Advertisements

ಕಾಮಿಡಿ ಕಿಂಗ್ ಬ್ರಹ್ಮಾನಂದಂ ಭಾರತೀಯ ಸಿನಿಮಾ ರಂಗದಲ್ಲಿ ಯಾರು ಮಾಡಲಾಗದ ದಾಖಲೆ ಮಾಡಿದ್ದಾರೆ.. ಅದೇನು ಗೊತ್ತಾ?

Cinema

35ವರ್ಷ ಸುದೀರ್ಘವಾಗಿ ಸಿನಿ ಜೀವನದಲ್ಲಿ ಕೆಲಸ ಮಾಡಿರುವಂತಹ ಸಾವಿರದ ಸರದಾರ ಬ್ರಹ್ಮಾನಂದನ್ ಬದುಕಿನ ನೋವಿನ ಕತೆಯನ್ನು ಕೇಳಿದ್ರೆ ಬೇಜಾರಾಗುತ್ತೆ. ತಾನೂ ಮಾಡದ ತಪ್ಪಿಗೆ ಬೇಕಾಬಿಟ್ಟಿಯಾಗಿ ಬೈಸಿಕೊಂಡ ಪರಿ ನೋಡಿದ್ರೆ ಕಣ್ಣೀರು ಬರುತ್ತೆ. ಎಸ್​​.. ಬಹುಬೇಡಿಕೆಯ ಹಾಸ್ಯ ಕಲಾವಿದ ಬ್ರಹ್ಮಾನಂದ ಅವರು ಹುಟ್ಟಿನಿಂದಲೇ ಅ’ಪ’ವಾದವನ್ನು ಮೈಗೂಡಿಸಿಕೊಂಡಿದ್ದಾರೆ. ಇನ್ನೇನು ತಾಯಿ ಗರ್ಭದಿಂದ ಹೊರಬಂದು ಹೊಸ ಪ್ರಪಂಚವನ್ನು ನೋಡುತ್ತಿದ್ದ, ಬ್ರಹ್ಮಾನಂದ ಅವರ ತಾಯಿ ಇಹಲೋಕವನ್ನು ತ್ಯಜಿಸುತ್ತಾರೆ. ಇದರಿಂದ ಊರವರು ಮನೆಯವರು ಎಲ್ಲರೂ ಸಹ ಬ್ರಹ್ಮಾನಂದ ಅವರು ಹುಟ್ಟಿದ ಗಳಿಗೆ ಸರಿಯಿಲ್ಲ, ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡ ನತದೃ’ಷ್ಟ ಮಗು ಅಂತ ಮೂದಲಿಸಲು ಶುರು ಮಾಡುತ್ತಾರೆ.

[widget id=”custom_html-3″]

Advertisements

ಜೊತೆಗೆ ಬ್ರಹ್ಮಾನಂದ ಅವರ ತಂದೆ ಬಹಳ ಕೋ’ಪಿಷ್ಟ ಆಗಿರುತ್ತಿದ್ದ.. ಅವರ ಬೈಗುಳ ದೌ’ರ್ಜ’ನ್ಯ ಊರವರ ನಿಂದನೆ ಇದೆಲ್ಲವುದರ ಜೊತೆಗೆ ಬ್ರಹ್ಮಾನಂದನ್ ಅವರ ಬಾಲ್ಯ ನೋವಿನಲ್ಲೆ ಕಳೆದುಹೋಗುತ್ತೆ. ಈ ಮಧ್ಯೆ ಓದುವುದರಲ್ಲಿ ಅಪಾರ ಆಸಕ್ತಿ ಹೊಂದಿದ್ದ, ಬ್ರಹ್ಮಾನಂದನ್ ತಮ್ಮ ಹತ್ತನೇ ತರಗತಿಯನ್ನು ಒಳ್ಳೆಯ ಅಂಕದೊಂದಿಗೆ ತೇರ್ಗಡೆಯಾಗ್ತಾರೆ. ಮುಂದೆ ತಂದೆಯ ಸ್ನೇಹಿತರ ಸಹಾಯದಿಂದ ಪದವಿಯನ್ನು ಸಹ ಪೂರೈಸ್ತಾರೆ. ಅದಾದ ಬಳಿಕ, ತಮ್ಮ ಗೆಳೆಯರ ಬಳಗದ ಸಹಾಯದಿಂದ ತೆಲುಗು ಭಾಷೆಯಲ್ಲಿ ಸ್ನಾತಕ್ಕೋತರ ಪದವಿಯನ್ನು ಪಡೆಯುತ್ತಾರೆ. ಮುಂದೆ ಬದುಕಿಗಾಗಿ ಲೆಕ್ಚರರ್​​​ ಆಗಿ ಕೆಲಸಕ್ಕೆ ಸೇರಿಕೊಳ್ತಾರೆ, ಈ ವೇಳೆ ತೆಲುಗು ನಾಯಕರ ಅಭಿನಯವನ್ನು ಕ್ಲಾಸಿನಲ್ಲಿ ಸಹ ಮಾಡಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಪಕರ ಅನ್ನೋ ಹೆಗ್ಗಳಿಕೆಗೆ ಸಹ ಭಾಜನರಾಗಿದ್ದಾರೆ.

[widget id=”custom_html-3″]

ಇನ್ನು ಇದೇ ವೇಳೆ ತೆಲುಗು ಸಿನಿಮಾದಲ್ಲಿ ಸಹ ಅಭಿನಯಿಸಲು ಅವಕಾಶ ಸಿಕ್ಕಿ ಸಿನಿರಂಗಕ್ಕೆ ಪಾದರ್ಪಣೆ ಮಾಡ್ತಾರೆ. ಮೊಟ್ಟ ಮೊದಲನೆ ಭಾರಿಗೆ ಆಹಾ ನಾ ಪೆಳ್ಳಂಟೆ ಅನ್ನೋ ಸಿನಿಮಾ ಮೂಲಕ ಬಣ್ಣ ಹಚ್ಚುತ್ತಾರೆ. ಅದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ರು. ಹೀಗೆ ಅಭಿನಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ರು. ಮುಂದೆ ಸಾವಿರ ಸಿನಿಮಾಗಳಲ್ಲಿ ಅಭಿನಯಿಸಿದ ಭಾರತದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಸಹ ಪಾತ್ರರಾದರು. ಹೀಗೆ ಸಾಲು ಸಾಲು ಅವಾರ್ಡ್​ಗಳನ್ನು ಸಹ ಪಡೆದುಕೊಂಡಿದ್ದಾರೆ. ಭಾರತದ ಫಿಲ್ಮಫೇರ್ ಅವಾರ್ಡ್ ಸಹ ಪಡೆದುಕೊಂಡಿದ್ದು, ಪದ್ಮಶ್ರೀ ಪ್ರಶಸ್ತಿ ಸಹ ಮುಡಿಗೇರಿಸಕೊಂಡ ಹೆಗ್ಗಳಿಕೆ ಸಹ ಬ್ರಹ್ಮಾನಂದನ್ ಅವರಿಗಿದೆ..