Advertisements

ಕಸದ ತೊಟ್ಟಿಯಲ್ಲಿ ಬಿಸಾಕಿದ್ದ ಊಟ ತಿನ್ನುತ್ತಿದ್ದ ಈತ ಈಗ ಗಂಟೆಗೆ 6 ಲಕ್ಷ ದುಡಿಯುತ್ತಿದ್ದಾನೆ.. ಹೇಗೆ ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಏನನ್ನು ಕಳೆದುಕೊಂಡರು ಒಂದನ್ನು ಕಳೆದುಕೊಳ್ಳಬಾರದು.. ಅದು ಏನು ಗೊತ್ತಾ ಆಶಾ ಭಾವ, ಭರವಸೆ. ಇದನ್ನು ಕಳೆದುಕೊಂಡರೆ ನಾವು ನಿಂತಲ್ಲೇ ನಿಂತು ಬಿಡುತ್ತೇವೆ.. ಜೀವನ ಇಷ್ಟೇ ಸಾಕು ಎನ್ನುವ ಮನಸ್ಥಿತಿಗೆ ಬಂದು ಬಿಡುತ್ತೇವೆ. ಈ ವ್ಯಕ್ತಿಯೂ ಆಗೆ ತನ್ನವರು ಅಂತ ಯಾರು ಇರಲಿಲ್ಲ, ಯಾವ ದಾರಿಯೂ ಕಾಣಲಿಲ್ಲ.. ಕಸದ ತೊಟ್ಟಿಯಲ್ಲಿ ಸಿಗುವ ಊಟವನ್ನು ತಿಂದು ಬದುಕುತ್ತಿದ್ದ. ಆದರೆ ಒಂದು ದಿನ ಈ ಕೆ’ಟ್ಟ ದರಿದ್ರ ಜೀವನದಿಂದ ನಾನು ಆಚೆ ಬರಬೇಕು, ಎಲ್ಲರಂತೆ ನಾನು ಬದುಕಬೇಕು ಅನ್ನುವ ಒಂದೇ ಒಂದು ಆಶಾ ಭಾವ ಈ ದಿನ ಈ ವ್ಯಕ್ತಿಯ ಬಗ್ಗೆ ತಿಳಿಸಿಕೊಡುವಂತೆ ಮಾಡಿದೆ..

Advertisements

ಇಂಗ್ಲೆಂಡ್ ದೇಶದಲ್ಲಿ ವಾಸವಿರುವ ಈತನ ಹೆಸರು ಬ್ರಿಯಾನಾ ಅಂಟ್. ಚಿಕ್ಕಂದಿನಿಂದಲೇ ಎಲ್ಲರನ್ನು ಕಳೆದುಕೊಂಡ ಈತ ಬೀದಿಗೆ ಬಿದ್ದ ಆ ದಿನದಿಂದ ಈತನ ಹೋರಾಟ ಒಂದು ದಿನ ಊಟಕ್ಕಾಗಿ.. ಯಾವುದೇ ದಾರಿ ಕಾಣಲಿಲ್ಲ, ಯಾರ ಮಾರ್ಗ ದರ್ಶನ ಸಿಗಲಿಲ್ಲ, ವಿದ್ಯಾಭ್ಯಾಸ ಇಲ್ಲ.. ಹಾಗಾಗಿ ಕೆಲಸ ಸಿಗಲಿಲ್ಲ. ಈತನ ಬದುಕು ಅಕ್ಷರಶಃ ಬೀದಿಗೆ ಸೀಮಿತವಾಯಿತು.. ಕಸದ ತೊಟ್ಟಿಗಳಲ್ಲಿ ಬಿಸಾಕಿದ ಅಲ್ಪ ಸ್ವಲ್ಪ ಊಟವನ್ನು ತಿಂದು ಬದುಕುತ್ತಿದ್ದ. ಕೆಲವೊಮ್ಮೆ ಊಟ ಸಿಗದೇ ಹಸಿವಿನಿಂದ ಮಲಗುತ್ತಿದ್ದ.. ಆದರೆ ಒಂದು ದಿನ ಈ ಜೀವನ ಸಾಕು ಹೇಗಾದರೂ ಮಾಡಿ ಇದರಿಂದ ಆಚೆ ಬರಬೇಕು ಎಂದು ನಿರ್ಧರಿಸಿದ ಈತ ಹಿಡಿದಿದ್ದು ಒಂದು ಬಗೆಟ್ ಹಾಗೂ ಸ್ಪಾಂಜ್.

ನಿಮ್ಮ ಕಾರನ್ನು ಚೆನ್ನಾಗಿ ಕ್ಲೀನ್ ಮಾಡುತ್ತೇನೆ ನಿಮಗೆ ಇಷ್ಟ ಅನಿಸಿದಷ್ಟು ಹಣ ಕೊಡಿ ಸರ್ ಎಂದು ಕೈಯಲ್ಲಿ ಒಂದು ಬಗೆಟ್ ಹಾಗೂ ಸ್ಪಾಂಜ್ ಹಿಡಿದ ಬ್ರಿಯಾನ್ ಕಾರು ವಾಶ್ ಮಾಡುತ್ತಾ ಬದುಕುವ ಒಂದು ದಾರಿಯನ್ನು ಕಂಡುಕೊಂಡ.. ಈತನ ನಿಯತ್ತಿನ ಕೆಲಸ ನೋಡಿ ಸಂತೋಷಗೊಂಡ ಒಬ್ಬ ವ್ಯಕ್ತಿ ಆತನಿಗೆ ಕಾರ್ ವಾಷಿಂಗ್ ಗ್ಯಾರೇಜ್ ನಲ್ಲಿ ಕೆಲಸ ಕೊಡಿಸಿದ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಬ್ರಿಯಾನ್.. ನಂತರ ಫೆರಾರಿ ಗ್ಯಾರೇಜ್ ನಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಬ್ರಿಯಾನ್ ಜೀವನ ಬದಲಾಗಿ ಹೋಯಿತು..

ದುಬಾರಿ ಕಾರುಗಳನ್ನು ಹಾಗೂ ಅದರ ಬಿಡಿ ಭಾಗಗಳನ್ನು ಹೇಗೆ ಕ್ಲೀನ್ ಮಾಡಬೇಕು ಎನ್ನುವ ಸೂಕ್ಷ್ಮತೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡ ಬ್ರಿಯಾನ್ ದುಬಾರಿ ಕಾರು ವಾಷಿಂಗ್ ಮಾಡೋದ್ರಲ್ಲಿ ಪ್ರಸಿದ್ಧಿ ಗಳಿಸಿದ. ನಮ್ಮ ದುಬಾರಿ ಕಾರನ್ನು ಬ್ರಿಯಾನ್ ಕ್ಲೀನ್ ಮಾಡಬೇಕೆಂದು ಕಾರ್ ಓನರ್ಸ್ ಹೇಳುತ್ತಿದ್ದರು. ನಂತರ ಕೆಲಸಕ್ಕೆ ರಾಜಿನಾಮೆ ಕೊಟ್ಟು ತನಗೆ ಗೊತ್ತಿರುವ ವ್ಯಕ್ತಿಗಳ ದುಬಾರಿ ಕಾರುಗಳನ್ನು ಕ್ಲೀನ್ ಮಾಡಲು ಅರಂಭಿಸಿದ ಬ್ರಿಯಾನ್ ಈಗ ಕಾರು ವಾಷಿಂಗ್ ಕಿಂಗ್ ಆಗಿದ್ದಾರೆ..

ಫೆರಾರಿ ಸ್ಪೋರ್ಟ್ಸ್ ಕಾರ್, ಜಾಗ್ವಾರ್ ಈಗೆ ದುಬಾರಿ ಕಾರುಗಳನ್ನು ಕ್ಲೀನ್ ಮಾಡುವ ಈತ.. ಒಂದು ಕಾರನ್ನು ಕ್ಲೀನ್ ಮಾಡಲು 5 ಲಕ್ಷದ 70 ಸಾವಿರ ಚಾರ್ಜ್ ಮಾಡುತ್ತಾನೆ. ಹಾಲಿವುಡ್ ಸ್ಟಾರ್ಸ್ ಕಾರುಗಳನ್ನು ಸಹ ಕ್ಲೀನ್ ಮಾಡುವ ಈತ ಕಾರನ್ನು ಕ್ಲೀನ್ ಮಾಡುವ ಸಲುವಾಗಿಯೇ ಪ್ಯಾರಿಸ್, ಜರ್ಮನ್, ಹೈಲ್ಯಾಂಡ್, ದುಬೈ ದೇಶಗಳಿಗೆ ಪ್ರಯಾಣ ಬೆಳೆಸುತ್ತಾನೆ.. ಬಕೆಟ್ ಹಾಗೂ ಸ್ಪಾಂಜ್ ಬ್ರಿಯಾನ್ ಜೀವನ ಬದಲಾಯಿಸಿದೆ. ದುಡಿಯಲು ನೂರೆಂಟು ದಾರಿ ಹಾಗಾಗಿ ನಮ್ಮ ದಾರಿಯನ್ನು ನಾವೇ ಹುಡುಕಬೇಕು, ನಮ್ಮ ಆಟ ನಾವೇ ಆಡಬೇಕು.