ನಮಸ್ತೆ ಸ್ನೇಹಿತರೆ, ಹಸಿವು ದೈರ್ಯ ಛಲ ಮತ್ತು ಗುರಿ ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ.. ಅದಕ್ಕೆ ತಾಜಾ ಉದಾಹರಣೆ.. ಬೆಳಗ್ಗೆ ಎದ್ದು 15 ಬಸ್ ಗಳನ್ನು ಕ್ಲೀನ್ ಮಾಡಿ ಕಸ ಗುಡಿಸುತ್ತಿದ್ದ ಹುಡುಗ ಈಗ ಅದ್ಬುತ ನಟನಾಗಿ ಬೆಳೆದಿದ್ದಾರೆ. ಅವರು ಯಾರು ಗೊತ್ತಾ? ಜೀವನದಲ್ಲಿ ಏನೋ ಒಂದು ಆಗಬೇಕು ಎಂದು ತನಗಿದ್ದ ಒಂದು ಸೈಕಲ್ ಅನ್ನು ಮಾರಾಟ ಮಾಡಿ ಬೆಂಗಳೂರಿಗೆ ಬಸ್ ಹತ್ತಿದ ಈ ಹುಡುಗ ಬಂದು ತಲುಪಿದ್ದು ಮೆಜೆಸ್ಟಿಕ್ ಗೆ.. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಗೊತ್ತಿಲ್ಲ. ಮತ್ತೆ ಬಿಎಮ್ ಟಿಸಿ ಬಸ್ ಹತ್ತಿದ ಹುಡುಗ ಇಳಿದಿದ್ದು ಯಶ್ವಂತ್ ಪುರ ಬಸ್ ಸ್ಟ್ಯಾಂಡ್ ನಲ್ಲಿ.. ಯಶ್ವಂತ ಪುರದಲ್ಲಿ ಯಾರು ಗೊತ್ತಿಲ್ಲ. ಮಲಗೋಕೆ ಜಾಗ ಕೂಡ ಇಲ್ಲಾ..

ಆದರೆ ಇದಕ್ಕೆಲ್ಲಾ ಹೆದರದ ಈ ಹುಡುಗ ಹಸಿವು ನೀಗಿಸಿಕೊಳ್ಳುವುದಕ್ಕಾಗಿ ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲಾ ಮಾಡಿದರು. ಯಶ್ವಂತ್ ಪುರ ಗೋಪಾಲ್ ಥಿಯೇಟರ್ ನಲ್ಲಿ ಲೈಟ್ ಬಾಯ್ ಆಗಿ. ಊವಿನ ಡೆಕೋರೆಟ್ ಆಗಿ ಕೆಲಸ ಮಾಡುತ್ತಿದ್ದರು.. ಅಷ್ಟೇ ಅಲ್ಲದೇ ಈ ಹುಡುಗ ಬೆಳಗ್ಗೆ ಎದ್ದು ಯಶ್ವಂತ್ ಪುರ ಬಸ್ ಸ್ಯ್ಟಾಂಡ್ ನಲ್ಲಿ 15 ಬಸ್ ಗಳನ್ನು ಕ್ಲೀನ್ ಮಾಡಿ ಕಸ ಗುಡಿಸುತ್ತಿದ್ದ. ಕೊನೆಗೆ ಈ ಹುಡುಗನಿಗೆ ಒಳ್ಳೆಯ ದಿನ ಬಂತು.. ನಿನಾಸಂ ನಲ್ಲಿ ಸೀಟ್ ಸಿಕ್ಕಿತು. ಅಲ್ಲಿ ಕಲೆಯನ್ನು ಕರಗತ ಮಾಡಿಕೊಂಡು ಚಿತ್ರರಂಗದಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿದರು ಕೊನೆಗೆ ಲೂಸಿಯಾ ಮೂಲಕ ನಟನಾಗಿ ಈಗ ಕನ್ನಡದ ಬೇಡಿಕೆಯ ಹೀರೋ ಆಗಿ ಬೆಳೆದಿರುವ ಅಪ್ರತಿಮ ಪ್ರತಿಭೆ ಯಾರು ಗೊತ್ತಾ?

ನಿನಾಸಂ ಸತೀಶ್.. ಹಸಿವು ಸತೀಶ್ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಅವರ ಛಲಕ್ಕೆ ದೈರ್ಯಕ್ಕೆ ಒಂದು ಸೆಲ್ಯೂಟ್ ಹೊಡೆಯಲೇ ಬೇಕು.. ಒಳ್ಳೆಯ ಕಥಾ ವಸ್ತುವನ್ನೇ ಆಯ್ದುಕೊಂಡು ಕನ್ನಡ ಚಿತ್ರರಂಗದಲ್ಲಿ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿರುವ ನಿನಸಾಂ ಸತೀಶ್ ಅವರ ಜೀವನದ ಕಥೆ ಮಾಯಾ ಲೋಕದಲ್ಲಿ ಸ್ಟಾರ್ ಆಗುವ ಕನಸು ಕಾಣುತ್ತಾ ಗಾಂಧಿ ನಗರದಲ್ಲಿ ತಿರುಗಾಡುತ್ತಿರುವ ಅದೆಷ್ಟೋ ಹುಡುಗರಿಗೆ ಸ್ಪೂರ್ತಿದಾಯಕ. ನೀನಾಸಂ ಸತೀಶ್ ಅವರ ಬಗ್ಗೆ ಅವರ ಸಾಧನೆ ಬಗ್ಗೆ ನೀವೇನು ಹೇಳಲು ಇಷ್ಟ ಪಡ್ತೀರಾ.