Advertisements

ಭರ್ಜರಿ ಡ್ಯಾನ್ಸ್ ಮೂಲಕ ಸೆನ್ಸೇಶನ್ ಸೃಷ್ಟಿಸಿದೆ ಅಣ್ಣ ತಂಗಿ !

Entertainment

ಎಲೆ ಮೇರ್ ಕಾಯಿಯಂತಿರುವ ಲಕ್ಷಾಂತರ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ತಮ್ಮ ವಿಭಿನ್ನ ಪ್ರತಿಭೆಯಿಂದ ಸಾಮಾನ್ಯ ಜನರು ಕೂಡ ರಾತ್ರೋ ರಾತ್ರಿ ಸ್ಟಾರ್ ಆಗುತ್ತಿದ್ದಾರೆ. ಈಗ ಟಿಕ್ ಟಾಕ್ ಜಾಲತಾಣದಲ್ಲಿ ಜಾರ್ಕಂಡ್ ನ ಅಣ್ಣ ತಂಗಿ ತಮ್ಮ ವಿಭಿನ್ನ ನೃತ್ಯದ ಮೂಲಕ ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಸೃಷ್ಟಿ ಮಾಡಿದ್ದಾರೆ. ಟಿಕ್ ಟಾಕ್ ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರುವ ಈ ಅಣ್ಣ ತಂಗಿ ಜೋಡಿಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Advertisements

ಯಾವುದೇ ಮೇಕಪ್, ಡ್ರೆಸ್ ಇಲ್ಲದೆಯೇ ತಮ್ಮ ಸಹಜ ಸೌಂದರ್ಯದಿಂದಲೇ ಚಿಕ್ಕದಾದ ಮನೆಯ ಮುಂದೆ ಹಾಡುಗಳಿಗೆ ಡಾನ್ಸ್ ಮಾಡುವ ಈ ಜೋಡಿ ಯಾವ ಸ್ಟಾರ್ ಗಳಿಗೂ ಕೂಡ ಕಡಿಮೆ ಇಲ್ಲ. ಇದೆ ಕಾರಣದಿಂದಲೇ ಈ ಅಣ್ಣ ತಂಗಿ ಜೋಡಿಯ ಡಾನ್ಸ್ ಗೆ ಅನೇಕರು ಮರುಳಾಗಿದ್ದಾರೆ. ಟಿಕ್ ಟಾಕ್ ವಿಡಿಯೋ ಮೂಲಕ ಲಕ್ಷಾಂತರ ಜನರನ್ನ ರಂಜಿಸುತ್ತಿದ್ದಾರೆ ಜಾರ್ಖಂಡ್ ನ ಸನಾತನ್​ ಕುಮಾರ್​  ಮತ್ತು ಆತನ ತಂಗಿ. ಇನ್ನು ಇವರ ನೃತ್ಯದ ವಿಡಿಯೊಗಳನ್ನ ಟ್ವಿಟ್ಟರ್ ನಲ್ಲೂ ಕೂಡ ಪೋಸ್ಟ್ ಮಾಡಿದ್ದು, ಅನೇಕರು ಇವರ ನೃತ್ಯಕ್ಕೆ ತಲೆಬಾಗಿದ್ದು, ಬಡತನದಲ್ಲಿ ಬೆಳೆದ ಪ್ರತಿಭೆಗಳು ಎಂದೆಲ್ಲಾ ಹೊಗಳುತ್ತಿದ್ದಾರೆ.

ಇವರ ಒಂದೊಂದು ವಿಡಿಯೋ ಲಕ್ಷಾಂತರ ವೀವ್ಸ್ ಗಳನ್ನ ಪಡೆದುಕೊಳ್ಳುತ್ತಿದ್ದು, ಟಿಕ್ ಟಾಕ್ ನಲ್ಲಿ 24 ಮಿಲಿಯನ್ಸ್​ ಲೈಕ್ಸ್​ಗಳನ್ನು ಈ ಅಣ್ಣ ತಂಗಿ ಜೋಡಿ ಪಡೆದುಕೊಂಡಿದ್ದಾರೆ. ಹಳೆಯ ಹಿಂದಿ ಚಿತ್ರದ ಹಾಡುಗಳಿಗೆ ನೃತ್ಯ ಮಾಡುವ ಇವರು, ಕಾಮಿಡಿ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.