Advertisements

ನಿಮಗೆ ಜ್ಯಾಸ್ತಿ ಕೋಪ ಇದ್ದರೆ.. ಅಥವಾ ಯಾರಾದ್ರು ನಿಮ್ಮನ್ನ ತುಂಬಾ ಬೈಯುತ್ತಾ ಇದ್ದರೆ! ಈ ರೀತಿ ಮಾಡಿ ಸಾಕು..

Kannada Mahiti

ಪ್ರಿಯ ಓದುಗರೆ ಭಗವಾನ್ ಬುದ್ಧನ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಎಲ್ಲರೂ ಚಿಕ್ಕಂದಿನಿಂದ ಬುದ್ಧನ ಕಥೆ ಕೇಳುತ್ತಲೇ ಬಂದಿರುತ್ತೀರಿ. ಆದರೂ ಒಂದು ಸಂದರ್ಭವನ್ನು ನಿಮಗೆ ನೆನಪಿಸುತ್ತೇನೆ. ಇದನ್ನು ಎಲ್ಲರೂ ಅನುಸರಿಸಿದರೆ ನೋವು, ದುಃಖವನ್ನು ದೂರವಾಗಿಸಬಹುದು. ಇಂದಿನ ಯುಗದಲ್ಲಿ ನೇರವಾಗಿ ನಡೆದರೆ ನೋಡಿ ಎದೆಯುಬ್ಬಿಸಿ ನಡೆಯುತ್ತಿದ್ದಾನೆ. ಅವನಿಗೆ ಅದೆಷ್ಟು ಅ’ಹಂಕಾರ ಎನ್ನುತ್ತಾರೆ. ಅದೇ ತಲೆಬಗ್ಗಿಸಿ ನಡೆದರೆ ಮಳ್ಳ ಕುರಿ ಇಂದಾಗ ಇದ್ದಾನ. ನಾಲೆಜ್ ಇಲ್ಲಾ. ಜೀವನದಲ್ಲಿ ಉದ್ದಾರ ಆಗಲ್ಲ ಎನ್ನುವರು. ಹೇಗಿದ್ದರೂ ಒಂದು ಮಾತು ಹೇಳುವರು. ಇಂತವರಿಗೆ ಭಗವನ ಬುದ್ಧ ಹೇಳಿದಂತೆ ಹೇಳಬೇಕು. ಅಂದಹಾಗೆ ಅಂತವರಿಗೆ ಬುದ್ಧ ಏನೆಂದು ಹೇಳಿದರು.ಬುದ್ಧ ಭಗವಾನ್ ಅವರು ಒಬ್ಬ ಮಹಾರಾಜರಾಗಿದ್ದರು. ಆಸ್ತಿ ಅಂತಸ್ತು ಅದೆಲ್ಲವನ್ನು ತ್ಯಾಗಮಾಡಿ ಭೌದ್ಧ ಧರ್ಮವನ್ನು ಸ್ಥಾಪಿಸಿದರು.

[widget id=”custom_html-3″]

Advertisements

ಭಿಕ್ಷೆ ಬೇಡುತ್ತಾ ಜ್ಞಾನವನ್ನು ಊರಿಗೆಲ್ಲ, ನಾಡಿಗೆಲ್ಲ ಸಾರುತ್ತಾ ಸಾಗಿದರು. ಶಿಷ್ಯರನ್ನು ಒಳಗೊಂಡು ಭಿಕ್ಷೆ ಬೇಡುವುದು ಇವರ ಕಾಯಕ. ಒಂದು ಊರಲ್ಲಿ ಬಿಕ್ಷೆ ಬೇಡಲೆಂದು ಒಂದು ಮನೆಗೆ ಹೋಗುತ್ತಾರೆ. ಆ ಮನೆಯ ಒಡತಿ ಯಾವುದೋ ವಿಷಯದಲ್ಲಿ ಕೋಪಗೊಂಡ ಸ್ಥಿತಿಯಲ್ಲಿದ್ದಳು. ಇದೇ ಸಮಯದಲ್ಲಿ ಬುದ್ಧ ಭಗವಾನರು ಭಿಕ್ಷೆ ಕೇಳುತ್ತಾರೆ. ಆದಕ್ಕೆ ಆ ಒಡತಿ ಕೋಪಗೊಂಡು ಇಷ್ಟೊಂದು ಚೆನ್ನಾಗಿರುವೆ ಭಿಕ್ಷೆ ಬೇಡಿಕೊಂಡು ತಿರಗಾಡಲು ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಕೋಪದಲ್ಲಿ ಬೈಯುತ್ತಾಳೆ. ಇದನ್ನು ಕೇವಲ ಮುಗುಳುನಗೆ ಯೊಂದಿಗೆ ಶಾಂತವಾಗಿ ಬುದ್ಧ ಭಗವಾನರು ಸ್ವೀಕರಿಸುತ್ತಾರೆ. ಅಮ್ಮ ನೀಮ್ಮ ಮಾತು ಮುಗಿದಿದ್ದರೆ ನನ್ನದೊಂತು ಮಾತು ಇದೆ ಕೇಳುವಿರಾ ಎನ್ನುತ್ತಾರೆ. ಅದಕ್ಕೆ ಆ ಒಡತಿ ಹುಮ್ಮ್ ಹೇಳಿ ಎಂದು ಕೋಪದಿಂದ ಹೇಳುತ್ತಾಳೆ. ಬುದ್ಧ ಭಗವಾನರು ವಡತಿಗೆ ಕೇಳುತ್ತಾರೆ, ಈ ಭಿಕ್ಷಾಪಾತ್ರೆಯನ್ನು ನಾನು ನಿಮಗೆ ನೀಡಲು ಬಂದಾಗ ನೀವು ಬೇಡ ಎಂದರೆ ಅದು ಏನಾಗುತ್ತದೆ ಎಂದು ಕೇಳುತ್ತಾರೆ.

[widget id=”custom_html-3″]

ಏನಾಗುತ್ತೆ ನೀವೇ ಹೇಳಿ ಎಂದು ಒಡತಿ ಕೋಪದಿಂದ ವರ್ತಿಸುತ್ತಾಳೆ. ಆಗ ಭಗವಾನ್ ಬುದ್ಧ ನೀವು ನನಗೆ ಈ ಬಿಕ್ಷಾಪಾತ್ರೆ ಬೇಡ ಎಂದಾಗ ಅದು ನನ್ನ ಬಳಿಯೇ ಉಳಿಯುತ್ತದೆ. ಹಾಗೆ ಇಷ್ಟೊತ್ತು ನೀವು ನನಗೆ ಬೈದಿರೋದು ನನಗೆ ಬೇಡ ಎಂದಾದರೆ ಅದು ನಿಮ್ಮ ಬಳಿಯೇ ಉಳಿಯುತ್ತದೆ ಅಲ್ಲವೇ. ಎಂದು ಹೇಳಿ ಬುದ್ಧನು ಮುಂದೆ ಸಾಗುತ್ತಾನೆ. ಬುದ್ಧನ ಮಾತು ಕೇಳಿದ ಒಡತಿಗೆ ತನ್ನ ತಪ್ಪಿನ ಅರಿವಾಗಿ ಜ್ಞಾನೋದಯವಾಗುತ್ತದೆ. ಈ ಕಥೆಯ ತಾತ್ಪರ್ಯವಿಷ್ಟೇ, ನಮಗೆ ಬೇರೆ ಯಾರಾದರೂ ಬೈದರೆ, ನಿಂದಿಸಿದರೆ ಅದನ್ನು ನಾವು ಸ್ವೀಕರಿಸಿದೆ ಅದನ್ನು ತಿರಸ್ಕರಿಸಿದ್ದರಾಯಿತು. ಅದು ನನಗಲ್ಲ ಎಂದರೆ ಮನುಷ್ಯ ನೋವಿನಿಂದ ಬಳಲುವುದು ತಪ್ಪುತ್ತದೆ. ಬೇಡದ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಬುದ್ಧ ಭಗವಾನರ ಈ ರೀತಿ ಹೇಳಿದ್ದಾರೆ. ನೀವು ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನೆಮ್ಮದಿಯಿಂದ ಬಾಳಿರಿ.