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ೨೦ ಜನ ವೀರ ಯೋಧರು ಹುತಾತ್ಮರಾದರು. ಇನ್ನು ಚೀನಿಗರ ಈ ಕುತಂತ್ರಕ್ಕೆ ಇಡೀ ದೇಶದ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ಚೀನಿಯರಿಗೆ ತಕ್ಕ ಪಾಠ ಕಲಿಸಲೇಬೇಕೆಂದು ಭಾರತದಲ್ಲಿ ಚೀನಿ ವಸ್ತುಗಳ ಬಹಿಷ್ಕಾರ ಮಾಡುವಂತೆ ಆಂಧೋಲನಗಳು ನಡೆಯುತ್ತಿವೆ.

Advertisements

ಇನ್ನು ಇದೆ ಸಮಯದಲ್ಲಿ ಚೀನಾ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಗಡಿಯತ್ತ ಪುಟಾಣಿ ಬಾಲಕರು ಹೊರಟಿದ್ದ ಸಂಗತಿ ಈಗ ಬಹಿರಂಗವಾಗಿದೆ. ಹೌದು, ಉತ್ತರ ಪ್ರದೇಶದ ೧೦ ಬಾಲಕರು ಆಲಿಘರ್ ನಿಂದ ತಾವು ಉಟ್ಟ ಬಟ್ಟೆಯಲ್ಲಿಯೇ ರಸ್ತೆಯಲ್ಲಿ ಹೋಗುತ್ತಿದ್ದದನ್ನ ಕಂಡು ಪೊಲೀಸರು ಅವರನ್ನ ತಡೆದಿದ್ದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆಕ್ರೋಶಭರಿತರಾಗಿದ್ದ ಆ ಪುಟಾಣಿ ಬಾಲಕರ ಮಾತುಗಳನ್ನ ಕೇಳಿ ಪೊಲೀಸರು ಕೂಡ ಒಂದು ಕ್ಷಣ ದಂಗಾಗಿಹೋಗಿದ್ದಾರೆ.

ಆಗ ಪೊಲೀಸರು ಆ ಬಾಲಕರ ಮನವೊಲಿಸಿದ್ದು, ಚೀನಾ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ನಮ್ಮ ಸೈನಿಕರು ಸಮರ ಸಾರಲು ಸಿದ್ದರಾಗಿದ್ದಾರೆ, ನೀವು ಈಗ ಮನೆಗೆ ಹೋಗಿ ಎಂದು ಆ ಪುಟಾಣಿ ಬಾಲಕರನ್ನ ವಾಪಾಸ್ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಚಿಕ್ಕವಯಸ್ಸಿನಲ್ಲೇ ದೇಶ ಭಕ್ತಿಯೇ ಕೆಚ್ಚೆದೆಯನ್ನ ಪ್ರದರ್ಶನ ಮಾಡಿದ ಆ ಬಾಲಕರ ಜೊತೆ ಪೊಲೀಸರು ಮಾತನಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.