ರಾಜ್ಯಸಭಾ ಚುನಾವಣೆ ಹಿನ್ನಲೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇನ್ನು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದಿಂದ ಈಗಾಗಲೇ ರಾಜ್ಯ ಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಬಿಜೆಪಿ ಹೈಕಮಾಂಡ್ ಗೆ ಕಳುಹಿಸಲಾಗಿತ್ತು. ಇನ್ನು ಇವರಲ್ಲಿ ಹಿರಿಯ ಶಾಸಕ ಉಮೇಶ್ ಕತ್ತಿ,ಅವರ ಸಹೋದರ ರಮೇಶ್ ಕಟ್ಟಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರನ್ನ ಫೈನಲ್ ಮಾಡಿ, ಮೂವರಲ್ಲಿ ಇಬ್ಬರ ಹೆಸರನ್ನ ಫೈನಲ್ ಮಾಡುವಂತೆ ಹೈಕಮಾಂಡ್ ಗೆ ಕಳುಹಿಸಲಾಗಿತ್ತು.

ಆದರೆ ಬಿಜೆಪಿ ಹೈ ಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದ್ದು, ಈ ಸಲದ ರಾಜ್ಯ ಸಭಾ ಚುನಾವಣೆಗೆ ಪಕ್ಷದ ಸಾಮಾನ್ಯ ಶಾಸಕರನ್ನ ಆಯ್ಕೆ ಮಾಡಿ ಕಳುಹಿಸಿರುವುದು ರಾಜ್ಯ ನಾಯಕರಲ್ಲಿ ಅಚ್ಚರು ಉಂಟುಮಾಡಿದೆ. ರಾಜ್ಯ ಬಿಜೆಪಿ ನಾಯಕರು ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಅಭ್ಯರ್ಥಿಗಳಿಗೆ ಹೈಕಮಾಂಡ್ ನಿಂದ ಟಿಕೆಟ್ ಸಿಕ್ಕಿದೆ. ಅವರು ಬೆಳಗಾವಿಯ ಈರಣ್ಣ ಕಡಾಡಿ ಮತ್ತು ರಾಯಚೂರಿನ ಅಶೋಕ್ ಗಸ್ತಿ .

ಆರ್ಎಸ್ಎಸ್ ಸಂಘ ನಿಷ್ಠರು ಎಂದು ಹೇಳಲಾದ ಈ ಇಬ್ಬರು ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ರಾಜ್ಯದಲ್ಲಿ ಗರಿಗೆದರಿದ್ದ ಬಣಗಳ ರಾಜಕೀಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ. ಇನ್ನು ಬೆಳಗಾವಿಯ ಈರಣ್ಣ ಕಡಾಡಿ ಲಿಂಗಾಯತ ಸಮಾಜಕ್ಕೆ ಸೇರಿದ್ದರೆ, ರಾಯಚೂರಿನ ಅಶೋಕ್ ಗಸ್ತಿ ಅವರು ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದು ಸವಿತಾ ಸಮಾಜಕ್ಕೆ ಸೇರಿದವರಾಗಿದ್ದಾರೆ. ಇನ್ನು ಹೈಕಮಾಂಡ್ ರಾಜ್ಯ ಸಭಾ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಗಳ ಆಯ್ಕೆ ಮಾಡುವ ಮೂಲಕ ರಾಜ್ಯದ ಪಕ್ಷದ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.