Advertisements

ಕಲ್ಯಾಣಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋದ ವಧು !

Inspire

ನಮಸ್ತೇ ಸ್ನೇಹಿತರೇ, ಜೀವನದಲ್ಲಿ ಒಮ್ಮೆ ಬರುವ ಸಂಭ್ರಮ ಎಂದರೆ ಅದು ಮದುವೆ. ಇನ್ನು ಇದೆ ವೇಳೆ ಪರೀಕ್ಷೆ ಬಂದು ಬಿಟ್ಟರೆ. ಫಿಕ್ಸ್ ಆಗಿರುವ ಮದುವೆ ಕೂಡ ಕ್ಯಾನ್ಸಲ್ ಮಾಡೋಕ್ಕೆ ಆಗಲ್ಲ. ಜೊತೆಗೆ ಪರೀಕ್ಷೆ ಕೂಡ ಬಿಡೋ ಆಗಿಲ್ಲ. ಹೌದು, ಮಹೂರ್ತ ಮುಗಿದ ಬಳಿಕ ವಧು ಕಲ್ಯಾಣಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆಯನ್ನ ಬರೆದಿದ್ದಾರೆ. ಮಡಿಕೇರಿಯ ನಿವಾಸಿಯಾಗಿರುವ ಸ್ವಾತಿ ಎಂಬ ವಧು ತಮ್ಮ ಮದುವೆಯ ಮಹೂರ್ತ ಕಾರ್ಯಕ್ರಮ ಮುಗಿದಮೇಲೆ ಕಲ್ಯಾಣಮಂಟಪದಿಂದ ಮಡಿಕೇರಿಯಲ್ಲೇ ಇರುವ ಜೂನಿಯರ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯನ್ನ ಬರೆದಿದ್ದಾರೆ.

ಇನ್ನು ತಮ್ಮ ಮದುವೆಗೆ ಮುಂಚೆಯೇ ಸ್ಪರ್ಧಾತ್ಮಕ ಪರೀಕ್ಷೆಯನ್ನ ತೆಗೆದುಕೊಂಡಿದ್ದರು. ಆದರೆ ಇದೆ ವೇಳೆ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಎಂಬುವರೊಂದಿಗೆ ಮದುವೆ ನಿಚ್ಚಯವಾಗಿತ್ತು. ಆದರೆ ಪರೀಕ್ಷೆ ಇರುವ ದಿನದಂದೇ ಮದುವೆಯ ಮಹೂರ್ತ ಕೂಡ ಫಿಕ್ಸ್ ಆಗಿತ್ತು. ಬೆಳಿಗ್ಗೆ ೬.೩೦ರಿಂದ ೯ಗಂಟೆಯವರೆಗೆ ಮಹೂರ್ತದ ಫಿಕ್ಸ್ ಮಾಡಲಾಗಿತ್ತು. ಈ ಶುಭಲಗ್ನವನ್ನ ಪರೀಕ್ಷೆಗೆ ತೊಂದರೆಯಾಗದಂತೆ ಫಿಕ್ಸ್ ಮಾಡಲಾಗಿತ್ತು.

Advertisements

ಇನ್ನು ಸ್ವಾತಿಗೆ ಕುಟುಂಬದವರು ಕೂಡ ಧೈರ್ಯ ಕೊಟ್ಟಿದ್ದು ಮಹೂರ್ತ ಮುಗಿದ ಮೇಲೆ ಧಾರೆ ವಸ್ತ್ರದಲ್ಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಪರೀಕ್ಷೆಯನ್ನ ಎದುರಿಸಿದ್ದಾರೆ. ಇನ್ನು ವಧು ಸ್ವಾತಿ ಹೇಳುವ ಹಾಗೆ ನಾನು ಈ ಪರೀಕ್ಷೆಗಾಗಿ ೯ ತಿಂಗಳಿನಿಂದಲೇ ತಯಾರಾಗಿದ್ದೆ ಹಾಗೂ ಪರೀಕ್ಷೆಗೆ ಹಾಜರಾಗುವ ಸಲುವಾಗಿ ಮದುವೆಯ ಶಾಸ್ತ್ರಗಳನ್ನ ಬೇಗನೆ ಮುಗಿಸಲಾಗಿತ್ತು. ಇನ್ನು ನಾನು ಪರೀಕ್ಷೆಯನ್ನ ಚೆನ್ನಾಗಿಯೇ ಬರೆದಿದ್ದು ಪಾಸಾಗುವ ವಿಶ್ವಾಸ ಇದೆ ಎಂದು ನವ ವಧು ಸ್ವಾತಿ ಹೇಳಿದ್ದಾರೆ.