Advertisements

ಚೀನಾ ವಸ್ತುಗಳ ಬಳಕೆ ನಿಷೇಧದಲ್ಲಿ ಮೊದಲ ಹೆಜ್ಜೆ ಇಟ್ಟ BSNL !

News

ಗಡಿಯಲ್ಲಿ ಕಾಲು ಕೆದರಿ ನಿಂತಿರುವ ಚೀನಾ ದೇಶದ ಯೋಧರು ಗಲ್ವಾನ್‌ ಕಣಿವೆಯಲ್ಲಿ ನಮ್ಮ ಭಾರತೀಯ ಯೋಧರೊಂದಿಗೆ ಕಾದಾಡಿಕೊಂಡಿದ್ದಾರೆ. ಇನ್ನು ಈ ಜಗಳದಲ್ಲಿ 20 ಭಾರತೀಯ ಹುತಾತ್ಮರಾಗಿದ್ದಾರೆ. ಇನ್ನು ಇದರ ಹಿನ್ನಲೆಯಲ್ಲಿ ಚೀನಾಕ್ಕೆ ಪಾಠ ಕಲಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಚೀನಾ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಹೌದು ಈಗ ನಾವೆಲ್ಲರೂ ಯೋಧರಾಗಬೇಕು..ಕುತಂತ್ರಿ ಚೀನಾ ದೇಶಕ್ಕೆ ಬುದ್ದಿ ಕಲಿಸಲೇಬೇಕು.

Advertisements

ಇನ್ನು ಇದೆಲ್ಲದರ ಬೆನ್ನಲ್ಲೇ BSNL ಸಂಸ್ಥೆ ಮಹತ್ವದ ನಿರ್ಧಾರ ತೆಗೆದುಕೊಂದಿದೆ. BSNL ಜಾಲವನ್ನ 4Gಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಬಳಸುವ ಮೇಡ್ ಇನ್ ಚೀನಾ ಉಪಕರಣಗಳನ್ನ ಬಳಸದಂತೆ ಬಿಎಸೆನ್ನೆಲ್ ಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ ಎಂದು ಹೇಳಲಾಗಿದೆ. ಇನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಸಲುವಾಗಿ ಬಿಎಸೆನ್ನೆಲ್ ಗೆ ಟೆಲಿಕಾಮ್ ಸಚಿವಾಲಯ ನಿರ್ದೇಶನ ನೀಡಲು ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

ಇನ್ನು ಭಾರತದಲ್ಲಿರುವ ಖಾಸಗಿ ಟೆಲಿಕಾಮ್ ಸಂಸ್ಥೆಗಳಾದ ಭಾರ್ತಿ ಏರ್ಟೆಲ್, ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳು ತಮ್ಮ ನೆಟ್ ವರ್ಕ್ ನಲ್ಲಿ ಚೀನಾ ದೇಶದ ಹುವೈ ಕಂಪನಿ ಜೊತೆ ಕೈ ಜೋಡಿಸಿವೆ. ಹಾಗಾಗಿ ಈ ಟೆಲಿಕಾಂ ಕಂಪನಿಗಳಿಗೆ ಚೀನಾದ ಕಂಪನಿಗಳ ಮೇಲೆ ಇರುವ ಅವಲಂಬನೆಯನ್ನ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಕೋರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.